ಕಪ್ಪು ಮನಸ್ಸುಗಳನ್ನು ಹಿಡಿದು ಶ್ವೇತ ಬಣ್ಣ ಹಚ್ಚಬೇಕು
ಗುರುತಿಸಲಾಗದವರನ್ನ ಹಿಡಿದು ಕನ್ನಡಿಯ ಮುಂದೆ ನಿಲ್ಲಿಸಬೇಕು
ದೂರವಾದವರನ್ನು ಹಿಡಿದು ಅಳತೆಯ ಸೂತ್ರ ವಾಕ್ಯ ತಿಳಿಸಬೇಕು
ದುಷ್ಟ ಮನಸ್ಸುಗಳನ್ನು ಸದೆಬಡಿದು ಮಳೆ ಬಿಸಿಲನ್ನು ತಾಗಿಸಬೇಕು
ಮೌನದಿಂದ ಬೇಲಿಹಾಕಿದವರಿಗೆ ಭೂಮಿಯ ಹಕ್ಕುಗಳನ್ನು ತಿಳಿಸಬೇಕು
ಸಂಬಂಧಕ್ಕೆ ಬೆಲೆ ನೀಡದವರನ್ನು ಭಂದಿಸಿ ಶಾಖ ನೀಡಿ ಹಗಲಿನಲ್ಲಿರಿಸಬೇಕು
ಅರ್ಥವಾಗಿಯೂ ಅರ್ಥ ಮಾಡದವರನ್ನು ರಾತ್ರಿಯಲ್ಲಿ ಎಚ್ಚರಿಸಿ ನಿನು ಆರಾಮವೇ? ಎಂದು ವಿಚಾರಿಸಬೇಕು
ಮಾನವನಾಗಲು ಸಾಧ್ಯವಾಗದವರನ್ನು ಹಿಡಿದು ಅಲ್ಪ ವಿಷವನ್ನು ಬೆರಕೆ ಮಾಡಿ ಕೊಡಬೇಕು
ನನಗೊಮ್ಮೆ ಮಲಗಲು ಒಮ್ಮೆಯಾದರೂ ಮುಗ್ಧವಾಗಿ ಮುಗುಳ್ನಗಲು
— ಸಹದ್ ಕರ್ನೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.