ಬಂಟ್ವಾಳ (www.vknews. in) : ಬೈಕಿನಿಂದ ಬಿದ್ದು ಮಹಿಳೆಯೋರ್ವರು ಗಾಯಗೊಂಡು ಆಸ್ಪತ್ರೆಗೆ ದಾಖಲಾದ ಘಟನೆ ಮೂಡುಪಡುಕೋಡಿ ಗ್ರಾಮದ ಮೂರ್ಜೆ ಶಾಲಾ ಬಳಿ ಸಂಭವಿಸಿದೆ.
ಗಾಯಗೊಂಡ ಮಹಿಳೆಯನ್ನು ಇಲ್ಲಿನ ನಿವಾಸಿ ನಸೀಮಾ ಎಂದು ಹೆಸರಿಸಲಾಗಿದೆ. ಇವರು ತಮ್ಮ ಸಂಬಂಧಿ ಮಹಮ್ಮದ್ ಫಾರೂಕ್ ಅವರ ಬೈಕಿನಲ್ಲಿ ಬಂಟ್ವಾಳ-ಕಡೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ತೆರಳುತ್ತಿದ್ದ ವೇಳೆ ಮೂರ್ಜೆ ಶಾಲಾ ಬಳಿ ಅಯತಪ್ಪಿ ರಸ್ತೆಗೆ ಬಿದ್ದಿದ್ದಾರೆ.
ತಕ್ಷಣ ಅವರನ್ನು ಬೈಕ್ ಸವಾರ ಹಾಗೂ ಸ್ಥಳೀಯರು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ಸಾಗಿಸಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಈ ಬಗ್ಗೆ ಗಾಯಾಳು ನಸೀಮಾ ಅವರ ಪುತ್ರ ಮಹಮ್ಮದ್ ಅಫೀಝ್ ಅವರು ನೀಡಿದ ದೂರಿನಂತೆ ಪೂಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.