(www.vknews. in) ; KIC ಓಮನ್ ಸಮಿತಿ ಅಹ್ಲನ್ ರಮಳಾನ್ ಕಾರ್ಯಕ್ರಮದ ಸ್ವಾಗತ ಸಮಿತಿ ರಚನಾ ಸಭೆಯು ದಿನಾಂಕ 26-01-2024 ನೇ ಶುಕ್ರವಾರ ಜುಮಾ ನಮಾಜಿನ ಬಳಿಕ ಬೊಶರ್ ಸುನ್ನಿ ಸೆಂಟರ್ ಆಫೀಸ್ ಸಭಾಂಗಣದಲ್ಲಿ ನಡೆಯಿತು ಬಹುಮಾನ್ಯ ಶೈಖ್ ಅಬ್ದುಲ್ ರಹ್ಮಾನ್ ಉಸ್ತಾದರು ಅಧ್ಯಕ್ಷ ಸ್ಥಾನವನ್ನು ಅಲಂಕರಿಸಿದ ಸಭೆಯಲ್ಲಿ ಅಶ್ರಫ್ ಪರ್ಲಡ್ಕರವರು ಆಗಮಿಸಿದ ಸದಸ್ಯರನ್ನು ಸಭೆಗೆ ಬರಮಾಡಿಕೊಂಡರು
ಈ ಸಭೆಯಲ್ಲಿ ಪ್ರಧಾನ ಚರ್ಚಾ ವಿಷಯವಾದ ಅಹ್ಲನ್ ರಮಳಾನ್ ಕಾರ್ಯಕ್ರಮದ ಸ್ವಾಗತ ಸಮಿತಿ ಸಭೆಯನ್ನು ನಡೆಸುವುದೆಂದು ತೀರ್ಮಾನಿಸಿ ಈ ಕಾರ್ಯಕ್ರಮಕ್ಕೆ ಸ್ವಾಗತ ಸಮಿತಿ ರಚಿಸಲಾಯಿತು . ಅದರಂತೆ ಚೇರ್ ಮ್ಯಾನ್ ಆಗಿ ಷರೀಫ್ ಸಾಲ್ಮರ ರವರು ಸರ್ವಾನುಮತದಿಂದ ಆಯ್ಕೆಯಾದರೆ gentral ಕನ್ವಿನರ್ ಆಗಿ ಕಲಂದರ್ ಮಂಗಳೂರು /ಫೈನಾನ್ಸ್ ಕಂಟ್ರೋಲ್ ರಾಗಿ ಬಷೀರ್ ತಿಂಗಳಾಡಿ ಅವರನ್ನು ಆಯ್ಕೆ ಮಾಡಲಾಯಿತು
kic ಓಮನ್ ಸಮಿತಿ ಅಹ್ಲನ್ ರಮಳಾನ್ ಕಾರ್ಯಕ್ರಮವು ದಿನಾಂಕ — 01-03-2024 ನೇ ಶುಕ್ರವಾರ ಮಗ್ರಿಬ್ ನಮಾಜಿನ ಬಳಿಕ ಅಲ್ ಕುವೈರ್ ನಲ್ಲಿರುವ ಝಕಿರ್ ಮಾಲ್ ನಲ್ಲಿರುವ ಸಭಾಂಗಣದಲ್ಲಿ ಜರಗಲಿರುವುದು
ಈ ಕಾರ್ಯಕ್ರಮಕ್ಕೆ ಬಹುಮಾನ್ಯ ಮುಹಮ್ಮದ್ ಹನೀಫ್ ನಿಝಮಿ ಉಸ್ತಾದ್ ರವರು ಮುಖ್ಯ ಪ್ರಭಾಷಣಕಾರಾಗಿಯೂ kic ಸ್ಥಾಪನೆಯ ಪ್ರಚಾರಾರ್ಥವಾಗಿ kic ಇದರ ಸಂಘಟನಾ ಕಾರ್ಯದರ್ಶಿ ಅನೀಸ್ ಕೌಸರಿ ಉಸ್ತಾದ್ ರವರನ್ನು ಕರೆಸುವುದೆಂದು ತೀರ್ಮಾನ ಕೈಗೊಳ್ಳಲಾಯಿತು ಸಭೆಯಲ್ಲಿ Kic ಓಮನ್ ಸಮಿತಿ ಪ್ರಧಾನ ಕಾರ್ಯದರ್ಶಿ ಶುಕೂರ್ ಹಾಜಿ ಕಣ್ಣೂರು ಕೋಶಾಧಿಕಾರಿ ಝುಬೈರ್ ಹಾಜಿ ತಿಂಗಳಾಡಿ ಇಲ್ಯಾಸ್ ಕಡಬ ಮೊಯಿದಿನ್ ಕೊಕ್ಕಡ ತಮೀಮ್ ನೀರ್ಕಜೆ ಫಯಾಜ್ ಬೈತಡ್ಕ ಇರ್ಶಾದ್ ಕೂರ್ನಡ್ಕ. ಮುಸ್ತಫ ಪರ್ಲಡ್ಕ ಉಪಸ್ಥಿತರಿದ್ದರು. ಕೊನೆಯದಾಗಿ ಇಮ್ತಿಯಾಜ್ ಬಪ್ಪಳಿಗೆ ವಂದಿಸಿ ಮೂರು ಸ್ವಲಾತಿನೊಂದಿಗೆ ಕಾರ್ಯಕ್ರಮ ಮುಕ್ತಾಯ ಗೊಳಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.