ಬಂಟ್ವಾಳ (www.vknews. in) : ತಾಲೂಕಿನಾದ್ಯಂತ ವ್ಯಾಪಕ ಮಳೆಯಾಗುತ್ತಿದ್ದು ಬಂಟ್ವಾಳ ತಾಲೂಕಿನ ವಿವಿಧೆಡೆ ಮಳೆ ಹಾನಿ ಸಂಭವಿಸಿರುವ ಬಗ್ಗೆ ವರದಿಯಾಗಿದೆ. ವ್ಯಾಪಕ ಮಳೆಯಾಗುತ್ತಿದ್ದರೂ ನೇತ್ರಾವತಿ ನದಿ ನೀರಿನ ಮಟ್ಟ ಇಳಿಕೆಯಾಗಿದೆ. ಭಾನುವಾರ ನೀರಿನ ಮಟ್ಟ 4.2 ಇದ್ದು ಸೋಮವಾರ ಸಂಜೆ ವೇಳೆಗೆ 3.0 ರಲ್ಲಿ ಹರಿಯುತ್ತಿದೆ.
ಬಿಳಿಯೂರು ಗ್ರಾಮದ ಪೆಜಕೊಡೆ ಎಂಬಲ್ಲಿ ಸುಂದರಿ ಎಂಬವರ ವಾಸ್ತವ್ಯದ ಮನೆಯ ಒಂದು ಪಾರ್ಶ್ವದ ಗೋಡೆ ಹಾಗೂ ಮೇಲ್ಭಾವಣಿ ಕುಸಿದು ತೀವ್ರ ಹಾನಿಯಾಗಿರುತ್ತದೆ. ಮನೆಯವರು ಸಂಬಂಧಿಕರ ಮನೆಗೆ ಸ್ಥಳಾಂತರಗೊಂಡಿರುತ್ತಾರೆ.
ಶಂಭೂರು ಗ್ರಾಮದ ಮೋಹನದಾಸ ರವರ ವಾಸ್ತವ್ಯದ ಕಚ್ಚಾ ಮನೆಗೆ ಮಳೆ ಗಾಳಿಯಿಂದ ತೀವ್ರ ಹಾನಿಯಾಗಿದ್ದು ಸದ್ರಿಯವರು ಸ್ಥಳಾಂತರಗೊಂಡಿರುತ್ತಾರೆ. ಬಂಟ್ವಾಳ ತಾಲ್ಲೂಕಿನ ಮೂಡ ನಡುಗೋಡು ಗ್ರಾಮದ ಕರೆಂಕಿ ಎಂಬಲ್ಲಿ ದೇವಕಿ ಕೋಂ ಲಕ್ಷ್ಮಣ್ ಮೂಲ್ಯ ಎಂಬವರ ವಾಸ್ತವ್ಯದ ಮನೆಗೆ ಮರ ಬಿದ್ದು ಭಾಗಶಃ ಹಾನಿಯಾಗಿರುತ್ತದೆ
ಇಡ್ಕಿದು ಗ್ರಾಮದ ಅಳಕೆಮಜಲು ಎಂಬಲ್ಲಿ ಶೀನ ಬಿನ್ ಐತ ಎಂಬವರ ಮನೆಯ ಶೌಚಾಲಯಕ್ಕೆ ತೀವ್ರ ಹಾನಿಯಾಗಿರುತ್ತದೆ. ಕುರಿಯಾಳ ಗ್ರಾಮದ ಕುರಿಯಾಳ ಪಡು ಎಂಬಲ್ಲಿ ಉಗ್ಗಪ್ಪ ಪೂಜಾರಿ ಎಂಬವರ ಮನೆಯ ಪಕ್ಕದ ಕೊಟ್ಟಿಗೆಗೆ ಹಾಗೂ ಪೆರ್ನೆ ಗ್ರಾಮದ ಗಿಟ್ಟದಡ್ಕ ನಿವಾಸಿ ಸೀತಾ ಕೋಂ ಶಿವಪ್ಪ ನಾಯ್ಕ ಎಂಬವರ ಮನೆಗೆ ತಾಗಿಕೊಂಡಿರುವ ಮನೆಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.