(www.vknews.in) ; ಇತ್ತೀಚೆಗೆ ಸಾಮಾಜಿಕ ತಾಣಗಳಲ್ಲಿ ಪ್ರವಾದಿಯವರ ﷺ ಕುಟುಂಬ ಪರಂಪರೆಯನ್ನು ಕೆಲವರು ನಿಸ್ಸಾತ್ವಿಕರು ಕೇವಲ ರೀತಿಯಲ್ಲಿ ಚಿತ್ರೀಕರಿಸುತ್ತಿದ್ದು, ಅಂತವರ ಕಪಟದಾಟಕ್ಕೆ ಯಾರು ಕೂಡಾ ಬಲಿಯಾಗಬಾರದೆಂಬ ನಿಟ್ಟಿನಲ್ಲಿ ಸಣ್ಣ ಪ್ರಯತ್ನ ಮಾಡುತ್ತಿದ್ದೇನೆ.ಅಹ್ಲುಬೈತಿನ ಮಹಿಮೆ ಹೇಳಿ ಮುಗಿಸುವಂತದ್ದಲ್ಲ. ಸಣ್ಣ ಪ್ರಮಾಣದ ಅಳಿಲು ಸೇವೆ..
ಅಹ್ಲುಬೈತನ್ನು ಸ್ವೀಕರಿಸುವುದು ಮತ್ತು ಗೌರವಿಸುವುದು ನಮಗೆ ಕಡ್ಡಾಯ. ಈ ಆಶಯವನ್ನು الله ಖುರ್’ಆನಿನಲ್ಲಿ ಕಲಿಸಿದ್ದಾನೆ.”ನಬಿಯವರೇ! ಹೇಳಿರಿ; ಈ ಭೋದನೆಗಾಗಿ ನಾನು ನಿಮ್ಮಿಂದ ಯಾವುದೇ ಪ್ರತಿಫಲವನ್ನು ಅಪೇಕ್ಷಿಸುತ್ತಿಲ್ಲ.ಬಂಧುಗಳನ್ನು ಪ್ರೀತಿಸುವುದರ ಹೊರತು”.ಈ ಆಯತ್ ಬಂದಾಗ ಸ್ವಹಾಬಿಗಳು ‘ನಾವು ಗೌರವಿಸಬೇಕಾದ,ಪ್ರೀತಿಸಬೇಕಾದ ತಮ್ಮ ಬಂಧುಗಳು ಯಾರು?’ ಎಂದು ಕೇಳಿದಾಗ ‘ಅಲೀ,ಫಾತಿಮಾ ಹಾಗೂ ಅವರ ಮಕ್ಕಳು’ ಎಂದರು ನಬಿಯವರು ﷺ (ಜಾಮಿಉಲ್ ಬಯಾನ್).
ಅಬೂಹುರೈರಾ(ರ)ರವರಿಂದ ವರದಿ: ಹಸನ್ ಮತ್ತು ಹುಸೈನರಿಗೆ ನಬಿಯವರು ﷺ ಹೀಗೆ ಪ್ರಾರ್ಥಿಸಿದರು.’ಅಲ್ಲಾಹ್! ಈ ಮಕ್ಕಳನ್ನು ನಾನು ಪ್ರೀತಿಸುತ್ತಿದ್ದೇನೆ.ನೀನು ಕೂಡಾ ಇವರನ್ನು ಪ್ರೀತಿಸುವವರನ್ನು ಪ್ರೀತಿಸು'(ಮುಸ್ಲಿಂ, 10-192).
‘ನನ್ನ ಅಹ್ಲುಬೈತ್ ನೂಹ್ ನಬಿಯವರ(ಅ) ನೌಕೆಯಂತೆ,ಅದರಲ್ಲಿ ಪ್ರವೇಶಿಸಿದವರು ಪಾರಾದರು.ವಿಮುಖನಾದವನು ಮುಳುಗಿ ನಾಶವಾದನು'(ಹದೀಸ್: ಇಬ್ನು ಹಜರ್:152).
‘ನನ್ನಲ್ಲಿ ಮತ್ತು ಅಹ್ಲುಬೈತ್’ನಲ್ಲಿ ಸ್ನೇಹವು ಭಯಾನಕ ಸಂದರ್ಭಗಳಲ್ಲಿ ಉಪಯೋಗಕ್ಕೆ ಬರುತ್ತದೆ.ಮರಣದ ವೇಳೆ,ಕಬ್’ರಿನಲ್ಲಿ ಅಲ್ಲಿಂದ ಹೊರಡುವ ವೇಳೆ,ಕಿತಾಬ್ ನೀಡುವ ವೇಳೆ,ವಿಚಾರಣೆ ಹಾಗೂ ಸ್ವಿರಾತ್ ದಾಟುವ ಸಂದರ್ಭಗಳಲ್ಲಿ ‘.
‘ನನ್ನ ಅಹ್ಲುಬೈತ್’ಗಳಿಗೆ ಎದುರಾದವರಿಗೆ ಪರಲೋಕದಲ್ಲಿ ನಾನು ಎದುರಾಗಿರುವೆನು.ನಾನು ಎದುರಾದರೆ ಅವನು ನರಕಕ್ಕೆ ಹೋಗುವನು.ಅಹ್ಲುಬೈತ್ ಬಗ್ಗೆ ಜಾಗ್ರತೆಯಲ್ಲಿಟ್ಟುಕೊಳ್ಳುವವರಿಗೆ ಅಲ್ಲಾಹನ ಬಳಿ ಒಂದು ಒಪ್ಪಂದ ಇರುತ್ತದೆ'(ತ್ವಬಕಾತಿಬ್’ನು ಸಅದ್).
ಒಬ್ಬನು ತನ್ನ ಸ್ವಂತಕ್ಕಿಂತ ನನ್ನನ್ನು ಪ್ರೀತಿಸುವವರೆಗೆ, ತನ್ನ ಕುಟುಂಬಕ್ಕಿಂತ ನನ್ನ ಕುಟುಂಬವನ್ನು ಪ್ರೀತಿಸುವ ತನಕ ಮುಸ್ಲಿಮನಾಗಲಾರ'(ಬೈಹಕಿ).
‘ನಬಿ ಸ್ನೇಹ ,ಅಹ್ಲುಬೈತಿನಲ್ಲಿ ಸ್ನೇಹ ಹಾಗೂ ಖುರ್’ಆನ್ ಪಾರಾಯಣ ಎಂಬೀ ಮೂರು ಕಾರ್ಯಗಳನ್ನು ನಿಮ್ಮ ಮಕ್ಕಳಿಗೆ ಕಲಿಸಿರಿ'(ಹದೀಸ್:ದೈಲಮಿ).
ಅಹ್ಲುಬೈತ್ ಎಂಬುದು ಪ್ರವಾದಿಯವರ ﷺ ವಂಶವಾದುದರಿಂದ ಅವರ ಗೌರವ, ಮಹಿಮೆಯ ಕಾರಣದಿಂದ ಅಹ್ಲುಬೈತಿಗೆ ಗೌರವ ಬಂದಿದೆ.ಆದ್ದರಿಂದ ಅವರಿಗೆ ಸಲ್ಲುವ ಗೌರವವು ಪ್ರವಾದಿಯವರಿಗೆ ﷺ ಸಲ್ಲುತ್ತದೆ.ಅವರಿಗೆ ನೀಡುವ ಅಗೌರವವು ಪ್ರವಾದಿಯವರಿಗೆ ﷺ ನೀಡುವ ಅಗೌರವವಾಗುತ್ತದೆ.ಅಹ್ಲುಬೈತ್’ಗೆಸೇರಿದ ವ್ಯಕ್ತಿಯೊಬ್ಬರಿಂದ ತಪ್ಪು ಕಂಡರೂ ಕೂಡಾ ಅವರ ಗೌರವಕ್ಕೆ ಚ್ಯುತಿ ತರಬಾರದು ಎಂದು ಇಸ್ಲಾಮ್ ಹೇಳಲು ಇದುವೇ ಕಾರಣ.ಅವರಿಗೆ ಗೌರವ ಕೊಡುವುದು ಅವರ ತಪ್ಪಿಗೆ ಅಂಗೀಕಾರವಲ್ಲ, ಅವರ ವಂಶದ ಮಹಿಮೆಗೆ ಅಂಗೀಕಾರ. ಒಬ್ಬರು ತಪ್ಪು ಮಾಡಿದರು ಎಂಬ ಕಾರಣಕ್ಕೆ ಅವರ ವಂಶದ ಮಹಿಮೆಗೆ ಚ್ಯುತಿ ಬರುವುದಿಲ್ಲ ತಾನೆ?(ಅಶ್ಶರಫುಲ್ ಮುಅಬ್ಬತ್:49).
‘ತಪ್ಪನ್ನು ತಪ್ಪಾಗಿ ಕಾಣಬೇಕು.ತಪ್ಪನ್ನು ಮಾಡಿದರವರು ಎಂಬ ಸಾತ್ವಿಕ ಸಿಟ್ಟು ಇಟ್ಟುಕೊಳ್ಳುವುದರ ಜೊತೆಗೆ ನಬಿಯವರ ﷺ ಕುಟುಂಬ ಎಂಬ ನೆಲೆಯಲ್ಲಿ ಗೌರವ ಅನಿವಾರ್ಯ'(ಇಸ್ಆಫ್:120).
ಆದರೆ ಈ ಹೇಳಿದ್ದು ಅಹ್ಲುಬೈತಿಗೆ ಪಾಪಕ್ಕೆ ಪರವಾಗಿ ಅಲ್ಲ.ಅಹ್ಲುಬೈತಿನವರು ತಮ್ಮ ಗೌರವ,ಸ್ಥಾನ,ಮಹಿಮೆಗೆ ಕಳಂಕ ಬರುವಂತಹದು ತನ್ನ ಜನರು ಹೇಳಲು ಅವಕಾಶವಾಗದಂತೆ ಜಾಗ್ರತೆ ವಹಿಸಬೇಕು.ಜ್ಞಾನ,ಆರಾಧನೆ,ಸಂಸ್ಕೃತಿ, ಇಸ್ಲಾಮೀ ವೇಷ ವಿಧಾನಗಳಲ್ಲಿ ಹಾಗೂ ನಡೆನುಡಿ,ವರ್ತನೆಗಳಲ್ಲಿ ಶುದ್ಧರಾಗಿ ಪೂರ್ಣ ತತ್ವಾದೊಂದಿಗೆ ಇರುವುದು ಅವರ ಬಾಧ್ಯತೆ ಎಂದು ಇಬ್ನುಹಜರ್ ತನ್ನ ಅಸ್ಸವಾಇಕ್ವ್’ನಲ್ಲಿ ಪ್ರಸ್ಥಾಪಿಸಿದ್ದಾರೆ(181).
🖊️ ಜಲ್ಲಿ…
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.