ಜೆದ್ದಾ(www.vknews.in): ಈ ಬಾರಿಯ ಹಜ್ ಸಮಯದಲ್ಲಿ ಒಟ್ಟು 1301 ಮಂದಿ ಮೃತಪಟ್ಟಿದ್ದಾರೆಂದು ಸೌದಿ ಹಜ್ ಸಚಿವಾಲಯ ಹೇಳಿದೆ. ಇವರಲ್ಲಿ ಸುಮಾರು 1080 ಮಂದಿ ಹಜ್ ಪರ್ಮಿಟ್ ಇಲ್ಲದೆ ಮಕ್ಕಾ ಪ್ರವೇಶಿಸಿದವರೆಂದು ಅದು ಸ್ಪಷ್ಟಪಡಿಸಿದೆ. ಹಜ್ ಪರ್ಮಿಟ್ ಇಲ್ಲದವರು ಸರಿಯಾದ ಮೂಲ ಸೌಕರ್ಯವಿಲ್ಲದ ಕಾರಣ ಈ ರೀತಿ ಮರಣ ಸಂಭವಿಸಿದೆ.ಹಜ್ ಪರ್ಮಿಟ್ ಪಡೆದಿರುವವರಿಗೆ ಸೌದಿ ಸರಕಾರವು ಸಕಲ ವ್ಯವಸ್ಥೆಗಳನ್ನು ಮಾಡಿದ್ದು, ಈ ರೀತಿಯ ಅನಧಿಕೃತ ಹಜ್ಜಾಜ್ ಗಳಿಂದಾಗಿ ಮೃತಪಟ್ಟವರ ಸಂಖ್ಯೆ ಹೆಚ್ಚಾಗಿದೆ ಎಂದು ಹಜ್ ಸಚಿವಾಲಯ ಸ್ಪಷ್ಟಪಡಿಸಿದೆ. ಪರ್ಮಿಟ್ ಇಲ್ಲದೆ ಹಜ್ ಗೆ ಬಂದಿರುವವರಲ್ಲಿ ಈಜಿಪ್ಟಿಯನ್ನರು ಅಧಿಕವಾಗಿದ್ದು, ಮೃತರಲ್ಲಿಯೂ ಕೂಡ ಹೆಚ್ಚಿನವರು ಈಜಿಪ್ಟಿಯನ್ನರೇ ಸೇರಿದ್ದಾರೆ. ಈ ಕಾರಣದಿಂದಾಗಿ ಪರ್ಮಿಟ್ ಇಲ್ಲದೆ ಜನರನ್ನು ಮಕ್ಕಾಗೆ ಸಾಗಿಸಿದ 16 ಈಜಿಪ್ಟ್ ಟೂರಿಸಂ ಕಂಪೆನಿಗಳ ಲೈಸನ್ಸ್ ರದ್ದು ಗೊಳಿಸಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.