ಬಂಟ್ವಾಳ (www.vknews. in) : ಇಲ್ಲಿನ ಕೆಳಗಿನ ಪೇಟೆಯ ಅಲ್-ಅಮೀನ್ ಯೂತ್ ಫ್ರೆಂಡ್ಸ್ ಇದರ ಆಶ್ರಯದಲ್ಲಿ ಹೊನಲು ಬೆಳಕಿನ ದಫ್ ಸ್ಪರ್ಧಾ ಕಾರ್ಯಕ್ರಮವು ಕೆಳಗಿನಪೇಟೆಯಲ್ಲಿ ಶನಿವಾರ ರಾತ್ರಿ ನಡೆಯಿತು .
ಕಾರ್ಯಕ್ರಮವನ್ನು ಉದ್ಘಾಟಿಸಿದ ಸಮಸ್ತ ಕೇಂದ್ರ ಮುಶಾವರ ಸದಸ್ಯ ಹಾಜಿ ಅಬ್ದುಲ್ ಖಾದರ್ ಮುಸ್ಲಿಯಾರ್ ಅಲ್-ಖಾಸಿಮಿ ಬಂಬ್ರಾಣ ಮಾತನಾಡಿ ದಫ್ ಎಂಬುದು ಪವಿತ್ರ ಇಸ್ಲಾಮಿನ ನಾಲ್ಕು ಮದ್ಸ್ ಹಬ್ ಗಳೂ ಕೂಡಾ ಅನುಮತಿಸಿದ ಇಸ್ಲಾಮೀ ಕಲಾ ಪ್ರಕಾರವಾಗಿದ್ದು, ಇದನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಸ್ಪರ್ಧಾ ರೂಪದಲ್ಲಿ ಕಾರ್ಯಕ್ರಮ ಆಯೋಜಿಸುವುದು ಸಮ್ಮತಾರ್ಹವಾಗಿದೆ ಎಂದ ಅವರು ಧಾರ್ಮಿಕ ನೆಲೆಗಟ್ಟಿನ ಕಾರ್ಯಕ್ರಮಗಳನ್ನು ಊರಿನಲ್ಲಿ ಯುವಕರು ಸಂಘಟಿಸುವಾಗ ಅವುಗಳನ್ನು ಪ್ರೋತ್ಸಾಹಿಸಬೇಕು ಎಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಎಸ್ಕೆಎಸ್ಸೆಸ್ಸೆಫ್ ಬಂಟ್ವಾಳ ವಲಯಾಧ್ಯಕ್ಷ ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು ಅವರು ಮಾತನಾಡಿ, ಧಾರ್ಮಿಕ ಕಾರ್ಯಕ್ರಮಗಳು ಧರ್ಮದ ನೆಲೆಗಟ್ಟಿನಲ್ಲಿಯೇ ಆಯೋಜನೆಗೊಳ್ಳಬೇಕೇ ಹೊರತು ಇತರ ಲೌಕಿಕ ಅಥವಾ ಆಡಂಬರದ ಉದ್ದೇಶವನ್ನು ಹೊಂದುವಂತಾಗ ಬಾರದು ಎಂದರು.
ಸಯ್ಯಿದ್ ಇಬ್ರಾಹಿಂ ಬಾತಿಷಾ ತಂಙಳ್ ಆನೆಕಲ್ ದುವಾಶಿರ್ವಚನಗೈದರು. ಬಂಟ್ವಾಳ ಖತೀಬ್ ಮುಹಮ್ಮದ್ ರಿಯಾಝ್ ಫೈಝಿ ಮುಖ್ಯ ಭಾಷಣಗೈದರು. ಎಸ್ಡಿಪಿಐ ರಾಷ್ಟ್ರೀಯ ಕಾರ್ಯದರ್ಶಿ ರಿಯಾಝ್ ಫರಂಗಿಪೇಟೆ, ಬಂಟ್ವಾಳ ಪುರಸಭಾ ಸದಸ್ಯ ಮೂನಿಶ್ ಅಲಿ ಮಾತನಾಡಿ ಶುಭ ಹಾರೈಸಿದರು.
ರಾಜ್ಯ ಗೇರು ಅಭಿವೃದ್ದಿ ನಿಗಮದ ಮಾಜಿ ಅಧ್ಯಕ್ಷ ಹಾಜಿ ಬಿ ಎಚ್ ಖಾದರ್, ಬಂಟ್ವಾಳ ಜುಮಾ ಮಸೀದಿ ಅಧ್ಯಕ್ಷ ಅಹ್ಮದ್ ಶಾಫಿ, ಉಪಾಧ್ಯಕ್ಷ ಪಿ ಬಿ ಇಸ್ಮಾಯಿಲ್, ತೌಹೀದ್ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ ಹಾಜಿ ಅಬ್ದುಲ್ ರಹಿಮಾನ್, ಜೆಡಿಎಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಹಾರೂನ್ ರಶೀದ್ ಬಂಟ್ವಾಳ, ಬಂಟ್ವಾಳ ಅಲ್-ಸಫರ್ ಫ್ರೆಂಡ್ಸ್ ಅಧ್ಯಕ್ಷ ಮುಹಮ್ಮದ್ ನಿಝಾಂ, ಮಾನವತಾ ಸೇವಾ ಸಂಸ್ಥೆಯ ಸ್ಥಾಪಕಾಧ್ಯಕ್ಷ ಮುಸ್ತಫಾ ಜೋಕಟ್ಟೆ, ಪುದು ಗ್ರಾ.ಪಂ ಸದಸ್ಯ ಹಾಶೀರ್ ಪೇರಿಮಾರ್ ಮೊದಲಾದವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು.
ಖಾದರ್ ಮಾಸ್ಟರ್ ಬಂಟ್ವಾಳ, ಮುಹಮ್ಮದ್ ಬಿಕಾಂ, ಡೈಮಂಡ್ ಆಂಗ್ಲ ಮಾಧ್ಯಮ ಶಾಲಾ ಸಂಚಾಲಕ ಅಲ್ತಾಫ್, ರೆಸ್ಕ್ಯೂ ಚಾರಿಟೇಬಲ್ ಟ್ರಸ್ಟ್ ಸದಸ್ಯ ಮಲ್ಲಿಕ್, ಉದ್ಯಮಿಗಳಾದ ಮುಸ್ತಫಾ ಫರಂಗಿಪೇಟೆ, ವೀಲ್ ಎಫ್.ಸಿ.ಯ ತೌಸೀಫ್, ಎಸ್ಡಿಪಿಐ ಬಂಟ್ವಾಳ ಬೂತ್ ಅಧ್ಯಕ್ಷ ಕುರ್ಶಿದ್, ಯೂತ್ ಫ್ರೆಂಡ್ಸ್ ನ ಪ್ರಮುಖರಾದ ಜಲಾಲ್, ಫಾರಿಸ್, ಲತೀಫ್, ಬಿಲಾಲ್, ಸಿನಾನ್, ಅಲಿ, ಅಸ್ವೀರ್, ಸರ್ವಾನ್, ಸರ್ದಿನ್, ತೌಫೀರ್, ಖಲಂದರ್ ಶಾಫಿ ಮೊದಲಾದವರು ಉಪಸ್ಥಿತರಿದ್ದರು.
ಇದೇ ವೇಳೆ ಇರ್ಶಾದ್ ದಾರಿಮಿ ಅಲ್-ಜಝರಿ ಮಿತ್ತಬೈಲು, ಹಾಜಿ ಬಿ ಎಚ್ ಖಾದರ್ ಬಂಟ್ವಾಳ, ಅಬ್ದುಲ್ ಮಜೀದ್ ಫೈಝಿ ಕೋಲ್ಪೆ, ಯೂಸುಪ್ ಮುಸ್ಲಿಯಾರ್ ಕೋಲ್ಪೆ, ಹಾಫಿಳ್ ಸಯೀದ್ ಬಂಟ್ವಾಳ, ರಾಝಿಕ್ ವಿಟ್ಲ, ಮುಹಮ್ಮದ್ ಮುಸ್ತಫಾ ಜೋಕಟ್ಟೆ ಅವರನ್ನು ಸನ್ಮಾನಿಸಲಾಯಿತು.
ಇರ್ಶಾದ್ ಬಂಟ್ವಾಳ ಸ್ವಾಗತಿಸಿ, ಅಬ್ದುಲ್ ಖಾದರ್ ರಾಝಿ ವಂದಿಸಿದರು. ಪತ್ರಕರ್ತರಾದ ಲತೀಫ್ ನೇರಳಕಟ್ಟೆ ಹಾಗೂ ಪಿ ಎಂ ಅಶ್ರಫ್ ಪಾಣೆಮಂಗಳೂರು ಕಾರ್ಯಕ್ರಮ ನಿರೂಪಿಸಿದರು.
ಮಜೂರು ಸಿರಾಜುಲ್ ಹುದಾ ದಫ್ ತಂಡಕ್ಕೆ ಪ್ರಶಸ್ತಿ
ದಫ್ ಸ್ಪರ್ಧಾ ಕಾರ್ಯಕ್ರಮದಲ್ಲಿ ಉಡುಪಿ ಮಜೂರಿನ ಸಿರಾಜುಲ್ ಹುದಾ ದಫ್ ತಂಡ ಪ್ರಥಮ ಸ್ಥಾನವನ್ನು ಪಡೆದುಕೊಂಡರೆ, ಉಳ್ಳಾಲ ಅಕ್ಕರೆಕೆರೆಯ ಅಲ್-ಜಝೀರಾ ದಫ್ ತಂಡ ದ್ವಿತೀಯ ಹಾಗೂ ಕಟಪಾಡಿ – ಮಣಿಪುರದ ಖಲಂದರ್ ಷಾ ದಫ್ ತಂಡ ತೃತೀಯ ಸ್ಥಾನ ಪಡೆದುಕೊಂಡಿತು. ಸುರತ್ಕಲ್ – ಕೃಷ್ಣಾಪುರದ ಬದ್ರಿಯಾ ದಫ್ ತಂಡ ಉತ್ತಮ ಹಾಡುಗಾರ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತು. ಇದಕ್ಕೂ ಮೊದಲು ಮಾಸ್ಟರ್ ಅಸೀಬ್ ಹಾಗೂ ಸಂಗಡಿಗರ ನೇತೃತ್ವದ ಇಷ್ಕೇ ಮದೀನ ಬುರ್ದಾ ಸಂಘದಿಂದ ಬುರ್ದಾ ಮಜ್ಲಿಸ್ ಕಾರ್ಯಕ್ರಮ ನಡೆಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.