(www.vknews. in) ಎಸ್.ಜೆ.ಎಂ : ದ.ಕ ಜಿಲ್ಲಾ ಈಸ್ಟ್ ಸಮಿತಿಯ ನೂತನ ಕಛೇರಿ ಉದ್ಘಾಟನೆ
ಉಪ್ಪಿನಂಗಡಿ : ಇಸ್ಲಾಮಿಕ್ ಎಜುಕೇಶನಲ್ ಬೋರ್ಡ್ ಇದರ ಅಧೀನದಲ್ಲಿ ಕಾರ್ಯಾಚರಿಸುತ್ತಿರುವ ಮದ್ರಸಗಳಲ್ಲಿ ಕಲಿಸಲಾಗುವ ಶಿಕ್ಷಣವು ಅತ್ಯಂತ ಗುಣಮಟ್ಟವೂ, ಆಧುನಿಕತೆಯ ಇಂದಿನ ಸನ್ನಿವೇಶದಲ್ಲಿ ಮಕ್ಕಳಿಗೆ ಫಲಪ್ರದವೂ ಆಗಿದೆ. ಯಾವುದೇ ಕಪ್ಪು ಚುಕ್ಕೆಗಳಿಲ್ಲದೆ, ದೇಶದ ಐಕ್ಯತೆ, ಶಾಂತಿ ಸೌಹಾರ್ದತೆ, ಸಹಿಷ್ಣುತೆಯ ಪಾಠವನ್ನು ಬಿತ್ತರಿಸುವಲ್ಲಿ ಯಶಸ್ವೀ ಆಗಿದೆ. ಇದನ್ನು ಯಶಸ್ವೀ ಆಗಿ ವಿದ್ಯಾರ್ಥಿಗಳಿಗೆ ಕಲಿಸಿಕೊಡುವುದರಲ್ಲಿ ಹಾಗೂ ಮಕ್ಕಳನ್ನು ದೇಶದ ಸತ್ಪ್ರಜೆಯಾಗಿ ಬೆಳೆಸುವಲ್ಲಿ, ಮದ್ರಸ ಅಧ್ಯಾಪಕರು ಪ್ರಬುದ್ಧರಾಗಿದ್ದಾರೆ. ಮುಅಲ್ಲಿಂ ವಿದ್ವಾಂಸರು ಈ ದೇಶದ, ಸಮಾಜದ, ಸಮುದಾಯದ ಬೆಲೆಬಾಳುವ ಸೊತ್ತಾಗಿದ್ದಾರೆ ಅವರನ್ನು ಗೌರವಿಸಿ ಅನುಸರಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಸುನ್ನೀ ಜಂ ಇಯ್ಯತುಲ್ ಉಲಮಾ ರಾಜ್ಯಾಧ್ಯಕ್ಷರೂ, ಗೌರವಾನ್ವಿತ ಖಾಝಿಗಳೂ ಆದ ಝೈನುಲ್ ಉಲಮಾ ಶೈಖುನಾ ಮಾಣಿ ಉಸ್ತಾದ್ ಹೇಳಿದರು. _ಅವರು, ಸುನ್ನೀ ಜಂ ಇಯ್ಯತುಲ್ ಮುಅಲ್ಲಿಮೀನ್ ದಕ್ಷಿಣ ಕನ್ನಡ ಜಿಲ್ಲಾ ಈಸ್ಟ್ ಸಮಿತಿಯ, ನೆಕ್ಕಿಲಾಡಿ ಮೇದರಬೆಟ್ಟು ಕಾಂಪ್ಲೆಕ್ಸ್ ನಲ್ಲಿ ತೆರೆಯಲಾದ ನೂತನ ಕಛೇರಿಯನ್ನು ಉದ್ಘಾಟಿಸಿ ಮಾತನಾಡಿದರು. ಅತ್ಯಂತ ಅಗತ್ಯವೂ, ಆಕರ್ಷಣೀಯವಾದ ಹವಾನಿಯಂತ್ರಿತ ಈ ಕಛೇರಿ ಹಾಗೂ ಮುಅಲ್ಲಿಂ ವಿದ್ವಾಂಸರ ಈ ಒಕ್ಕೂಟವು ಸರ್ವ ಸಂಘಟನೆಗಳಿಗೂ ಮಾದರಿ ಆಗಲಿ ಎಂದು ಶುಭ ಹಾರೈಸಿದರು._
ಸಮಾರಂಭದ ಅಧ್ಯಕ್ಷತೆಯನ್ನು ಜಿಲ್ಲಾಧ್ಯಕ್ಷರಾದ ಪುಂಡೂರು ಇಬ್ರಾಹಿಂ ಸಖಾಫಿ ಸುಳ್ಯ ವಹಿಸಿದ್ದರು. ಸುನ್ನೀ ಮಾನೇಜ್ಮೆಂಟ್ ಅಸೋಸಿಯೇಷನ್ ರಾಜ್ಯಾಧ್ಯಕ್ಷರಾದ ಸಯ್ಯಿದ್ ಇಸ್ಮಾಯಿಲ್ ತಂಙಳ್ ಮದನಿ ಉಜಿರೆ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು. ಜಿಲ್ಲಾ ಸಮಿತಿ ಪ್ರಧಾನ ಕಾರ್ಯದರ್ಶಿ ಎನ್ ಎಂ ಶರೀಫ್ ಸಖಾಫಿ ನೆಕ್ಕಿಲ್ ಸ್ವಾಗತಿಸಿದರು.
ಸುನ್ನೀ ಜಂ ಇಯ್ಯತುಲ್ ಮುಅಲ್ಲಿಮೀನ್ ರಾಜ್ಯಾಧ್ಯಕ್ಷರಾದ ಜೆಪ್ಪು ಅಬ್ದುರ್ರಹ್ಮಾನ್ ಮದನಿ ಸಹಿತ ಹಲವು ಗಣ್ಯರು ಶುಭ ಹಾರೈಸಿದರು.
ಮುಖ್ಯ ಅತಿಥಿಗಳಾಗಿ ಹಿರಿಯ ವಿದ್ವಾಂಸರಾದ ಕಾಸಿಂ ಮದನಿ ಕರಾಯ, ಎಸ್ಸೆಂ ಕೋಯ ತಂಙಳ್ ಉಜಿರೆ, ಮುಫತ್ತಿಶ್ ಮುಹಮ್ಮದ್ ಹನೀಫ್ ಮಿಸ್ಬಾಹಿ, ಜಿಲ್ಲಾ ಕೋಶಾಧಿಕಾರಿ ಕಾಸಿಂ ಸಖಾಫಿ ವಿಟ್ಲ, ಇಬ್ರಾಹಿಂ ಸಅದಿ ಅಲ್ ಅಫ್ಳಲಿ ನೆಕ್ಕಿಲಾಡಿ, ಕಟ್ಟಡದ ಮಾಲೀಕರೂ, ಉಪ್ಪಿನಂಗಡಿ ಎಸ್.ಎಂ.ಎ ರೀಜನಲ್ ಅಧ್ಯಕ್ಷರಾದ ಇಸ್ಹಾಕ್ ಹಾಜಿ ಮೇದರಬೆಟ್ಟು, ಅಬ್ದುರ್ರಹ್ಮಾನ್ ಹಾಜಿ ಅರಿಯಡ್ಕ, ಝೋನಲ್ ಅಧ್ಯಕ್ಷರಾದ ಮುಹಮ್ಮದ್ ಹಾಜಿ ನೆಕ್ಕಿಲಾಡಿ, ಅಡ್ವೊಕೇಟ್ ಶಾಕಿರ್ ಹಾಜಿ, ಜಿಲ್ಲಾ ನಾಯಕರಾದ ಇಬ್ರಾಹಿಂ ಸಖಾಫಿ ಕಬಕ, ಹಮೀದ್ ಸಅದಿ ಬೇಂಗಿಲ, ಸಿರಾಜುದ್ದೀನ್ ಸಖಾಫಿ ಮಠ, ಅಬ್ದುಲ್ ರಝಾಕ್ ಲತೀಫಿ ಕುಂತೂರು, ನಿಝಾರ್ ಸಖಾಫಿ ಸುಳ್ಯ, ಅಬ್ಬಾಸ್ ಮುಸ್ಲಿಯಾರ್ ಬೈತಡ್ಕ, ಅಬ್ದುಲ್ ಖಾದರ್ ಸಅದಿ ಕನ್ಯಾನ, ಉಮರುಲ್ ಫಾರೂಕ್ ಸಖಾಫಿ, ಇಬ್ರಾಹಿಂ ಸಅದಿ, ಶರೀಫ್ ಸಖಾಫಿ ಪುತ್ತೂರು, ಇಸ್ಮಾಯಿಲ್ ಮದನಿ ಬೆಳ್ತಂಗಡಿ, ಸಂಘ ಕುಟುಂಬಗಳ ನಾಯಕರಾದ ಅಬ್ದುಲ್ ಹಮೀದ್ ಸೋಮಂತಡ್ಕ, ಉಸ್ಮಾನ್ ಸೋಕಿಲ, ಡಾಕ್ಟರ್ ಫಾರೂಕ್, ಉಮರ್ ತಾಜ್, ಸುಲೈಮಾನ್ ನೆಲ್ಯಾಡಿ, ಶುಕೂರ್ ಮೇದರಬೆಟ್ಟು, ಶರೀಫ್ ಸಖಾಫಿ ಉಜಿರ್ಬೆಟ್ಟು, ಮುಹಿಯುದ್ದೀನ್ ಉಜಿರೆ, ಫಾರೂಕ್ ಮೇದರಬೆಟ್ಟು, ಸಿದ್ದೀಕ್ ಸಅದಿ ವಳಾಲು, ಅಬೂಬಕರ್ ಮುಸ್ಲಿಯಾರ್ ನೀರಕಟ್ಟೆ, ಹನೀಫ್ ಮುಸ್ಲಿಯಾರ್ ಉಜಿರೆ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ಮಹ್ಳರತುಲ್ ಬದ್ರಿಯಾ ಮಜ್ಲಿಸ್ ನಡೆಸಲಾಯಿತು.
ಇದೇ ವೇಳೆ ಕಟ್ಟಡ ಮಾಲೀಕರಾದ ಇಸ್ಹಾಕ್ ಹಾಜಿ ಮೇದರಬೆಟ್ಟು, ಇಂಜಿನಿಯರ್ ಗಳಾದ ಅಮೀರ್ ಮದನಿ ಕಡೇಶಿವಾಲಯ, ಮುಹಮ್ಮದ್ ತೌಸೀಫ್ ಪಟ್ಟೂರ್ ಇವರನ್ನು ಆಭಿನಂದಿಸಲಾಯಿತು.
ಜಿಲ್ಲಾ ಸದಸ್ಯರು, ಜಿಲ್ಲಾ ವ್ಯಾಪ್ತಿಯ ಹದಿನೈದು ರೇಂಜ್ ಗಳ ಪದಾಧಿಕಾರಿಗಳು, ಮುಅಲ್ಲಿಂ ವಿದ್ವಾಂಸರು, ಸಂಘಟನಾ ಪ್ರತಿನಿಧಿಗಳು ಭಾಗವಹಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.