(www.vknews.in) ; ಮೂಲ್ಕಿ ಕಾರ್ನಾಡಿನ ಒಂದು ಸುಪ್ರಸಿದ್ದ ಮನೆತನ ಕಲ್ಪಂಡೆ ಹೌಸ್… ಒಂದು ಕಾಲದಲ್ಲಿ ಕೆಲವೊಂದು ಸಾಹಸ, ಸಾಮರ್ಥ್ಯ, ಧೈರ್ಯಕ್ಕೆ ಬಹಳ ಹೆಸರುವಾಸಿಯಾಗಿತ್ತು
ಈ ಮನೆಯವರಲ್ಲಿ ಇರುವ ಒಂದು ವಿಶೇಷತಃ ಗುಣಗಳೇನೆಂದರೆ ಯಾವುದೇ ಜಾತಿ, ಧರ್ಮ, ಬಣ್ಣ, ಭಾಷೆಯನ್ನು ನೋಡದೆ ಅವರಲ್ಲೋಬ್ಬರಾಗಿ ಅವರ ಎಲ್ಲಾ ಸುಖ, ದುಃಖಗಳಲ್ಲಿ ಭಾಗಿಯಾಗಿ ಎಲ್ಲರೊಂದಿಗೆ ಅತ್ಮೀಯವಾಗಿ ಬೆರೆಯುವ ಸಂಪನ್ನವುಳ್ಳಂತಹ ಮನೋಭಾವ. ಯಾರೇ, ಯಾವುದೇ ಕಷ್ಟ, ಸಂಕಷ್ಟದಲ್ಲಿದ್ದಾಗ ತನು, ಮನಗಳಿಂದ, ಭುಜಕ್ಕೆ, ಭುಜ ಕೊಟ್ಟು ಸ್ಪಂದಿಸುವುದು ಅ ಮನೆಯವರ ವಿಶೇಷ ಗುಣಗಳಲ್ಲೊಂದಾಗಿತ್ತು.
ಅಂತಹ ಮನೆಯಲ್ಲಿ ನಾಲ್ಕನೇ ಮಗನಾಗಿ ಹುಟ್ಟಿದವರೇ ಹಸನ್ ಯಾನೆ ಕಲ್ಪಂಡೆ ಹಸನ್…. ಒಂದು ಕಾಲದಲ್ಲಿ ಧೈರ್ಯ, ತಾಕತ್ತು, ಹೊಡೆದಾಟಗಳಿಂದ ಬಹಳ ಹೆಸರುವಾಸಿಯಾಗಿದ್ದವರು…. ಅವರೊಬ್ಬ ಪೈಲ್ವಾನ್ ಆಗಿದ್ದರು. ಕಲ್ಪಂಡೆ ಹಸನ್ ಕಾರ್ನಾಡಿನಲ್ಲಿ ಇದ್ದಾರೆಂದರೆ ಯಾರಿಗೂ, ಯಾವುದೇ ರೀತಿಯ ಭಯ ಇರಲಿಲ್ಲ. ಯಾರೇ ಹೊರಗಿನವರು ಬಂದು ಕಾರ್ನಾಡ್, ಮೂಲ್ಕಿಯವರ ಮೈ ಮುಟ್ಟುವಂತಿರಲಿಲ್ಲ. ನಾನು ಬಾಲ್ಯದಲ್ಲಿ ನಮ್ಮಲ್ಲಿ ಕೆಲವರು ಟೈಗರ್ ಪ್ರಬಾಕರ್ ಅವರ ಸಿನೆಮಾದಲ್ಲಿ ಮಾಡುತ್ತಿರುವ ಸಾಹಸವನ್ನು, ಶಕ್ತಿಯನ್ನು ಕೊಂಡಾಡುತ್ತಿದ್ದರು, ಅವರ ಚಿತ್ರದಲ್ಲಿ ಚಲಿಸುವ ಕಾರನ್ನು ಹಿಡಿದು ನಿಲ್ಲಿಸುವುದು, ಎದುರಾಳಿಯ ಕಾಲನ್ನು ಹಿಡಿದು ನೆಲಕ್ಕೆ ಬಡಿಯುವುದು ಹಾಗೂ ಇತ್ಯಾದಿಗಳನ್ನು ಹೇಳುವುತ್ತಿದ್ದುದ್ದನ್ನು ನಾನು ಕೇಳುತ್ತಿದ್ದೆ ಅದರೆ ಈ ಕಲ್ಪಂಡೆ ಹಸನ್ ಅವರ ಸಾಹಸಗಳು ನಾವು ಕಣ್ಣಾರೆ ಕಂಡು ನೋಡಿ ಬೆಳೆದವರು.
ದೊಡ್ದ, ದೊಡ್ಡ ಮರದ ದಿಮ್ಮಿಗಳನ್ನು ಭುಜದಲ್ಲಿಟ್ಟು ಲಾರಿಗೆ ಲೋಡು ಮಾಡುತ್ತಿದ್ದದ್ದು, ಕೆಟ್ಟು ನಿಂತ ಆಂಬಾಸಿಡರ್ ಕಾರನ್ನು ಎತ್ತಿ ಬದಿಗೆ ಇಡುವುದು, ವಿಷ ಸರ್ಪಗಳನ್ನು ಬರಿ ಕೈಯಲ್ಲಿ ಹಿಡಿಯುವುದು, ಹುಚ್ಚು ನಾಯಿಯ ಕಾಲನ್ನು ಹಿಡಿದು ನೆಲಕ್ಕೆ ಬಡಿದು ಕೊಲ್ಲುವುದು, ಕೆಸರಿನಲ್ಲಿ ಹೂತುಹೋಗಿ ಸಾವಿನಂಚಿನಲ್ಲಿರುವ ಹಸುಗಳನ್ನು ರಕ್ಷಿಸುವುದು, ಬಾವಿಯೊಳಗೆ ಬಿದ್ದು ಸತ್ತು ನಾರುತ್ತಿರುವ ಮ್ರತ ದೇಹಗಳನ್ನು ಮೇಲಕ್ಕೆತ್ತುವುದು, ಹುಲಿಯನ್ನು ಜೀವಂತವಾಗಿ ಹಿಡಿದದ್ದು, ಎದುರಾಳಿಯ ಸೊಂಟವನ್ನು ಹಿಡಿದು ಮೇಲಕ್ಕೆತ್ತಿ ನೆಲಕ್ಕೆ ಅಪ್ಪಳಿಸುತ್ತಿದ್ದದ್ದು ಹೀಗೇ ಬರೆಯಲು ಹೊರಟರೆ ಸಮಯ ಸಾಕಾಗಲಿಕ್ಕಿಲ್ಲ ಹಾಗೂ ಇತ್ಯಾದಿ ಹಲವಾರು ತರಹದ ಸಾಮರ್ಥ್ಯವನ್ನು ಹೊಂದಿದಂತಹ ಈ ಕಲ್ಪಂಡೆ ಹಸನ್ ಎಲ್ಲರ ಮನೆಯ ಮಗನಾಗಿ ಬೆಳೆದು ಬಂದಂತಹ ಒಬ್ಬ ಕಾರ್ನಾಡಿನ ಎಲ್ಲಾ ಮನೆಯವರ ಒಬ್ಬ ನೆಚ್ಚಿನ, ನಂಬಿಕೆ, ವಿಶ್ವಾಸದ ವ್ಯಕ್ತಿಯಾಗಿದ್ದರು.
ಅವರ ಅಂದಿನ ಸಾಮರ್ಥ್ಯ, ಧೈರ್ಯ, ಸಾಧನೆ ಹಾಗೂ ಮಾನವೀಯತೆಯನ್ನು ಪರಿಗಣಿಸಿ ಈ ವರುಷ ಮೂಲ್ಕಿಯ ಲಯನ್ಸ್ ಕ್ಲಬ್ ನವರು ಸನ್ಮಾಸಿದ್ದು ಬಹಳ ಮೆಚ್ಚುವಂತಹ ಘನ ಕಾರ್ಯ ಹಾಗೂ ಇದು ಒಂದು ಮೂಲ್ಕಿಯ ಘನತೆ ಎತ್ತಿ ಹಿಡಿದು ಹಾಗೂ ಕಲ್ಪಂಡೆಯ ಮನೆತನಕ್ಕೆ ಒಂದು ಗೌರವವನ್ನು ಪಡೆಯುವಂತಾಯಿತು…
ಕಲ್ಪಂಡೆ ಹಸನ್ ನಂತಹ ಒಬ್ಬ ಮಹಾನ್ ಸಾಹಸಿಗ ಇನ್ನೂ ಮುಂದಕ್ಕೆ ಬರಲು ಸಾಧ್ಯವಿಲ್ಲ ಇಂತಹ ವ್ಯಕ್ತಿಯನ್ನು ಪಡೆದ ಕಾರ್ನಾಡಿಗರು ಧನ್ಯರು….
ಕಾರ್ನಾಡ್…!!!
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.