(www.vknews. in) ; ದಕ್ಷಿಣ ಕರ್ನಾಟಕ ಸುನ್ನಿ ಸೆಂಟರ್ ಮಂಗಳೂರು ದಮ್ಮಾಮ್ ವಲಯ ಅಧೀನಕ್ಕೋಳಪಟ್ಟ ಹಪರ್ ಅಲ್ ಬಾತಿನ್ ಘಟಕದ 29ನೇ ವಾರ್ಷಿಕ ಮಹಾಸಭೆ 15,ಫೆಬ್ರವರಿ 2024 ಗುರುವಾರ ಅಸ್ತ ಶುಕ್ರವಾರ ರಾತ್ರಿ ಅಧ್ಯಕ್ಷ ಮುಹಮ್ಮದ್ ಮದನಿ ಮುರ್ಡೇಶ್ವರ್ ರವರ ಘನ ಅಧ್ಯಕ್ಷತೆಯಲ್ಲಿ ಜರಗಿತು.ಸಿರಾಜ್ ಕುಂತೂರ್ ರವರು ಕಾರ್ಯಕ್ರಮ ನಿರೂಪಿಸಿದರು.ಸಾದಿಕ್ ಸಾಗರ್ ರವರು ಖಿರಾಹತ್ ಪಠಿಸಿದರು.ಸುಲೈಮಾನ್ ಸುಣ್ಣಮೂಳೆಯವರು ಸಭೆಗೆ ಬಂದವರನ್ನು ಆದರದಿಂದ ಸ್ವಾಗತಿಸಿದರು.ಗೌರವಾಧ್ಯಕ್ಷ ನಜೀಮ್ ಮದನಿಯವರು ಅಲ್ಲಾಹನ ಪರಿಶುದ್ಧ ನಾಮದಿಂದ ಸಮಾರಂಭ ವನ್ನು ಉದ್ಘಾಟಸಿದರು.
ರಿಯಾಝ್ ಉಳ್ಳಾಲರವರು ವಾರ್ಷಿಕ ವರದಿ ವಾಚಿಸಿದರು. ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಮ್ಮುಂಜೆ ವಾರ್ಷಿಕ ಪ್ರವಾರ್ತನ ವರದಿ ಮಂಡಿಸಿ ಅನುಮೋದನೆಯನ್ನು ಪಡೆದರು. ಅಧ್ಯಕ್ಷ ಸ್ಥಾನ ವಹಿಸಿ ಮಾತನಾಡಿದ ಮುಹಮ್ಮದ್ ಮದನಿ ಮುರ್ಡೇಶ್ವರ್ ರವರು ಡಿಕೆಯಸ್ಸಿಯ ಅಭಿವೃದ್ಧಿಗಾಗಿ ಇನ್ನೂ ಮುಂದಕ್ಕೂ ತಾವುಗಳೆಲ್ಲರ ತನು-ಮನ-ಧನ ದೊಂದಿಗಿನ ಸಹಾಯ ಸಹಕಾರ ಅಗತ್ಯವಿದೆ. ತಾವುಗಳೆಲ್ಲರೂ ಸಹಕರಿಸಿ ಯಶಸ್ವಿಗೊಳಿಸಿರಿ ಎಂದು ಹಿತವಚನ ನೀಡಿದರು.
ಡಿಕೆಯಸ್ಸಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಅಝೀಝ್ ಆತೂರುರವರ ನೇತೃತ್ವದಲ್ಲಿ 2024-25 ನೇ ಸಾಲಿಗೆ ನೂತನ ಸಮಿತಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಮುಹಮ್ಮದ್ ಮದನಿ ಮುರ್ಡೇಶ್ವರ್, ಗೌರವಾಧ್ಯಕ್ಷರಾಗಿ ಉಸ್ತಾದ್ ನಜೀಮ್ ಮದನಿ, ಪ್ರಧಾನ ಕಾರ್ಯದರ್ಶಿಯಾಗಿ ಮುಹಮ್ಮದ್ ಅಮ್ಮುಂಜೆ ಹಾಗೂ ಕೋಶಾಧಿಕಾರಿ ಯಾಗಿ ಅಬ್ದುಲ್ ಹಮೀದ್ ಯಡೂರ್ ಆಯ್ಕೆಗೊಂಡರು.
ಉಪಾಧ್ಯಕ್ಷರಾಗಿ ಸಿರಾಜ್ ಕುಂತೂರ್, ಅಹ್ಮದ್ ಶಾಹ್ ಜೊತೆ ಕಾರ್ಯದರ್ಶಿಯಾಗಿ: ಸುಲೈಮಾನ್ ಸುಣ್ಣಮೂಳೆ, ಹೈದರ್ ಮರ್ದಾಳ
ಕಮ್ಯುನಿಕೇಷನ್ ಸೆಕ್ರೆಟರಿಯಾಗಿ ರಿಯಾಝ್ ಉಳ್ಳಾಲ
ಸಂಚಾಲಕರಾಗಿ: ಹಸನ್ ಆರಗ,ರಫೀಕ್ ಕುಂತೂರು,ಬಾಸಿಲ್ ಸರಳಿಕಟ್ಟೆ, ರಫೀಕ್ ಪುತ್ತೂರು,ಖಾದರ್ ಬಜಾಲ್
ಸಲಹೆಗರರಾಗಿ:ಸಾದಿಕ್ ಸಾಗರ್,ಅಬ್ಬುರಶೀದ್ ಕುಂಜಾಲ್,ಅಕ್ಬರ್ ಯಡೂರ್,ಸಿದ್ದಿಕ್ ಕನ್ಯಾನ
ಲೆಕ್ಕ ಪರಿಶೋದಕರಾಗಿ :ಅಸ್ಲಾಂ ಎರ್ಮಾಲ್ ರವರು ಆಯ್ಕೆಗೊಂಡರು. ಮುಖ್ಯ ಅತಿಥಿಯಾಗಿ ಡಿಕೆಯಸ್ಸಿ ಕೇಂದ್ರ ಸಮಿತಿಯ ಕಾರ್ಯದರ್ಶಿ ಅಬೂಬಕ್ಕರ್ ಬರ್ವ ಹಾಗೂ ಹಪರ್ ಅಲ್ ಬಾತಿನ್ ಉಸ್ತುವಾರಿ ಅಬ್ದುಲ್ ಕರೀಂ ಪಾಣೆಮಂಗಳೂರು ಸಂದರ್ಬೋ ಚಿತವಾಗಿ ಮಾತನಾಡಿದರು.
ಮುಹಮ್ಮದ್ ಅಮ್ಮುಂಜೆಯವರು ಹಾತೀಮ್ ಕುಳೂರ್, ಇರ್ಷಾದ್ ಉಚ್ಚಿಲ್, ಸುಲೈಮಾನ್ ಸೂರಿಂಜೆ ಮತ್ತು ಅಬ್ಬುರಶೀದ್ ಕುಂಜಾಲ್ ರವರ ಶುಭಾಶಯಗಳನ್ನು ಓದಿ ತಿಳಿಸಿದರು.
ನೂತನ ಅಧ್ಯಕ್ಷರಾಗಿ ನೇಮಕಗೊಂಡ ಮುಹಮ್ಮದ್ ಮದನಿ ಮುರ್ಡೇಶ್ವರ್ ರವರು ಮಾತನಾಡಿ ಡಿಕೆಯಸ್ಸಿ ಅಭಿವೃದ್ಧಿಗಾಗಿ ನಮ್ಮೊಂದಿಗೆ ಕೈಜೋಡಿಸಿರಿ ಎಂದು ವಿನಂತಿಸಿದರು.ನೂತನ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ಅಮ್ಮುಂಜೆ ಧನ್ಯವಾದಗೈದರು. ಕೊನೆಯಲ್ಲಿ ಕಪ್ಪರಾತುಲ್ ಮಜ್ಲೀಸ್ ಮತ್ತು ನೆಬಿ ಕರೀಮ್ (ಸ. ಅ) ರವರ ಮೇಲಿನ ಸ್ವಲಾತ್ ನೊಂದಿಗೆ ಅಂದಿನ ಸಭೆಯನ್ನು ಕೊನೆಗೊಳಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.