ಪುತ್ತೂರು (www.vknews. in) : ಸಾಲ್ಮರ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಯ ಅಧೀನದ ಅಸ್ವಾಲಿಹಾ ವುಮೆನ್ಸ್ ಶರೀಅತ್ ಮತ್ತು ಪಿ.ಯು.ಕಾಲೇಜ್ ಗೆ ಫಾಳಿಲಾ ವುಮೆನ್ಸ್ ಕಾಲೇಜ್ ಕೇಂದ್ರೀಯ ಬೋರ್ಡ್ ( CSWC) ಅಭಿನಂದನಾ ಪತ್ರ ಮತ್ತು ಸ್ಮರಣಿಕೆ ನೀಡಿ ಗೌರವಿಸಿದೆ.
ಫಾಳಿಲಾ – ಫಳೀಲಾ ವಿದ್ಯಾರ್ಥಿನಿಯರ ಇಸ್ಲಾಮಿಕ್ ಕಲಾ ಸಾಹಿತ್ಯ ಸ್ಪರ್ಧೆ ‘ಹಿಯಾ ಫಿಯೆಸ್ಟ ‘ ಕಾರ್ಯಕ್ರಮವು ಬೋರ್ಡ್ ಅಧೀನದ ಕಾಲೇಜ್ ಗಳಿಗೆ ವಲಯ, ಜಿಲ್ಲೆ ಮತ್ತು ರಾಜ್ಯ ಮಟ್ಟಗಳಲ್ಲಿ ನಡೆದಿದ್ದು ,ಕರ್ನಾಟಕ ರಾಜ್ಯ ಮಟ್ಟದ ಕಾರ್ಯಕ್ರಮವು ಇತ್ತೀಚಿಗೆ ಸಾಲ್ಮರ ಮೌಂಟನ್ ವ್ಯೂ ಅಸ್ವಾಲಿಹಾ ವುಮೆನ್ಸ್ ಕಾಲೇಜ್ ನಲ್ಲಿ ನಡೆಸಲಾಗಿತ್ತು, ಈ ಕಾರ್ಯಕ್ರಮವನ್ನು ಯಶಸ್ವಿಯಾಗಿ ಸಂಘಟಿಸಿರುವ ಸಲುವಾಗಿ ಫಾಳಿಲಾ ಕೇಂದ್ರೀಯ ಬೋರ್ಡ್ ಈ ಅಭಿನಂದನಾ ಪತ್ರ, ಸ್ಮರಣಿಕೆ ನೀಡಿ ಗೌರವಿಸಿದೆ. ಕಾಲೇಜ್ ಸಭಾಂಗಣದಲ್ಲಿ ನಡೆದ ಪಿ.ಯು. ಮತ್ತು ಶರೀಅತ್ ಶೈಕ್ಷಣಿಕ ಕಾರ್ಯಾಗಾರದಲ್ಲಿ ಈ ಸ್ಮರಣಿಕೆಯನ್ನು ಕಾಲೇಜ್ ಆಡಳಿತ ಸಮಿತಿಗೆ ಹಸ್ತಾಂತರಿಸಲಾಯಿತು.
ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿ ,ಮಾತನಾಡಿದ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ಪಡೀಲ್ ಅವರು, ಮೌಂಟನ್ ವ್ಯೂ ಅಸ್ವಾಲಿಹಾ ವುಮೆನ್ಸ್ ಕಾಲೇಜ್ ಪಿ.ಯು.ಮತ್ತು ಶರೀಅತ್ ಶಿಕ್ಷಣದಲ್ಲಿ ಉತ್ತಮ ಸಾಧನೆ ಮಾಡುತ್ತಿದ್ದು, ಸತತವಾಗಿ ದ್ವಿತೀಯ ಪಿ.ಯು.ಸಿ. ಯಲ್ಲಿ ಶೇ.ನೂರು ಫಲಿತಾಂಶ ಪಡೆಯುತ್ತಿರುವುದು ಗಮನಾರ್ಹ ವಾಗಿದೆ, ಮುಂದಿನ ಶೈಕ್ಷಣಿಕ ವರ್ಷದ ದಾಖಲಾತಿ ಪ್ರಕ್ರಿಯೆ ಗೆ ಮಾರ್ಚ್ ನಲ್ಲಿ ಚಾಲನೆ ನೀಡಲಾಗುವುದು ಹಾಗೂ ಕಾಲೇಜ್ ನಲ್ಲಿ ಹೊಸದಾಗಿ ಹೆಚ್ಚಿನ ವಿವಿಧ ಸೌಲಭ್ಯಗಳನ್ನು ಏರ್ಪಡಿಸಲಾಗುವುದು ವಿದ್ಯಾರ್ಥಿನಿ ಯರು ಇದರ ಸದುಪಯೋಗ ಪಡೆದು ಕೊಳ್ಳಬೇಕೆಂದು ಕರೆ ನೀಡಿದರು.
ಕಾರ್ಯಕ್ರಮ ವನ್ನು ಉದ್ಘಾಟಿಸಿ ಮಾತನಾಡಿದ ಮೌಂಟನ್ ವ್ಯೂ ಸಮೂಹ ಶಿಕ್ಷಣ ಸಂಸ್ಥೆಯ ಸಂಚಾಲಕರಾದ ಮುಹಮ್ಮದ್ ಸಾಬ್ ಹಾಜಿ ಅವರು , ಲೌಕಿಕ ಶಿಕ್ಷಣ ದ ಜೊತೆಗೆ ಧಾರ್ಮಿಕ ಶಿಕ್ಷಣ ವನ್ನು ಸಮನ್ವಯಿಸಿ ಕಲಿಯುವ ಅವಕಾಶ ಈ ಕಾಲೇಜ್ ನಲ್ಲಿದ್ದು, ಇಲ್ಲಿನ ವಿದ್ಯಾರ್ಥಿನಿಯರು ಶಿಕ್ಷಣ ಹಾಗೂ ಪ್ರತಿಭಾ ಕಾರ್ಯಕ್ರಮ ಗಳಲ್ಲೂ ಉತ್ತಮ ಸಾಧನೆ ಮಾಡುತ್ತಿದ್ದಾರೆ, ಧಾರ್ಮಿಕ ಮತ್ತು ಲೌಕಿಕ ಸಮನ್ವಯ ಶಿಕ್ಷಣದಿಂದ ಮಹಿಳೆಯರಿಗೆ ಉತ್ತಮ ಸಂಸ್ಕಾರಯುತ ಕುಟುಂಬ ಕಟ್ಟಲು ಸಾಧ್ಯವಾಗುತ್ತದೆ ಆದ್ದರಿಂದ ವಿದ್ಯಾರ್ಥಿನಿಯರು ಇಲ್ಲಿ ಪಿ.ಯು.ಸಿ. ಯ ಜೊತೆಗೆ ಫಾಳಿಲಾ ಅಥವಾ ಅಸ್ವಾಲಿಹಾ ಶರೀಅತ್ ಪದವಿ ಶಿಕ್ಷಣ ಪಡೆಯಲು ಸಿಗುವ ಉತ್ತಮ ಅವಕಾಶದ ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು.
ಮೌಂಟನ್ ವ್ಯೂ, ಸಾಲ್ಮರ ಪ್ರೌಢಶಾಲಾ ಮುಖ್ಯೋಪಾಧ್ಯಾಯಿನಿ ಮೋಹನಾಂಗಿ ಅವರು ಮಾತನಾಡಿ, ಇಲ್ಲಿನ ಅಸ್ವಾಲಿಹಾ ವುಮೆನ್ಸ್ ಕಾಲೇಜ್, ಪಿ.ಯು.ಸಿ.ಯಲ್ಲಿ ಉತ್ತಮ ಸಾಧನೆ ಮಾಡುತ್ತಾ ಬಂದಿದ್ದು , ಮೌಂಟನ್ ವ್ಯೂ ನಲ್ಲಿ ಎಸ್ಸೆಸ್ಸೆಲ್ಸಿ ಮುಗಿಸಿದ ಎಲ್ಲಾ ವಿದ್ಯಾರ್ಥಿನಿಯರಿಗೆ ತಮ್ಮ ಪಿ.ಯು.ಶಿಕ್ಷಣವನ್ನು ಇಲ್ಲಿಯೇ ಮುಂದುವರಿಸಲು ಇದು ಉತ್ತಮ ಅವಾಕಾಶವಾಗಿದೆ ಎಂದರು.
ಶಾಲಾ ಶಿಕ್ಷಕ ಅಬ್ದುಲ್ ರವೂಫ್ ಮಾತನಾಡಿ,ಎಸ್ಸೆಸ್ಸೆಲ್ಸಿ ಮುಗಿಸಿದ ವಿದ್ಯಾರ್ಥಿನಿಯರಿಗೆ ಶರೀಅತ್ ಮತ್ತು ಪಿ.ಯು.ನಲ್ಲಿ ಇಲ್ಲಿ ಉತ್ತಮ ಅವಕಾಶವಿದ್ದು ವಿದ್ಯಾರ್ಥಿನಿಯರು ಅದರ ಸದುಪಯೋಗ ಪಡೆದು ಕೊಳ್ಳಬೇಕೆಂದು ಹೇಳಿದರು.
ಕಳೆದ ಸಾಲಿನ ಪಿ.ಯು.ಸಿ. ಯಲ್ಲಿ 97% ಅಂಕ ಪಡೆದ ಸಂಸ್ಥೆಯ ವಿದ್ಯಾರ್ಥಿನಿ ಅಶ್ವಿರಾ ಅವರಿಗೆ ಸ್ಮರಣಿಕೆ ಮತ್ತು ಕ್ಯಾಶ್ ಅವಾರ್ಡ್ ನ್ನು ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಹಾಜಿ ಪಡೀಲ್ ಅವರು ನೀಡಿ ಗೌರವಿಸಿದರು. ಹಾಗೂ ಡಿಸ್ಟಿಂಕ್ಷನ್ ಪಡೆದ ಎಲ್ಲಾ ವಿದ್ಯಾರ್ಥಿನಿಯರಿಗೆ ಸಂಸ್ಥೆಯ ವತಿಯಿಂದ ಸ್ಮರಣಿಕೆ ನೀಡಿ ಅಭಿನಂದಿಲಾಯಿತು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಅಗಲಿದ ಸಂಸ್ಥೆಯ ಕಾರ್ಯಾಲಯ ನಿರ್ವಾಕರಾದ ಯೂಸುಫ್ ಕೂಟತ್ತಾನ ಅವರ ತಾಯಿಯ ಹೆಸರಿನಲ್ಲಿ ಖತಮುಲ್ ಕುರ್ ಪಾರಾಯಣ ಮತ್ತು ವಿಶೇಷ ಪ್ರಾರ್ಥನೆ ನಡೆಸಲಾಯಿತು. ಉಸ್ತಾದ್ ಕೆ.ಎಂ.ಎ. ಕೊಡುಂಗಾಯಿ ಸ್ವಾಗತಿಸಿ ಕಾಲೇಜ್ ನ ಶೈಕ್ಷಣಿಕ ಸಾಧನೆ ಮತ್ತು ಫಾಳಿಲಾ ಮತ್ತು ಅಸ್ವಾಲಿಹಾ ಶಿಕ್ಷಣದ ಬಗ್ಗೆ ಮಾಹಿತಿ ನೀಡಿದರು. ಸಂಸ್ಥೆಯ ಕಾರ್ಯಾಲಯ ನಿರ್ವಾಹಕರಾದ ಯೂಸುಫ್ ಕೂಟತ್ತಾನ ಹಾಗೂ ಅಬ್ದುಲ್ ಹಮೀದ್ ಮತ್ತು ದೈಹಿಕ ಶಿಕ್ಷಣ ಶಿಕ್ಷಕ ಅಶ್ರಫ್ ಅವರು ವಿವಿಧ ಕಾರ್ಯಕ್ರಮ ನಿರ್ವಹಿಸಿದರು.
ವರದಿ ; ಅಬ್ದುಲ್ ಖಾದರ್ ಪಾಟ್ರಕೋಡಿ
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.