ಕಾಸರಗೋಡು (www.vknews.in) : ಬೇಕಲ ಕೋಟೆ ನೋಡಲು ಬಂದ ಯುವಕ ಹಾಗೂ ಆತನ ಗೆಳತಿಯ ಮೇಲೆ ಹಲ್ಲೆ ನಡೆದಿದೆ. ಇಬ್ಬರ ಮೇಲೂ ಹಲ್ಲೆ ನಡೆಸಿ ಚಿನ್ನಾಭರಣ ಹಾಗೂ ಹಣ ದೋಚಿದ್ದಾರೆ. ಘಟನೆಯಲ್ಲಿ ಬೇಕಲ ಪೊಲೀಸರು ಮೂವರನ್ನು ಬಂಧಿಸಿದ್ದಾರೆ.
ಬೇಕಲ ಕೋಟೆ ನೋಡಲು ಕಾರಿನಲ್ಲಿ ಬಂದಿದ್ದ ಯುವಕ ಹಾಗೂ ಆತನ ಗೆಳತಿಯ ಮೇಲೆ ಪಾರ್ಕಿಂಗ್ ಸ್ಥಳದಲ್ಲಿಯೇ ಹಲ್ಲೆ ನಡೆದಿದೆ. ಬೈಕ್ ನಲ್ಲಿ ಬಂದ ನಾಲ್ವರ ತಂಡ ಯುವಕ ಹಾಗೂ ಯುವತಿಗೆ ಬೆದರಿಕೆ ಹಾಕಿದೆ. ಬಳಿಕ ಆತನನ್ನು ಕಾರಿನಿಂದ ಹೊರಗೆಳೆದು ಯುವಕನ ಕೈಯಿಂದ ಚಿನ್ನದ ಬಳೆ ತೆಗೆದಿದ್ದಾನೆ. ಮಹಿಳೆಯ ಬ್ಯಾಗ್ನಲ್ಲಿದ್ದ 5000 ರೂಪಾಯಿ ಕಳ್ಳತನವಾಗಿದೆ.
ಘಟನೆಯಲ್ಲಿ ಪಳ್ಳಿಕ್ಕರ ನಿವಾಸಿ 25 ವರ್ಷದ ಅಬ್ದುಲ್ ವಾಹಿದ್, ಬೇಕಲ ಹದ್ದದ್ ನಗರದ 26 ವರ್ಷದ ಅಹ್ಮದ್ ಕಬೀರ್ ಮತ್ತು ಮೊವ್ವಲ್ ಕಾಲೋನಿಯ 26 ವರ್ಷದ ಶ್ರೀಜಿತ್ ಬಂಧಿತ ಆರೋಪಿಗಳು. ಸಾದಿಕ್ ನನ್ನು ಕೂಡ ಬಂಧಿಸಬೇಕಿದೆ. ಆತ ತಲೆಮರೆಸಿಕೊಂಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.
ಗುಂಪಿನಲ್ಲೊಬ್ಬನ ಬೈಕ್ ನಂಬರ್ ತೆಗೆದ ಯುವಕ, ಪೊಲೀಸರಿಗೆ ಮಾಹಿತಿ ನೀಡಿದ್ದಾನೆ. ನಂತರ ಬೇಕಲ ಪೊಲೀಸರು ನಡೆಸಿದ ಶೋಧದಲ್ಲಿ ಆರೋಪಿಗಳನ್ನು ಬಂಧಿಸಲಾಗಿದೆ. ಈ ಹಿಂದೆಯೂ ಇದೇ ತಂಡ ಬೇಕಲ ಕೋಟೆಯಲ್ಲಿ ಈ ರೀತಿಯ ಸುಲಿಗೆ ನಡೆಸಿತ್ತು ಎಂದು ಪೊಲೀಸರು ತಿಳಿಸಿದ್ದಾರೆ. ಆದರೆ ಯಾರೂ ದೂರು ನೀಡಲು ಸಿದ್ಧರಿಲ್ಲದ ಕಾರಣ ಪ್ರಕರಣ ದಾಖಲಾಗಿಲ್ಲ. ಆರೋಪಿಗಳನ್ನು ಬೇಕಲ ಕೋಟೆಗೆ ಕರೆತಂದು ಸಾಕ್ಷ್ಯ ತೆಗೆದುಕೊಳ್ಳಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.