ಚಿಕ್ಕಬಳ್ಳಾಪುರ (www.vknews.in) : ನಗರದ ಚಾಮರಾಜಪೇಟೆ ಪರಾರಿವಾರ್ಡ್ನಲ್ಲಿ ಮಹಿಳೆಯನ್ನು ಬರ್ಬರವಾಗಿ ಕೊಲೆ ಮಾಡಿದ ಪ್ರಕರಣ ನಡೆದಿದೆ. ತಮಿಳುನಾಡು ಮೂಲದ ಪ್ರಿಯಕರ ದಿವಾಕರ್ ಎಂಬಾತ ಬಾಡಿಗೆ ರೂಮ್ನಲ್ಲಿ ಕತ್ತು ಕೊಯ್ದು, ಕೊಲೆ ಮಾಡಿ ಬೀಗ ಹಾಕಿ ಪರಾರಿಯಾಗಿರುವ ಘಟನೆ ವರದಿಯಾಗಿದೆ.
ಮೃತರನ್ನು ವಿವಾಹಿತ ಮಹಿಳೆ ದೀಪಾ (40) ಎಂದು ತಿಳಿದುಬಂದಿದೆ. ಮೃತ ದೀಪಾಳನ್ನು ಬಾಗೇಪಲ್ಲಿ ತಾಲೂಕಿನ ಜೂಲಪಾಳ್ಯಾಗೆ ಮದುವೆ ಮಾಡಿಕೊಡಲಾಗಿತ್ತು. ಮಕ್ಕಳ ಜೊತೆ ತವರು ಮನೆ ಚಿಕ್ಕಬಳ್ಳಾಫುರದಲ್ಲಿ ವಾಸವಿದ್ದ ದೀಪಾಳಿಗೆ ತನ್ನ ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ದೀವಾಕರ್ ಜೊತೆ ಅನೈತಿಕ ಸಂಬಂಧ ಇತ್ತು ಎನ್ನುವ ಆರೋಪ ಕೇಳಿಬಂದಿದೆ. ಆಗಾಗ ಪ್ರೀಯಕರ ದಿವಾಕರ್ ರೂಮಿಗೆ ಬಂದು ಹೋಗುತ್ತಿದ್ದನು. ಇತ್ತೀಚೆಗೆ ರೂಮ್ಗೆ ಬಂದಿದ್ದಾಗ ಇಬ್ಬರ ನಡುವೆ ಜಗಳ ನಡೆದಿದ್ದು, ಈ ವೇಳೆ ದೀಪಾಳನ್ನು ದಿವಾಕರ್ ಕೊಲೆ ಮಾಡಿರುವ ಶಂಕೆ ವ್ಯಕ್ತವಾಗಿದೆ.
ರೂಮ್ನಿಂದ ಕೆಟ್ಟ ವಾಸನೆ ಬರುತ್ತಿರುವ ಹಿನ್ನೆಲೆ ಅನುಮಾನಗೊಂಡ ಕಟ್ಟಡದ ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಸ್ಥಳಕ್ಕೆ ಆಗಮಿಸಿದ ಪೊಲೀಸರು ರೂಮ್ ಪರಿಶೀಲಿಸಿದಾಗ ಕೊಲೆ ಪ್ರಕರಣ ಬೆಳಕಿಗೆಬಂದಿದೆ. ಸ್ಥಳಕ್ಕೆ ಚಿಕ್ಕಬಳ್ಳಾಫುರ ಎಸ್ಪಿ ಡಿ.ಎಲ್.ನಾಗೇಶ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ರೂಮ್ ಮಾಲಿಕರಿಂದ ಮಾಹಿತಿ ಪಡೆದಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.