(www.vknews. in) ಪ್ರಚಾರ ಬಯಸದ ಮೌನ ಸಾಧಕ – ಕೆ ಟಿ ಗಟ್ಟಿ ಶ್ರದ್ಧಾಂಜಲಿ ಸಭೆಯಲ್ಲಿ ಡಾ | ಮೀನಾಕ್ಷಿ ರಾಮಚಂದ್ರ ಅಭಿಪ್ರಾಯ ಪ್ರಚಾರ ಬಯಸದ ಸಹೃದಯಿ ಕೆ ಟಿ ಗಟ್ಟಿಯವರು ಮೌನವಾಗಿಯೇ ನಿರಂತರ ಸಾಧನೆಯಿಂದ ಸಾಹಿತ್ಯ ಲೋಕದ ತಾರೆಯಾದವರು ಎಂದು ಡಾ । ಮೀನಾಕ್ಷಿ ರಾಮಚಂದ್ರ ಅಭಿಪ್ರಾಯಪಟ್ಟರು.
ನಮ್ಮನ್ನಗಲಿದ ಖ್ಯಾತ ಕಾದಂಬರಿಕಾರ ಕೆ ಟಿ ಗಟ್ಟಿಯವರಿಗೆ , ದ ಕ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು , ಮಂಗಳೂರು ತಾಲೂಕು ಘಟಕದಿಂದ ಜರುಗಿದ ಶ್ರದ್ಧಾಂಜಲಿ ಸಭೆಯಲ್ಲಿ ಅವರು ಮಾತನಾಡಿದರು. ಘಟಕದ ಅಧ್ಯಕ್ಷ ಡಾ. ಮಂಜುನಾಥ ರೇವಣ್ಕರ್ , ಗೌರವ ಕಾರ್ಯದರ್ಶಿ ಗಣೇಶ್ ಪ್ರಸಾದ್ ಜೀ , ರಘು ಇಡ್ಕಿದು , ಬೆನೆಟ್ ಜಿ ಅಮ್ಮನ್ನ , ನುಡಿ ನಮನ ಸಲ್ಲಿಸಿದರು. ಕೇಂದ್ರ ಪರಿಷತ್ತು ಮಾರ್ಗದರ್ಶಿ ಸಮಿತಿಯ ಡಾ. ಮುರಲೀಮೋಹನ್ ಚೂಂತಾರು ಗೌರವ ನಮನ ಸಲ್ಲಿಸಿದರು. ಕೋಶಾಧಿಕಾರಿ ಎನ್. ಸುಬ್ರಾಯ ಭಟ್, ಸಮಿತಿ ಸದಸ್ಯರಾದ ಬಿ. ಕೃಷ್ಣಪ್ಪ ನಾಯ್ಕ್ , ಶ್ರೀಕೃಷ್ಣ ಭಟ್ ಸುಣ್ಣಂಗುಳಿ , ರತ್ನಾವತಿ ಜೆ ಬೈಕಾಡಿ , ನಿಜಗುಣ ದೊಡ್ಡಮನಿ ಹಾಗೂ ಸಾಹಿತ್ಯಾಭಿಮಾನಿಗಳು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.