ದಾವಣಗೆರೆ (www.vknews. in) : ಮಾನಸಧಾರ ಕೇಂದ್ರದಲ್ಲಿ ಸ್ಕಿಜೋಪ್ರಿನಿಯ ಅರಿವು ದಿನಚರಣೆ ಕಾರ್ಯಕ್ರಮ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮ ದಾವಣಗೆರೆ ಮತ್ತು ಮಾನಸಧಾರ ಸಮುದಾಯ ಮಾನಸಿಕ ಆರೋಗ್ಯ ಕೇಂದ್ರ ದಾವಣಗೆರೆ ಇವರ ಸಂಯುಕ್ತಶ್ರಯದಲ್ಲಿ ಸ್ಕಿಜೋಪ್ರಿನಿಯ ಅರಿವು ದಿನಚರಣೆ ಪ್ರಯುಕ್ತ ಮಾನಸಾಧಾರ ಕೇಂದ್ರದಲ್ಿನ ನಿವಾಸಿಗಳು ಮತ್ತು ಪೋಷಕರುಗಳಿಗೆ ಅರಿವು ಮೂಡಿಸಲಾಯಿತು.
ಈ ಸಂದರ್ಭದಲ್ಲಿ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರುವುದರ ಮೂಲಕ ಉದ್ಘಾಟಿಸಿ ಮಾತನಾಡಿದ ಡಾ. ಐಶ್ವರ್ಯ ಜೆ. ಜೆ. ಎಂ ಮಹಾವಿದ್ಯಾಲಯ ಕಾಲೇಜಿನ ಮನೋವೈದ್ಯಕಿಯ ಸಂಶೋಧನ ವಿದ್ಯಾರ್ಥಿ ಮಾತನಾಡಿ ಇದು ಸ್ಕಿಜೋಪ್ರಿನಿಯ ಒಂದು ತೀವ್ರತರ ಕಾಯಿಲೆಯಾಗಿದ್ದು ಈ ಕಾಯಿಲೆ 15 ರಿಂದ 25 ವಯಸ್ಕರಿಗೆ ಬರುವಂಥದ್ದು ಈ ಖಾಯಿಲೆಯ ಲಕ್ಷಣಗಳ ನೋಡುವುದಾದರೆ ಒಬ್ಬರೇ ಮಾತನಾಡುವುದು, ನಗುವುದು, ಅನುಮಾನ ಪಡುವುದು, ಸಮಾಜದ ದೂರ ಇರುವುದು, ಇತರರಿಗೆ ಅರ್ಥವಾಗದ ಇರುವ ಅಸಂಬದ್ಧವಾಗಿ ಮಾತನಾಡುವುದು. ಈ ಕಾಯಿಲೆ ಇರುವವರಿಗೆ ಅವರ ಆಲೋಚನೆ ಭಾವನೆಗಳಲ್ಲಿ ವರ್ತನೆಗಳಲ್ಲಿ ಮನಸ್ಸಿನ ಕ್ರಿಯೆಗಳಲ್ಲಿ ತೊಂದರೆ ಉಂಟಾಗುತ್ತಿರುತ್ತದೆ ಮತ್ತು ಈ ಕಾಯಿಲೆಯು ಯಾವುದೇ ಮಾಟ ಮಂತ್ರದಿಂದ, ದೋಷದಿಂದ ಬರುವಂತದ್ದಲ್ಲ ಮೆದುಳಿಯನ್ನಲ್ಲಾಗುವ ರಾಸಾಯನಿಕ ಬದಲಾವಣೆಗಳಿಂದ ಆಗುವಂಥದ್ದು , ಆದ್ದರಿಂದ ಸ್ಕಿಜೋಪ್ರಿನಿಯ ಕಾಯಿಲೆಗೆ ಉತ್ತಮ ಚಿಕಿತ್ಸೆ ಇದ್ದು. ಪೋಷಕರು ಕೂಡಲೇ ಕಾಯಿಲೆ ಇರುವ ವ್ಯಕ್ತಿಯನ್ನು ಮನೋವೈದ್ಯರ ಬಳಿ ಕರೆದುಕೊಂಡು ನಂತರ ಚಿಕಿತ್ಸೆ ಕೊಡಿಸಿ ಅವರಿಗೆ ಉತ್ತಮವಾದ ಆರೈಕೆಯನ್ನು ಮಾಡಿದಾಗ ಸಮಾಜದಲ್ಲಿ ನಮ್ಮಂತೆ ಬದುಕಲು ಸಹಾಯವಾಗುತ್ತದೆ ಎಂದು ಕಿವಿ ಮಾತನ್ನು ಹೇಳಿದರು
ನಂತರ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸೈಕ್ಯಾಟ್ರಿಕ್ ಸೋಶಿಯಲ್ ವರ್ಕರ್ ಸಂತೋಷ್ ಕುಮಾರ್ ಅವರು ಮಾತನಾಡಿ ಸ್ಕಿಜೋ ಪ್ರಿನಿಯ ಕಾಯಿಲೆಗಳ ವ್ಯಕ್ತಿಗಳು ಮಾನಸಾಗರ ಸಮುದಯ ಹಗಲು ಆರೈಕೆ ಕೇಂದ್ರದಲ್ಲಿ 250 ಕ್ಕೂ ಹೆಚ್ಚು ಜನ ತರಬೇತಿಯನ್ನು ಪಡೆದು ಗುಣಮುಖರಾಗಿ ಜೀವನವನ್ನು ಎಲ್ಲಿ ತರಬೇತಿಗೆ ಬರುವುದರಿಂದ ವಿಧ ವಿಧವಾದ ಜೀವನ ಕೌಶಲ್ಯಗಳನ್ನು ಕರೆಯುತ್ತಾ ತಮ್ಮ ಸಾಮರ್ಥ್ಯವನ್ನು ಅರಿತು ಸಮಾಜದಲ್ಲಿ ಆರ್ಥಿಕವಾಗಿ ಸಾಮಾಜಿಕವಾಗಿ ಸಬಲರಾಗಿ ದುಡಿಯುತ್ತಿದ್ದಾರೆ. ಈ ಕೇಂದ್ರದಲ್ಲಿ ಧ್ಯಾನ, ಯೋಗ, ಪ್ರಾರ್ಥನೆ, ಅಗರಬತ್ತಿ, ಮ್ಯಾಟ್ ಮೇಕಿಂಗ್, ಟೈಲರಿಂಗ್, ಕಂಪ್ಯೂಟರ್, ಮನರಂಜನೆ ಸೇರಿದಂತೆ ಇನ್ನಿತರ ಕೌಶಲ್ಯಗಳನ್ನು ತರಬೇತಿ ನೀಡಲಾಗುತ್ತಿದೆ ಆದ್ದರಿಂದ ಪೋಷಕರು ತಮ್ಮ ಮನೆಯಲ್ಲಿರುವ ಕಾಯಿಲೆ ಉಳ್ಳ ವ್ಯಕ್ತಿಯನ್ನು ಸ್ವಇಚ್ಛೆಯಿಂದ ಕಳುಹಿಸಿ ಅವರನ್ನು ಸಮಾಜದ ಮುಖ್ಯವಾಗಿ ನಮ್ಮ ಇಲಾಖೆ ಸಂಸ್ಥೆ ಜೊತೆ ಕೈಜೋಡಿಸಬೇಕೆಂದು ಸಲಹೆ ನೀಡಿದರು. ಈ ಅಲ್ಲಿನ ಮನೋರೋಗಿಗಳಿಗೆ ಮಾನಸಿಕ ಆರೋಗ್ಯ ಶಿಬಿರವನ್ನು ನಡೆಸಿ ಆಪ್ತ ಸಮಾಲೋಚನೆ , ಚಿಕಿತ್ಸೆ ನೀಡಲಾಯಿತು
ಈ ಸಂದರ್ಭದಲ್ಲಿ ಜೆ. ಜೆ. ಎಂ ಮಹಾವಿದ್ಯಾಲಯ ಕಾಲೇಜಿನ ಮನೋವೈದ್ಯಕಿಯ ಸಂಶೋಧನ ವಿದ್ಯಾರ್ಥಿ ಡಾ. ಪ್ರಶಾಂಲ್ ರವರು ಜಿಲ್ಲಾ ಮಾನಸಿಕ ಆರೋಗ್ಯ ಕಾರ್ಯಕ್ರಮದ ಮನಶಾಸ್ತ್ರಜ್ಞ ಎಸ್. ವಿಜಯ ಕುಮಾರ್ ಮತ್ತು ಭಾರತೀಯ ಕಲ ಸಾಂಸ್ಕೃತಿಕ ಅಕಾಡೆಮಿಯ ಅಧ್ಯಕ್ಷರಾದ ಎನ್ ಮಲ್ಲೇಶಪ್ಪ, ನಿರ್ದೇಶಕರಾದ ದಿವ್ಯಾ ಟಿ ಇತರರು ಹಾಜರಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.