ರಿಯಾದ್ (www.vknews.in) : ಉಮ್ರಾ ಮುಗಿಸಿ ವಾಪಸಾದ ವಯೋವೃದ್ಧರೊಬ್ಬರು ವಿಮಾನದಲ್ಲಿ ಮೃತಪಟ್ಟಿದ್ದಾರೆ. ಪತ್ತನಂತಿಟ್ಟದ ಚಾತಾಂತರ ಪರೇಲ್ ಮನೆಯಲ್ಲಿ ಅಬ್ದುಲ್ ಕರೀಂ ಅವರ ಪತ್ನಿ ಫಾತಿಮಾ (77) ಮೃತರು. ಇಂದು ಬೆಳಗ್ಗೆ ಜಿದ್ದಾದಿಂದ ಕೊಚ್ಚಿಗೆ ಹೊರಟಿದ್ದ ಸೌದಿ ಏರ್ಲೈನ್ಸ್ ವಿಮಾನದಲ್ಲಿ ಅವರು ಪ್ರಯಾಣಿಸಿದ್ದರು.
ಸಾವಿಗೆ ಕಾರಣ ಉಸಿರಾಟದ ವೈಫಲ್ಯ ಎಂದು ಶಂಕಿಸಲಾಗಿದೆ. ಕೊಚ್ಚಿ ವಿಮಾನ ನಿಲ್ದಾಣದಿಂದ ವಿಮಾನವು ಸುಮಾರು ಒಂದು ಗಂಟೆ ದೂರವಿರುವಾಗ ಸಾವು ಸಂಭವಿಸಿದೆ. ಮೃತದೇಹ ಅಂಗಮಾಲಿ ಲಿಟಲ್ ಫೇವರ್ ಆಸ್ಪತ್ರೆಯ ಶವಾಗಾರದಲ್ಲಿದೆ. ಮರಣೋತ್ತರ ಪರೀಕ್ಷೆಯ ನಂತರ ಸಂಬಂಧಿಕರಿಗೆ ಮೃತದೇಹ ಹಸ್ತಾತರಿಸಲಾಗವುದು.
ಕಳೆದ ತಿಂಗಳು 21 ರಂದು ಅವರು ಮುವ್ವಾತುಪುಳ ಅಲ್ ಫಲಾಹ್ ಗುಂಪಿನ ಅಡಿಯಲ್ಲಿ ಉಮ್ರಾಗೆ ತೆರಳಿದ್ದರು. ಮಕ್ಕಾ ಮತ್ತು ಮದೀನಾಗಳಿಗೆ ಭೇಟಿ ನೀಡಿದ ನಂತರ ಗುಂಪು ಮರಳಿತು. ಕುಟುಂಬದ ಸದಸ್ಯರು ಯಾರೂ ಇರಲಿಲ್ಲ. ಉಸಿರಾಟಕ್ಕೆ ತೊಂದರೆಯಾದ ತಕ್ಷಣ ಅವರಿಗೆ ವಿಮಾನದಲ್ಲಿ ಪ್ರಥಮ ಚಿಕಿತ್ಸೆ ನೀಡಲಾಯಿತು, ಆದರೆ ಅವರು ಸಾವನ್ನಪ್ಪಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.