ಮಂಜೇಶ್ವರ (www.vknews.in) : ಎರಡು ವರ್ಷಗಳ ಹಿಂದೆ ಸೀತಾಂಗೋಳಿ ಮುಗುವಿನ ಅಬೂಬಕ್ಕರ್ ಸಿದ್ದೀಕ್ ಅವರನ್ನು ಪೈವಳಿಗೈಯಲ್ಲಿ ಮರಕ್ಕೆ ಕಟ್ಟಿ ಕೊಲೆಗೈದ ಪ್ರಕರಣದಲ್ಲಿ ತಲೆಮರೆಸಿಕೊಂಡಿದ್ದ ಆರೋಪಿ ನ್ಯಾಯಾಲಯಕ್ಕೆ ಶರಣಾಗಿದ್ದಾನೆ. ಆರಿಕ್ಕಾಡಿ ಕಂಚಿಕಟ್ಟೆ ರಸ್ತೆಯ ಅಬ್ದುಲ್ ರಝಾಕ್ (29) ಕಾಸರಗೋಡು ನ್ಯಾಯಾಲಯಕ್ಕೆ ಶರಣಾದವರು.
ಹೆಚ್ಚಿನ ವಿಚಾರಣೆಗಾಗಿ ಮಂಜೇಶ್ವರಂ ಪೊಲೀಸರು ಆರೋಪಿಯನ್ನು ವಶಕ್ಕೆ ತೆಗೆದುಕೊಂಡಿದ್ದಾರೆ. ಚಿನ್ನ ಕಳ್ಳಸಾಗಣೆಗೆ ಸಂಬಂಧಿಸಿದ ವಿವಾದದ ಹಿನ್ನೆಲೆಯಲ್ಲಿ ಅಬೂಬಕರ್ ಸಿದ್ದೀಕ್ ಅವರನ್ನು 11 ಸದಸ್ಯರ ತಂಡ ಕರೆಸಿ ಮರಕ್ಕೆ ತಲೆ ಕಟ್ಟಿ ಹಾಕಿ ಬರ್ಬರವಾಗಿ ಹೊಡೆದು ಕೊಂದಿತ್ತು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.