(www.vknews. in) ; ಫೆಬ್ರವರಿ 1 ರಂದು ಆರಂಭವಾಗಿದ್ದ ತಾಯಿಫ್ ನೈಟ್ 2024 ಫೆಬ್ರವರಿ 23 ರ ತನಕ ರಜಾದಿನಗಳಲ್ಲಿ ವಿವಿಧ ಪಂದ್ಯಾವಳಿಗಳ ಮೂಲಕ ಜರುಗಿತ್ತು.
ವಿಜೇತರು: ತಾ: 1-2-2024 ರಂದು ಐದು ತಂಡಗಳು ಭಾಗವಹಿಸಿದ್ದ ಹೊನಲು ಬೆಳಕಿನ ಕ್ರಿಕೆಟ್ ಪಂದ್ಯಾಟದಲ್ಲಿ ರಝಾಕ್ ಕೊಡಂಗಾಯಿ ನಾಯಕತ್ವದ ತಾಯಿಪ್ ನೈಟ್ ರೈಡರ್ಸ್ ತಂಡವು ಪ್ರಥಮ ಸ್ಥಾನವನ್ನು ಪಡೆಯಿತು. ಅಲ್ತಾಫ್ ಗುರುಪುರ ನೇತೃತ್ವದ ಹಿಲಾಲ್ ಬ್ರದರ್ಸ್ ತಂಡವು ದ್ವಿತೀಯ ಸ್ಥಾನಕ್ಕೆ ಪಾತ್ರವಾಯಿತು.
ತಾ. 15-2-2024 ರಂದು ಏಳು ತಂಡಗಳು ಭಾಗವಹಿಸಿದ್ದ ವಾಲಿಬಾಲ್ ಪಂದ್ಯಾಟದಲ್ಲಿ ಅಝ್ವೀರ್ ಗುರುಪುರ ನೇತೃತ್ವದ ಫ್ರೆಂಡ್ಸ್ ತಾಯಿಫ್ ತಂಡವು ಪ್ರಥಮ ಸ್ಥಾನ ಪಡೆಯಿತು. ಅಝ್ವೀರ್ ಗಾಣೆಮಾರ್ ನೇತೃತ್ವದ ಬ್ಲೋಕ್ ಮಾಸ್ಟರ್ಸ್ ತಂಡವು ದ್ವಿತೀಯ ಸ್ಥಾನ ಗಳಿಸಿತು. ಅದೇ ದಿನ ನಡೆದ ಆರು ತಂಡಗಳು ಭಾಗವಹಿಸಿದ ಕಬಡ್ಡಿ ಪಂದ್ಯಾಟ ಫೈನಲ್ ತನಕ ತಲುಪಿದಾಗ ಮಳೆಯ ಅಡಚಣೆಯಿಂದಾಗಿ ಪಂದ್ಯಾಟವನ್ನು ರದ್ದುಗೊಳಿಸಲಾಗಿತ್ತು. 23-2-2024 ರಂದು ಟಾಸ್ ಮೂಲಕ ವಿಜಯಿ ತಂಡವನ್ನು ಆಯ್ಕೆ ಮಾಡಲಾಯಿತು. ನೌಫಲ್ ಅಮ್ಮಿ ಕರ್ವೇಲ್ ನಾಯಕತ್ವದ ಸೆವೆನ್ ಸ್ಟಾರ್ಸ್ ತಂಡ ಪ್ರಥಮಸ್ಥಾನಕ್ಕೆ ಪಾತ್ರವಾಯಿತು. ದಾವೂದ್ ಗುರುಪುರ ನಾಯಕತ್ವದ ತಂಡ ದ್ವಿತೀಯ ಸ್ಥಾನಕ್ಕೆ ಅರ್ಹವಾಯಿತು.
23-2-2024ರಂದು ನಡೆದ ಹಗ್ಗ ಜಗ್ಗಾಟ ಸ್ಪರ್ಧೆಯಲ್ಲಿ 4 ತಂಡಗಳು ಭಾಗವಹಿಸಿದ್ದವು. ಸಲೀಂ ಪರ್ತಿಪ್ಪಾಡಿ ನಾಯಕತ್ವದ ಜಿಗ್’ರ್ ಫ್ರೆಂಡ್ಸ್ ತಾಯಿಫ್ ಪ್ರಥಮ ಸ್ಥಾನ ಪಡೆಯಿತು. ಮನ್ಸೂರ್ ಗುರುಪುರ ನೇತೃತ್ವದ ಚಾಲೆಂಜಿಂಗ್ ಬಾಯ್ಸ್ ತಾಯಿಫ್ ಎರಡನೆಯ ಸ್ಥಾನ ಪಡೆಯಿತು. ಎಲ್ಲಾ ಪಂದ್ಯಾಟಗಳಲ್ಲೂ ತಂಡಗಳ ನಡುವಿನ ಬಿರುಸಿನ ಹೋರಾಟ ಹಾಗೂ ಜಿದ್ದಾಜಿದ್ದ ಹಣಾಹಣಿ ಪ್ರೇಕ್ಷಕರನ್ನು ರಂಜಿಸಿತ್ತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.