(www.vknews.in) ; 1997 ರಲ್ಲಿ ಬಾಪ್ಸ್ ಸ್ವಾಮಿಗಳ ವಿನಂತಿ ಮೇರೆಗೆ ಸಂಯುಕ್ತ ಅರಬ್ ಸಂಸ್ಥಾನದ ದುಬೈ ಮತ್ತು ಅಬುಧಾಬಿ ಗಡಿ ಭಾಗದಲ್ಲಿ ವಿಶಾಲವಾದ ಹದಿನಾಲ್ಕು ಎಕರೆ ಭೂಮಿಯಲ್ಲಿ ನಿರ್ಮಾಣಗೊಳ್ಳುತ್ತಿರುವ ಭವ್ಯ ಹಿಂದೂ ಮಂದಿರವು ಇದೇ ಫೆಬ್ರವರಿ ತಿಂಗಳ ದಿನಾಂಕ 14ರಂದು ಭಾರತದ ಮಾನ್ಯ ಪ್ರಧಾನಿ ಶ್ರೀ ನರೇಂದ್ರ ಮೋದಿ ಅವರು ಉದ್ಘಾಟಿಸಲಿದ್ದಾರೆ.
ಮಾರ್ಚ್ ಒಂದರಿಂದ ಸಾರ್ವಜನಿಕರ ಪ್ರವೇಶಕ್ಕೆ ಅವಕಾಶ ಕಲ್ಪಿಸಲಾಗಿದೆ, ಯುಎಇಯಲ್ಲಿರುವ ಅನಿವಾಸಿ ಭಾರತೀಯರಿಗಲ್ಲದೆ ಸಮೀಪದಲ್ಲಿರುವ ಹಲವು ಗಲ್ಫ್ ರಾಷ್ಟ್ರಗಳಲ್ಲಿ ನೆಲಸಿರುವ ಭಾರತೀಯರಿಗೆ ಮಂದಿರದ ಉದ್ಘಾಟನೆ ಬಹಳ ಸಂತೋಷ ತಂದಿದೆ, ಈ ಮೊದಲು ಮಾಜಿ ದುಬೈ ದೊರೆ ಶೇಖ್ ರಶೀದ್ ಬಿನ್ ಸಯೀದ್ ಅಲ್ ಮಕ್ತೌಮ್ ಅವರ ಆಡಳಿತ ಕಾಲದಿಂದಲೇ ( 1958 ರಿಂದಲೇ ) ದುಬೈಯಲ್ಲಿ ಹಿಂದೂ ಮಂದಿರವಿದ್ದು ಇತ್ತೀಚೆಗೆ ಈ ಮಂದಿರವು ದುಬೈಯ ಜಬೆಲ್ ಅಲಿಯಲ್ಲಿ 2022ರಲ್ಲಿ ಹೊಸದಾಗಿ ನಿರ್ಮಾಣಗೊಂಡು ಕಾರ್ಯಪ್ರವರ್ತಿಸುತ್ತಿರುವ ಮಂದಿರಕ್ಕೆ ವರ್ಗಾವಣೆಯಾಗಿದೆ, ಇದೇ ಸ್ಥಳದಲ್ಲಿ ಸಿಖ್ಖರ ಗುರುದ್ವಾರ ಮತ್ತು ಕ್ರೈಸ್ತ ಭಾಂಧವರ ಚರ್ಚ್ ಸಹ ಕಾಣಸಿಗಬಹುದು .
ಅಬುಧಾಬಿ ಹಿಂದೂ ಮಂದಿರದ ನಿರ್ಮಾಣ ಕಾರ್ಯವನ್ನು ಭಾರತದ ಬಾಪ್ಸ್ ಸಂಸ್ಥೆಯು ನೋಡಿಕೊಳ್ಳುತ್ತಿದೆ, ಈ ವಿಶಾಲ ಮಂದಿರದಲ್ಲಿ ರಾಮಾಯಣ, ಮಹಾಭಾರತ, ಭಗವತ್ಗೀತೆ ಸೇರಿ ಹಲವು ಧಾರ್ಮಿಕ ಗ್ರಂಥ ಗಳು, ರಾಮ, ಕೃಷ್ಣ, ಶಿವ, ವಿಷ್ಣು, ಅಯ್ಯಪ್ಪ ಸ್ವಾಮಿ ಸೇರಿ ಏಳು ದೇವರುಗಳ ಮೂರ್ತಿ ಪ್ರತಿಷ್ಠಾಪನೆಗೊಳ್ಳಲಿದೆ, ಈ ಮಂದಿರವನ್ನು ಭಾರತದಿಂದ ಆಗಮಿಸಿದ ಎರಡು ಸಾವಿರಕ್ಕೂ ಹೆಚ್ಚಿನ ಕರಕುಶಲ ಶಿಲ್ಪಿಗಳು ಇಪ್ಪತ್ತಯ್ದು ಸಾವಿರಕ್ಕಿಂತ ಹೆಚ್ಚು ಕಲ್ಲುಗಳ ಕಲ್ಲಿನ ತುಂಡಿ ನಿಂದ ನಿರ್ಮಿಸುತ್ತಿದ್ದಾರೆ, ಈ ಮಂದಿರದಲ್ಲಿ ಎರಡು ಗುಮ್ಮಟ ಮತ್ತು ಏಳು ಗೋಪುರಗಳು ಇದ್ದು ಗೋಪುರಗಳು ಸಂಯುಕ್ತ ಅರಬ್ ಸಂಸ್ಥಾನದ ಏಳು ಎಮಿರೇಟ್ಸ್ ( ರಾಜ್ಯವನ್ನು ) ಸೂಚಿಸುತ್ತದೆ, ಈ ಮಂದಿರದ ಗೋಡೆಗಳಲ್ಲಿ ಭಾರತೀಯ ಮತ್ತು ಅರಬ್ ಸಂಸ್ಕೃತಿ ಬಿಂಬಿಸುವ ಹಲವು ಚಿತ್ರಗಳ ಕೆತ್ತನೆಗಳು ಇದ್ದು ಸ್ವಾಮಿಗಳು ಮತ್ತು ಅರಬ್ ನಾಗರಿಕರು ಪರಸ್ಪರ ಕೈ ಹಿಡಿದು ನಿಂತಿರುವ ಶಿಲ್ಪಕಲೆ ಸಂಯುಕ್ತ ಅರಬ್ ಸಂಸ್ಥಾನದ ಧಾರ್ಮಿಕ ಭಾವೈಕ್ಯತೆ ಮತ್ತು ಪರಸ್ಪರ ಸಹೋದರತೆಯನ್ನು ವಿಶ್ವಕ್ಕೆ ಚಿತ್ರದ ಮೂಲಕ ಶಾಂತಿ ಮತ್ತು ಸಾಮರಸ್ಯದ ಒಂದೊಳ್ಳೆ ಗಟ್ಟಿ ಸಂದೇಶ ನೀಡುತ್ತಿದೆ.
ಯುಎಇಯಲ್ಲಿರುವ ಅನೇಕ ಮಸೀದಿಗಳಿಗೆ ಇತರ ಎಲ್ಲಾ ಧರ್ಮದವರು ಪ್ರವೇಶ ಇರುವ ಹಾಗೆ ಈ ಮಂದಿರಕ್ಕೆ ಎಲ್ಲಾ ಇತರ ಧರ್ಮದವರಿಗೆ ಪ್ರವೇಶ ಕಲ್ಪಿಸಲಾಗಿದೆ, ಮಂದಿರಕ್ಕೆ ಇರುವ ವಿಶಾಲವಾದ ಇಪ್ಪತ್ತುಮೂರು ಎಕರೆ ಭೂಮಿಯನ್ನು ಈಗಿನ ಆಡಳಿತಾಧಿಕಾರಿ ದೊರೆ ಶೇಖ್ ಮೊಹಮ್ಮದ್ ಬಿನ್ ಝಾಯದ್ ಅಲ್ ನಹ್ಯಾನ್ ನೇತೃತ್ವದ ಅಬುಧಾಬಿ ಸರ್ಕಾರ ಕಲ್ಪಿಸಿಕೊಟ್ಟಿದ್ದು ಅದರ ಹದಿನಾಲ್ಕು ಎಕರೆ ಭೂಮಿಯಲ್ಲಿ ಮಂದಿರ, ಕಲ್ಚರ್ ಸೆಂಟರ್, ಪ್ರೇಯರ್ ಹಾಲ್ಸ್ , ಎಕ್ಸಿಬಿಷನ್ ಸೆಂಟರ್ , ಲೆರ್ನಿಂಗ್ ಏರಿಯಾ, ಕಿಡ್ಸ್ ಪ್ಲೇಯಿಂಗ್ ಏರಿಯಾ, ಫುಡ್ ಕೋರ್ಟ್, ಬುಕ್ ಶಾಪ್ ಮುಂತಾದುವುಗಳು ನಿರ್ಮಾಣಗೊಳ್ಳುತ್ತಿದ್ದು ಮಂದಿರದ ಪ್ರವೇಶ ಸ್ಥಳದಲ್ಲಿ ಪವಿತ್ರ ಮೂರು ನದಿಗಳಾದ ಗಂಗಾ ಯಮುನಾ ಸರಸ್ವತಿ ಸಂಗಮದ ಕಲ್ಪನೆಯನ್ನು ಅಳವಡಿಸಿಕೊಂಡಿದ್ದಾರೆ, ಈ ಮಂದಿರ ನಿರ್ಮಾಣಕ್ಕೆ ಬೇಕಾದ ಪಿಂಕ್ ಬಣ್ಣದ ಕಲ್ಲನ್ನು ರಾಜಸ್ತಾನದಿಂದಲೂ ಮತ್ತು ಬಿಳಿಯ ಬಣ್ಣದ ಮಾರ್ಬಲ್ ಇಟಲಿ ದೇಶದಿಂದಲೂ ತರಿಸಿ ಬಹಳ ಸುಂದರವಾಗಿ ಮಂದಿರ ನಿರ್ಮಾಣ ಮಾಡಿದ್ದಾರೆ, ಈ ಮಂದಿರವು ಏಳು ನೂರು ಕೋಟಿ ರೂ ವೆಚ್ಚದಲ್ಲಿ ನಿರ್ಮಾಣಗೊಳ್ಳುತ್ತಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.