ಕುಂಬಳೆ (www.vknews.in) : ಕಡವತ್ ರಾಷ್ಟ್ರೀಯ ಹೆದ್ದಾರಿಯ ಆರಿಕ್ಕಾಡಿ ಎಂಬಲ್ಲಿ ಬೈಕ್ ಮತ್ತು ಮೀನು ಲಾರಿ ನಡುವೆ ಸಂಭವಿಸಿದ ಅಪಘಾತದಲ್ಲಿ ಯುವಕನೊಬ್ಬ ಮೃತಪಟ್ಟ ಘಟನೆ ನಡೆದಿದೆ. ಕೊಡಿಯಮ್ಮ ಚೆಪಿನಡ್ಕ ಪಿರಿಂಗಿ ಹೌಸ್ ನಿವಾಸಿ ಮುಹಮ್ಮದ್ ಅವರ ಪುತ್ರ ಅಬ್ದುರ್ರಹ್ಮಾನ್ ಅಶ್ಕರ್ (22) ಮೃತ ದುರ್ದೈವಿ. ಅವರೊಂದಿಗೆ ಇದ್ದ ಅವರ ಸಂಬಂಧಿ ಅನಸ್ ಗಾಯಗೊಂಡು ಚಿಕಿತ್ಸೆ ಪಡೆಯುತ್ತಿದ್ದಾರೆ.
ಶುಕ್ರವಾರ ರಾತ್ರಿ ೯.೧೫ ರ ಸುಮಾರಿಗೆ ಅಪಘಾತ ಸಂಭವಿಸಿದೆ. ಅಸ್ಕರ್ ಮತ್ತು ಅನಸ್ ಬಂದ್ಯೋಡು ಕಡೆಯಿಂದ ಕೆಎಲ್ 14ಎಎ 1669 ಸಂಖ್ಯೆಯ ಬೈಕ್ ನಲ್ಲಿ ಕುಂಬಳೆಗೆ ತೆರಳುತ್ತಿದ್ದಾಗ ಕಾಸರಗೋಡು ಕಡೆಯಿಂದ ಮಂಗಳೂರಿಗೆ ತೆರಳುತ್ತಿದ್ದ ಪಿಕಪ್ ಲಾರಿ ಡಿಕ್ಕಿ ಹೊಡೆದಿದೆ.
ರಸ್ತೆಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ಅಶ್ಕರ್ ಅವರನ್ನು ಕುಂಬಳ ಸಹಕಾರಿ ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆ ಅವರು ಮೃತಪಟ್ಟಿದ್ದಾರೆ. ಕಾಸರಗೋಡು ಜನರಲ್ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಮೃತದೇಹವನ್ನು ಸಂಬಂಧಿಕರಿಗೆ ಹಸ್ತಾಂತರಿಸಲಾಗುವುದು. ಸ್ಥಳಕ್ಕೆ ಕುಂಬಳ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಲಾರಿ ಚಾಲಕನ ವಿರುದ್ಧ ಪ್ರಕರಣ ದಾಖಲಾಗಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.