ಮಂಗಳೂರು (www.vknews. in) ; ದಕ್ಷಿಣ ಕನ್ನಡ ಜಿಲ್ಲಾ ಸಂಯುಕ್ತ ಖಾಝಿ ಖುರ್ರತುಸ್ಸಾದಾತ್ ಸಯ್ಯಿದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ಕೂರತ್ ರವರ ನಿಧನಕ್ಕೆ ಕರ್ನಾಟಕ ಭಾವೈಕ್ಯ ಪರಿಷತ್ ಸ್ಥಾಪಕಾಧ್ಯಕ್ಷ ಕೆ.ಎ.ಅಬ್ದುಲ್ ಅಝೀಝ್ ಝುಹ್ರಿ ಪುಣಚ ಸಂತಾಪ ವ್ಯಕ್ತಪಡಿಸಿದ್ದಾರೆ.
ಐಹಿಕ ಜೀವನ ವಿಧಾನದಿಂದ ಸಂಪೂರ್ಣ ದೂರವಿದ್ದು ಪರಲೋಕ ಜೀವನದ ಬಗ್ಗೆ ಮಾತ್ರ ಹೆಚ್ಚಾಗಿ ಪ್ರಸ್ತಾಪಿಸಿ ಸಮಾಜದಲ್ಲಿ ಧಾರ್ಮಿಕ ನೆಲೆಗಟ್ಟಿನ ಭದ್ರ ಬುನಾದಿ ಹಾಕಿ ಧಾರ್ಮಿಕ, ಶೈಕ್ಷಣಿಕ, ವೈಜ್ಞಾನಿಕ ರಂಗದಲ್ಲಿ ತುಂಬಿ ನಿಂತ ಸಯ್ಯಿದ್ ಕೂರತ್ ತಂಙಳ್ ರವರ ವಿಯೋಗದಿಂದ ಜಗತ್ತಿನ ಶ್ರೇಷ್ಠ ಮುಸ್ಲಿಂ ವಿದ್ವಾಂಸರೊಬ್ಬರನ್ನು ಕಳೆದು ಕೊಂಡಂತಾಗಿದೆ ಎಂದು ಅವರು ತನ್ನ ಸಂತಾಪದಲ್ಲಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.