ಬಂಟ್ವಾಳ (www.vknews. in) : ಲಯನ್ಸ್ ಇಂಟರ್ನ್ಯಾಷನಲ್ ಜಿಲ್ಲೆ 317ಡಿ ಲಯನ್ಸ್ ಪ್ರಾಂತ್ಯ 5ರ ಪ್ರಾಂತೀಯ ಸಮ್ಮಿಲನ ‘ಸಂಧ್ಯಾ’ ಪ್ರಾಂತೀಯ ಅಧ್ಯಕ್ಷರಾದ ರಮಾನಂದ ನೂಜಿಪ್ಪಾಡಿಯವರ ನೇತೃತ್ವದಲ್ಲಿ, ಸಮ್ಮಿಲನ ಸಮಿತಿ ಅಧ್ಯಕ್ಷರಾದ ದಾಮೋದರ ಬಿ. ಎಂ. ಇವರ ಸಾರಥ್ಯದಲ್ಲಿ ಲಯನ್ಸ್ ಕ್ಲಬ್ ಕೊಳ್ಳಾಡು ಸಾಲೆತ್ತೂರು ಇದರ ಆತಿಥ್ಯದಲ್ಲಿ ಫೆಬ್ರವರಿ 11ರಂದು ಇರಾ ಬಂಟರ ಭವನದ ಬಿ. ವಿ. ಕಾರಂತ ವೇದಿಕೆಯಲ್ಲಿ ನಡೆಯಲಿದೆ ಎಂದು ಪ್ರಾಂತೀಯ ಅಧ್ಯಕ್ಷ ಲಯನ್ ರಮಾನಂದ ನೂಜಿಪ್ಪಾಡಿ ಅವರು ತಿಳಿಸಿದರು.
ಬಿಸಿರೋಡಿನ ಪ್ರೆಸ್ ಕ್ಲಬ್ ನಲ್ಲಿ ಬುಧವಾರ ಕರೆದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಪ್ರಾಂತ್ಯ 5 ರ ಕ್ಲಬ್ಗಳಾದ ಕೊಳ್ಳಾಡು ಸಾಲೆತ್ತೂರು, ಬಂಟ್ವಾಳ, ಮಂಗಳ ಗಂಗೋತ್ರಿ, ಚೋಟ ಮಂಗಳೂರು, ಲೊರೆಟ್ಟೋ ಅಗ್ರಾರ್, ಮುಡಿಪು ಕುರ್ನಾಡು, ವಾಮದಪದವು ಪ್ರಕೃತಿ, ವಿಟ್ಲ ಸಿಟಿ, ರಾಯಿ ಸಿದ್ಧಕಟ್ಟೆ ಹಾಗೂ ಅಮ್ಮೂರು ಒಳಗೊಂಡಂತೆ ಈ 10 ಕ್ಲಬ್ಗಳ ಪ್ರಾಂತೀಯ ಸಮ್ಮಿಲನವು ಸೇವಾ ಸಾರ್ಥಕ್ಯದ ಹೊಂಗಿರಣ ಶೀರ್ಷಿಕೆಯೊಂದಿಗೆ ವಿಶೇಷವಾಗಿ ಮಂಚಿ, ಇರಾ, ಕೊಲ್ನಾಡು ಗ್ರಾಮದ ಸರಕಾರಿ ಶಾಲೆಗಳ ವಿಶೇಷ ಅಗತ್ಯಕ್ಕೆ ನೆರವಿನ ಸೇವಾ ಕಾರ್ಯಕ್ರಮ ದೊಂದಿಗೆ ನಡೆಯಲಿದೆ ಎಂದು ಅವರು ತಿಳಿಸಿದರು.
ಸಮ್ಮಿಲನ ಸಮಿತಿ ಅಧ್ಯಕ್ಷ ದಾಮೋದರ ಬಿ.ಎಂ .ಮಾತನಾಡಿ, ಈ ಸಮಾರಂಭದಲ್ಲಿ ಐವರು ಸಾಧಕರಾದ ಸೂರ್ಯನಾರಾಯಣ ರಾವ್ ಪತ್ತುಮುಡಿಯವರಿಗೆ ‘ಲಯನ್ಸ್ ಉದ್ಯಮ ಭೂಷಣ ಪ್ರಶಸ್ತಿ’, ಸುಲೈಮಾನ್ ಹಾಜಿ ನಾರ್ಶ ಅವರಿಗೆ ‘ಲಯನ್ಸ್ ಉದ್ಯಮ ಸೌರಭ ಪ್ರಶಸ್ತಿ’, ಸತೀಶ್ ಕುಮಾರ್ ಆಳ್ವರವರಿಗೆ ‘ಲಯನ್ಸ್ ಉದ್ಯಮ ತಿಲಕ ಪ್ರಶಸ್ತಿ’, ಸುಧಾಕರ ಆಚಾರ್ಯ ಅವರಿಗೆ ‘ಲಯನ್ಸ್ ಉದ್ಯಮ ರತ್ನ ಪ್ರಶಸ್ತಿ’, ಉಮಾನಾಥ ರೈ ಮೇರಾವು ಇವರಿಗೆ ‘ಲಯನ್ಸ್ ಶಿಕ್ಷಣ ಭೂಷಣ ಪ್ರಶಸ್ತಿ’ ನೀಡಿ ಗೌರವಿಸಲಾಗುವುದು ಎಂದರು .
ಪ್ರಾಂತೀಯ ಸಮ್ಮಿಲನವು ಸೇವೆ ಸಾಂಗತ್ಯದ ಮೂಲಕವೂ, ವಿಶೇಷವಾಗಿ ಮಂಗಳೂರು ಅರೆಹೊಳೆ ಪ್ರತಿಷ್ಠಾನದ ನಂದಗೋಕುಲ ತಂಡದಿಂದ ಹಾಗೂ ಎಕ್ಸಿಮ್ ಡ್ಯಾನ್ಸ್ ಕ್ರೂ ಬಿ.ಸಿ.ರೋಡು ತಂಡಗಳಿಂದ ವೈವಿಧ್ಯಮಯ ನೃತ್ಯ ಪ್ರಕಾರಗಳು ಕೂಡಾ ವೇದಿಕೆಯಲ್ಲಿ ನಡೆಯಲಿದೆ ಎಂದರು.
ಈ ಕಾರ್ಯಕ್ರಮದಲ್ಲಿ ಶೇ.90 ರಷ್ಟು ಪ್ಲಾಸ್ಟಿಕ್ ಮುಕ್ತವಾದ ಕಾರ್ಯಕ್ರಮವಾಗಬೇಕು ಎಂಬ ಯೋಜನೆ ಸಿದ್ದಮಾಡಿದ್ದೇವೆ ಎಂದು ತಿಳಿಸಿದರು. ಪತ್ರಿಕಾಗೋಷ್ಠಿಯಲ್ಲಿ ರಾಮ್ ಪ್ರಸಾದ್ ರೈ, ಜಯಪ್ರಕಾಶ್ ರೈ ಮೇರಾವು, ಬಾಲಕೃಷ್ಣ ಶೆಟ್ಟಿ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.