ಬಂಟ್ವಾಳ (www.vknews. in) : ಕಲ್ಲಡ್ಕದ ಸ್ನೇಹ ಸಮ್ಮಿಲನ ಒಕ್ಕೂಟ ಇದರ ವತಿಯಿಂದ ಕಲ್ಲಡ್ಕ ಆಸುಪಾಸಿನ ಪ್ರದೇಶಗಳ ಯುವಕರ ” ಸ್ನೇಹ ಸಮ್ಮಿಲನ 2024″ ರ ಸಂಭ್ರಮವು ಮಂಗಳೂರು ಹೊರವಲಯದ ಇನೋಳಿಯ ಲಾಲ್ ಪತ್ತರ್ ರೆಸಾರ್ಟ್ ನಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸ್ನೇಹ ಸಮ್ಮಿಲನ ಒಕ್ಕೂಟದ ಸಂಚಾಲಕ ಇಮ್ತಿಯಾಝ್ ಗೋಳ್ತಮಜಲು ಮಾತನಾಡಿ ಸಮಾಜದಲ್ಲಿ ಶಾಂತಿ, ಸೌಹಾರ್ದತೆಗೆ ಒತ್ತು ನೀಡುವ ಸದುದ್ದೇಶದಿಂದ ಪರಸ್ಪರ ಐಕ್ಯತೆ, ಸೌಹಾರ್ದತೆಗಾಗಿ ಒಕ್ಕೂಟದ ಸಂಸ್ಥಾಪಕರಾದ ಫಿರೋಝ್ ಹಾಗೂ ಇಸ್ಮಾಯಿಲ್ ರವರ ಸಲಹೆಯಂತೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದರು.
ಎಂ.ಫ್ರೆಂಡ್ಸ್ ಟ್ರಸ್ಟ್ ಅಧ್ಯಕ್ಷ ಮಹಮ್ಮದ್ ಹನೀಫ್ ಹಾಜಿ ಗೋಳ್ತಮಜಲು, ಲಾಲ್ ಪತ್ತರ್ ರೆಸಾರ್ಟ್ ಮಾಲೀಕರಾದ ಸಫ್ವಾನ್, ಸಲ್ಮಾನ್, ಹಜಾಜ್ ಸಮೂಹ ಸಂಸ್ಥೆಗಳ ಪಾಲುದಾರರಾದ ಮುಹಮ್ಮದ್ ಮುಸ್ತಫಾ, ಶರೀಫ್ ಹಾಜಿ ಗೋಳ್ತಮಜಲು, ಅಲ್ತಾಫ್, ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಮಾಜಿ ಸದಸ್ಯ ಹಮೀದ್ ಗೋಳ್ತಮಜಲು, ಹಂಝ ಪೆರ್ನೆ, ರಫೀಕ್ ಕಲ್ಲಡ್ಕ, ಖಾದರ್ ಕೆ.ಸಿ.ರೋಡ್, ಸಿದ್ದೀಕ್ ವೆಲ್ ಕಮ್, ನ್ಯಾಯವಾದಿಗಳಾದ ಆಸಿಫ್ ಅಮರ್, ಹಬೀಬುರ್ರಹ್ಮಾನ್, ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಶುಭ ಹಾರೈಸಿದರು.
ಪತ್ರಕರ್ತ ಲತೀಫ್ ನೇರಳಕಟ್ಟೆ, ಗೋಳ್ತಮಜಲು ಗ್ರಾಮ ಪಂಚಾಯತ್ ಸದಸ್ಯ ಹಾರಿಸ್ ಅಮರ್, ಸಿದ್ದೀಕ್ ಮದಕ, ಜಿ.ಎಸ್.ಸಿದ್ದೀಕ್, ಮರ್ಶದ್ ಕಲ್ಲಡ್ಕ, ತ್ವಾಹಿರ್ ಕರ್ನಾಟಕ, ಫಾರೂಕ್ ಕೆ.ಎಚ್ ಸಮಾರಂಭದಲ್ಲಿ ವಿವಿಧ ಆಟೋಟ ಸ್ಪರ್ಧೆಗಳ ವಿಜೇತರಿಗೆ ಬಹುಮಾನ ವಿತರಿಸಿದರು.
ಕಾರ್ಯಕ್ರಮ ಸಂಯೋಜಕರಾದ ಉಬೈದುಲ್ಲಾ ಮುರಬೈಲು, ಇರ್ಶಾದ್ ಮದಕ, ಇಬ್ರಾಹಿಂ ಕೆ.ಸಿ.ರೋಡ್ ಪ್ರಮುಖರಾದ ಕೆ.ಕೆ.ಹಾರಿಸ್, ಮನ್ಸೂರ್ ಸೂರಜ್, ಸಮೀರ್ ಮೊಬೈಲ್, ಡಾ.ಜಮಾಲ್, ಶರೀಫ್ ಎಸ್.ಆರ್, ಆಸಿಫ್ ಸೀಕೋ, ಮನ್ಸೂರ್ ಇಸ್ಮಾಯಿಲ್ ನಗರ, ಶಾಫಿ ಕಲ್ಲಡ್ಕ, ಖಲೀಲ್ ಬಳ್ಳೆಕೋಡಿ, ಫಯಾಲ್, ಖಲೀಲ್ ಎಸಿ, ರಝಾಕ್, ಸತ್ತಾರ್, ಸವೂದ್, ಝಮೀರ್ ಝೂಮ್, ತೌಫೀಕ್ ಝಮಾನ್ ಮೊದಲಾದವರು ಉಪಸ್ಥಿತರಿದ್ದರು.
ಅಹ್ರಾಸ್ ಗೋಳ್ತಮಜಲು, ಶಿಹಾಬ್ ಗೋಳ್ತಮಜಲು, ಝಮಾನ್ ಬಾಯ್ಸ್ ಕಲ್ಲಡ್ಕ ಹಾಗೂ ಶೇರಿಂಗ್ ಹೆಪ್ಪಿನೆಸ್ ತಂಡದವರು ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಟ್ಟರು. ಹಾರಿಸ್, ಶಾಹಿದ್, ಜುನೈದ್, ರಹಿಮಾನ್ ಮತ್ತು ಬಿಲಾಲ್ ಇವರಿಂದ ಸಂಗೀತ ಕಾರ್ಯಕ್ರಮ ನಡೆಯಿತು. ಕೆ.ಕೆ.ಸಹೀದ್ ಸ್ವಾಗತಿಸಿ, ಇರ್ಫಾನ್ ವಂದಿಸಿದರು. ಸಂಶುದ್ದೀನ್ ಕೆ.ಸಿ.ರೋಡ್ ಕಾರ್ಯಕ್ರಮ ನಿರೂಪಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.