(www.vknews.in) ; ದಕ್ಷಿಣ ಕನ್ನಡ ಜಿಲ್ಲೆಯ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿಯಾಧ ಪದ್ಮರಾಜ್ ಪೂಜಾರಿಯವರು13/04/2024 ರವಿವಾರಾ ಬೆಳಿಗ್ಗೆ 8 ಗೆಂಟೆಗೆ ತಲಪಾಡಿ ಗ್ರಾಮದ ಕೆ ಸಿ ರೋಡ್ ಜುಂಕ್ಷನಿಗೆ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ತೊಕ್ಕೊಟ್ಟು, ಕುತ್ತಾರು ಭಾಗ ಸೇರಿದಂತೆ ಅಂಬ್ಲಮೊಗರು, ಅಸೈಗೋಳಿ, ಕೊಣಾಜೆ, ಗ್ರಾಮಚಾವಡಿ, ಮುಡಿಪು, ಹರೇಕಳ, ನರಿಂಗಾನ, ಚೇಳೂರು, ಕಂಬಳಪದವು, ಕುರ್ನಾಡು, ಬೋಳಿಯಾರ್, ಮಂಜನಾಡಿ ಮೊದಲಾದೆಡೆ ಪ್ರಚಾರ ಕಾರ್ಯ ನಡೆಸಿದರು.
ಕುತ್ತಾರು ಬಳಿ ಆಟೋ ರಿಕ್ಷಾ ಹತ್ತಿದ ಪದ್ಮರಾಜ್ ಅವರು ಸುತ್ತ ಮುತ್ತಲಿನ ಪ್ರದೇಶಗಳಿಗೆ ಆಟೋದಲ್ಲೇ ತೆರಳಿ ಮತ ಯಾಚನೆ ನಡೆಸಿದರು. ಸ್ಥಳೀಯ ಶಾಸಕ ಯು.ಟಿ ಖಾದರ್ ಅವರ ಸಹೋದರ ಡಾ.ಇಫ್ತಿಕಾರ್ ಆಲಿ ಅವರು ಪದ್ಮರಾಜ್ ಅವರಿಗೆ ಸಾಥ್ ನೀಡಿದರು. ಕ್ಷೇತ್ರದ ಅನೇಕ ಧಾರ್ಮಿಕ ಕ್ಷೇತ್ರಗಳಿಗೂ ಭೇಟಿ ನೀಡಿ ಪ್ರಾರ್ಥನೆ ಸಲ್ಲಿಸಿದರು.
ಗೇರು ಅಭಿವೃದ್ಧಿ ನಿಗಮ ಅಧ್ಯಕ್ಷೆ ಮಮತಾ ಗಟ್ಟಿ, ಮೂಡಾ ಅಧ್ಯಕ್ಷ ಸದಾಶಿವ ಉಳ್ಳಾಲ್,ಜಿಲ್ಲಾ ಧಾರ್ಮಿಕ ಪರಿಷತ್ ಸದಸ್ಯ ಸುರೇಶ್ ಭಟ್ನಗರ,ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಶೆಟ್ಟಿ ಬೋಳಿಯಾರು, ಮುಡಿಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪ್ರಶಾಂತ್ ಕಾಜವ, ಕಾರ್ಯದರ್ಶಿ ಮನ್ಸೂರ್ ಆಲಿ, ಅಬ್ದುಲ್ ಜಲೀಲ್ ಮೋಂಟುಗೋಳಿ, ಮಾಜಿ ಅಧ್ಯಕ್ಷ ಈಶ್ವರ್ ಉಳ್ಳಾಲ್, ಪ್ರಮುಖರಾದ ಕಣಚೂರು ಮೋನು,ಟಿ.ಎಸ್. ಅಬ್ದುಲ್ಲಾ, ನಾಸೀರ್ ನಡುಪದವು, ಚಂದ್ರಹಾಸ್ ಕರ್ಕೇರ, ದೀಪಕ್ ಪಿಲಾರ್,ಪುರುಷೋತ್ತಮ ಶೆಟ್ಟಿ ಪಿಲಾರು,ದಿನೇಶ್ ಕುಂಪಲ, ಸುರೇಖಾ ಚಂದ್ರಹಾಸ್, ಚಂದ್ರಿಕಾ ರೈ,ಅಹ್ಮದ್ ಅಜ್ಜಿನಡ್ಕ, ಸಲಾಂ ಉಚ್ಚಿಲ, ನಾಸೀರ್ ಕೆ.ಸಿ. ರೋಡ್,ಪ್ರಕಾಶ್ ಕುಂಪಲ, ಭಾಸ್ಕರ್ ಕುಲಾಲ್, ನವೀನ್ ಡಿಸೋಜಾ,ಮ್ಯಾಕ್ಸಿಂ ಡಿಸೋಜಾ,ವಿಲ್ಮಾ ಡಿಸೋಜಾ, ಟಿ.ಎಸ್. ನಾಸೀರ್ ಸಾಮಣಿಗೆ, ಇಕ್ಬಾಲ್ ಸಾಮಣಿಗೆ, ಶೌಕತ್ ಅಲಿ, ಅಬ್ದುಲ್ ರಹಿಮಾನ್ ಕೋಡಿಜಾಲ್, ರಫೀಕ್ ಪಜೀರು ನೂರಾರು ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.