(www.vknews. in); ಅರಂತೋಡು ಜಮಾಯತ್ ಸೌದಿ ಸಮಿತಿಯ ವಾರ್ಷಿಕ ಮಹಾಸಭೆಯು ಸಂಸ್ಥೆಯ ಅಧ್ಯಕ್ಷರಾದ ಅಝೀಝ್ ಗೂನಡ್ಕರವರ ದಮಾಮ್ ನಿವಾಸದಲ್ಲಿ ಜ. 20 ರಂದು ನಡೆಯಿತು. ಆಝರ್ ಉಸ್ತಾದ್ ಅಡಿಮರಡ್ಕ ರವರು ದುಹಾ ನೆರವೇರಿಸಿ ಕಾರ್ಯಕ್ರಮಕ್ಕೆ ಶುಭ ಕೊರಿದರು. ಸಮೀತಿಯ ಪ್ರಧಾನ ಕಾರ್ಯದರ್ಶಿ ಇಷಾಕ್ ಅರಂತೋಡು ರವರು ಸ್ವಾಗತಸಿ, ಕಳೆದ ವರ್ಷದ ಲೆಕ್ಕ ಪತ್ರ ಮಂಡಿಸಿ ಸಮೀತಿಯ ಅಂಗೀಕಾರ ಪಡೆದರು.
ಗೌರವಾಧ್ಯಕ್ಷ, ಕಮಾಲ್ ಪಾರೆಕ್ಕಲ್ ಮಾತನಾಡಿ, ಸೌದಿ ಕಮೀಟಿಯಲ್ಲಿ ಊರಿನ ಬೆರಳೆಣಿಕೆಯಷ್ಟು ಸದಸ್ಯರು ಇದ್ದರೂ, ಜಮಾಯತ್ ಕಮೀಟಿಯ ಹಲವಾರು ಕಾರ್ಯಕ್ರಮಗಳಿಗೆ ಅಲ್ಲಾಹನ ಅನುಗ್ರಹದಿಂದ ನಮ್ಮಿದಾಗುವ ಗರಿಷ್ಠ ಮೊತ್ತವನ್ನ ಕಳಿಸಿ ಕೊಡವಲ್ಲಿ ನಾವು ಸಫಲರಾಗಿದ್ದೇವೆ. ಮುಂದೆಯೂ ಕೂಡ ಸಹಾಯ ಸಹಕಾರ ನೀಡಲು ನಾವೆಲ್ಲರೂ ಕೈ ಜೋಡಿಸೋಣ ಎಂದರು.
ಸಮೀತಿಯ ವರ್ಕಿಂಗ್ ಸೆಕ್ರೆಟರಿ ಜಾವೆದ್ ಪೆಲ್ತಡ್ಕ , ಕಜಾಂಜಿ ಹಬೀಬ್ ಗುಂಡಿ, ನಿರ್ದೇಶಕ ರಾದ, ಸಾಲಿ ಆರಂತೋಡು ಕಾರ್ಯಕ್ರಮದಲ್ಲಿ ಭಾಗವಸಿ ಹಲವಾರು ಸಲಹೆ ಸೂಚನೆ ಗಳನ್ಶು ನೀಡಿದರು. ಸೌದಿ ಕಮೀಟಿಯ ಅಧ್ಯಕ್ಷರಾದ ಅಝೀಝ್ ಗೂನಡ್ಕರವರು ಮಾತನಾಡುತ್ತ, ಸದ್ರಿ ಸಂಸ್ಥೆ ಕಳೆದ 12 ವರ್ಷದಲ್ಲಿ ಹಲವಾರು ಸಮಾಜ ಮುಖಿ ಕಾರ್ಯಕ್ರಮಗಳನ್ನು ಮಾತ್ರ್ ಸಂಸ್ಥೆಯ ಸಹಕಾರದಿಂದ ಕಾರ್ಯರೂಪಕ್ಕೆ ತರುವಲ್ಲಿ ಯಶಸ್ಸನ್ನು ಕಂಡಿದೆ. ನಮ್ಮ ಕಮೀಟಿಯು ಜಮಾಯತ್ ಮತ್ತು ಯಂಗ್ ಮೆನ್ ಆಸೋಸಿಯೇಷನ ಒಂದು ಭರವಸೆಯ ಸಂಸ್ಥೆಯಾಗಿ ಬೆಳೆಯುತ್ತಿದ್ದು, ಜಮಾಯತಿನಿಂದ ಕಳಿಹಿಸಿ ಕೊಡುವ ಎಲ್ಲಾ ಅರ್ಜಿಗಳನ್ನುಅತ್ಯಂತ ಪ್ರೀತಿಯಿಂದ ಸ್ವೀಗರಿಸಿ ನಮ್ಮಿಂದಾಗುವ ಸಹಕಾರವನ್ನು ನೀಡುತ್ತ ಬಂದಿದ್ದೇವೆ ಎಂದರು.
ಸೌದಿ ಕಮಿಟಿಯ ಪ್ರಮುಖ ಯೋಜನೆಗಳಲ್ಲೊಂದ್ದಾದ ವಿಧವಾ ವೇತನ ಸ್ಕೀಮ್ ಎರಡು ವರ್ಷಗಳ ಹಿಂದೆ ಆರಂಭಿಸಿ ಯಶಸ್ವಿಯಾಗಿ ಮುನ್ನಡೆಯುತ್ತಿದೆ. ಯಾವುದೇ ಅಡೆ ತಡೆ ಇಲ್ಲದೆ ಪ್ರತಿ ತಿಂಗಳು ಜಮಾಯತ್ತ್ ಸಿಫಾರಸ್ಸು ಮಾಡಿದ ಎರಡು ವಿಧವೆಯರಿಗೆ ತಲಾ 2000/- ರೂಪಾಯಿ ಸರಿಯಾದ ಸಮಯಕ್ಕೆ ತಲುಪುತ್ತಿರುವುಹುದು ನಮಗೆಲ್ಲ ತುಂಬಾ ಸಂತೋಷವನ್ನು ನೀಡಿದೆ ಎಂದರು. ಇಂಶಾ ಅಲ್ಲಹಾ ಇನ್ನೂ ಮುಂದೆಯೂ ಕೂಡ ಇಂತಹ ಜನಪರ ಅನೇಕ ಯಾಶಸ್ವಿ ಯೋಜನೆಗಳ್ಳನ್ನು ಮಾತ್ರ್ ಸಂಸ್ಥೆಯ ಮಾರ್ಗದರ್ಶನದಲ್ಲಿ ಜಾರಿಗೋಳಿಸಿ ಊರಿಗೆ ಮತ್ತು ಸಮುದಾಯಕ್ಕೆ ಮಾದರಿಯಾಗೊಣ ಎಂದರು. ಕಾರ್ಯಕ್ರಮದಲ್ಲಿ ಇತ್ತೀಚಿಗೆ ಊರಿಂದ ಉದ್ಯೋಗ ನಿಮಿತ್ತ ತಲುಪಿದ ರವೂಫ್ ಸಣ್ಣಮನೆಯವರನ್ನು ಸ್ವಾಗತಸಿ ಸಮೀತಿಯ ನಿರ್ದೇಶಕರಾಗಿ ನೇಮಿಸಲಾಯಿತು.
ನಂತರ ಸದಸ್ಯರ ಅಭಿಪ್ರಾಯ ಪಡೆದು , ಸದ್ರಿ ಸಮೀತಿಯನ್ನು ಮುಂದಿನ ಸಾಲಿಗೆ ಪುನರಾಯ್ಕೆ ಮಾಡಲಾಯಿತು. ಅದರಂತೆ, ಗೌರವಾಧ್ಯಕ್ಷರಾಗಿ ಕಮಾಲ್ ಪಾರೆಕ್ಕಲ್ ,ಅಧ್ಯಕ್ಷರಾಗಿ ಅಝೀಝ್ ಗೂನಡ್ಕ, ಸಲಹಾ ಸಮೀತಿ ಅಧ್ಯಕ್ಷರಾಗಿ ಅಝರ್ ಉಸ್ತಾದ್ ಅಡಿಮರಡ್ಕ, ಪ್ರದಾನ ಕಾರ್ಯದರ್ಶಿಯಾಗಿ ಇಸಾಕ್ ಅರಂತೋಡು, ವರ್ಕಿಂಗ್ ಕಾರ್ಯದರ್ಶಿಯಾಗಿ ಜಾವೇದ್ ಪೆಲತಡ್ಕ, ಕೋಶಾದಿಲಾರಿಯಾಗಿ ಹಬೀಬ್ ಗುಂಡಿ ಮತ್ತು ನಿರ್ದೇಶಕರಾಗಿ ಸಾಲಿ ಆರಂತೋಡು ಹಾಗೂ ರೌವೂಫ್ ಸಣ್ಣಮನೆ ರವರನ್ನು ಆಯ್ಕೆ ಮಾಡಲಾಯಿತು.
ಪಂಚ ಯೋಜನೆಗಳು -2024-25
ಈ ಸಾರಿಯ ಕೆಳಗಿನ 5 ಪ್ರಧಾನ ಯೋಜನೇಗಳನ್ನು ಕೂಡಲೇ ಕಾರ್ಯರೂಪಕ್ಕೆ ತರಲು ಸಭೆಯಲ್ಲಿ ತೀರ್ಮಾನಿಸಲಾಯಿತು.
1. ಜಮಾಯತ್ ಕಮೀಟಿ ಸಿಫಾರಸ್ಸು ಮಾಡುವ ಊರಿನ ಎರಡು ಬಡ ರೋಗಿಯ ಮಾಸಿಕ ಔಷಧಿ ಖರ್ಚುನ್ನು ಬರಿಸುವುದು. 2. ಜಮಾಯತ್ತು ಸೀಫಾರಸ್ಸು ಮಾಡುವ ಒಂದು ಬಡ ಅರ್ಹ ರೋಗಿಗೆ ವೀಲ್ ಚೇರ್ ನೀಡುವುದು. 3. ಜಮಾಯತ್ ಕಮೀಟಿ ಸಿಫಾರಸ್ಸು ಮಾಡು ವ ಒಂದು ಬಡ ಕುಟುಂಬಕ್ಕೆ ಶೌಚಾಲಯ ನಿರ್ಮಿಸಲು ಧನ ಸಹಾಯ ಮಾಡುವುಹುದು. 4. ಈಗಾಗಲೇ ಕೊಡುತ್ತಿರುವ ವಿಧವಾ ವೇತನವನ್ನು ಮುಂದಿನ ಅವದಿವರೆಗೆ ವಿಸ್ತರಿಸುವುದು. 5. ರಾಮ್ ಲಾನ್ ತಿಂಗಳಿನಲ್ಲಿ ಹತ್ತು ಅರ್ಹ ಬಡ ಕುಟ್ಟುಬಕ್ಕೆ ತಲಾ 1000/ – ರೂಪಾಯಿಯ ಧನ ಸಹಾಯ ನೀಡುಹುವುದು.
ನಮ್ಮ ಮುಂದಿನ ಯೋಜನೆ ಮತ್ತು ಸಹಾಯಗಳು ಊರಿನ ಬಡವರ ಪರವಾಗಿರಬೇಕೆoಬ ಅಭಿಪ್ರಾಯ ಸಭೆಯಲ್ಲಿ ಮೂಡಿ ಬಂದಿದ್ದು ಆದನ್ನು ಸರ್ವಾನುಮತದಿಂದ್ದ ಅಂಗೀಖರೀಸಲಾಯಿತು. ಈ ಸಾರಿಯ ಪಂಚ ಯೋಜನೆಗಳನ್ನು ಕೂಡ ಈ ಉದ್ದೇಶವನ್ನು ಇಟ್ಟುಕೊಂಡೇ ರೂಪಿಸಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.