(www.vknews. in) ; ನಾಡಿನ ಜನರು ಇಂದು ಸರಕಾರಿ ಕೆಲಸಗಳಿಗಾಗಿ ಅತ್ತಿಂದ ಅಲೆದಾಡುವುದು ಸರ್ವೇಸಾಮಾನ್ಯವಾಗಿದೆ.ಬಡವರ್ಗದ ಜನರು ತಮ್ಮ ಸ್ವಂತ ದಾಖಲೆಗಳ ಕೆಲಸಕ್ಕಾಗಿ ಅನೇಕ ಬಾರಿ ಸರ್ಕಾರಿ ಕಛೇರಿಗಳಿಗೆ ಕಡತಗಳನ್ನು ವಿಲೇವಾರಿ ಮಾಡಲು ಭೇಟಿ ನೀಡಬೇಕಾಗಿದೆ ಆದರೂ ಕೆಲವೊಮ್ಮೆ ಕಡತಗಳು ಬಾಕಿ ಆಗಿ ಆ ವ್ಯಕ್ತಿ ನಿರಾಸೆಯಿಂದ ಆ ಕೆಲಸದ ವಿಷಯದಲ್ಲಿ ಭರವಸೆ ಕಳೆದುಕೊಂಡು ಅಲ್ಲಿಗೇ ಬಿಟ್ಟು ಬಿಡುತ್ತಾರೆ ಅನೇಕ ಬಾರಿ ಕಛೇರಿಗಳಿಗೆ ಅಲೆದಾಡಿ ತಡಕಾಡಿ ಕೊನೆಗೆ ಉತ್ತರ ಶೂನ್ಯವಾಗಿರುತ್ತದೆ. ಇಂತಹವರಿಗೆ ಕೊನೆಯ ಆಸರೆಯಾಗಿ ಈಗ ಯುವ ಕ್ರಿಯಾಶೀಲ ವ್ಯಕ್ತಿತ್ವದ ಅಬ್ಬು ನವಗ್ರಾಮರವರು ಆಶಾಕಿರಣವಾಗಿ ಕಾಣುತ್ತಿದ್ದಾರೆ.
ನಾನು ತಿಳಿದ ಮಟ್ಟಿಗೆ ಅನೇಕ ಜನರ ಸಮಸ್ಯೆಗಳಿಗೆ ಅಬ್ಬುರವರು ತ್ವರಿತವಾಗಿ ಪರಿಹಾರ ನೀಡಿರುತ್ತಾರೆ.ಹಲವಾರು ವರುಷಗಳಿಂದ ತಡೆಯಿಡಿಯಲ್ಪಟ್ಟ ಕಡತಗಳು,ಸಾಮಾಜಿಕ ಪೆನ್ಷನ್ಗಳು ಮೂಲಭೂತ ಸೌಲಭ್ಯಗಳಿಂದ ವಂಚಿತವಾದ ಹಲವು ಊರಿನ ಸಮಸ್ಯೆಗಳಿಗೆ ತಕ್ಷಣ ಪರಿಹಾರ ನೀಡಿರುತ್ತಾರೆ.
ನಾನು ಇವರ ಕುರಿತು ಬರೆಯಲು ಪ್ರಮುಖ ಕಾರಣವೇನೆಂದರೆ ನಾನು ಪಂಚಾಯತ್ ಸದಸ್ಯನಾಗಿದ್ದರಿಂದ ತಕ್ಕಮಟ್ಟಿಗೆ ಎಲ್ಲಾ ಇಲಾಖೆಗಳ ಅಧಿಕಾರಿಗಳ ಪರಿಚಯವಿದೆ ಆಗೆಯೇ ನನಗೆ ಸಾಧ್ಯವಾದಷ್ಟು ಜನರ ಸಮಸ್ಯೆಗಳಿಗೆ ಪರಿಹಾರ ನೀಡುವ ನಿಟ್ಟಿನಲ್ಲಿ ನಾನು ಕೆಲಸ ಕಾರ್ಯಗಳನ್ನು ಮಾಡುತ್ತಿದ್ದೇನೆ ಸಾಮಾಜಿಕ ರಂಗದಲ್ಲಿ ಕೆಲಸ ಕಾರ್ಯಗಳನ್ನು ಮಾಡುವಾಗ ಜನಸಾಮಾನ್ಯರ ಅರ್ಹಕೆಲಸಗಳನ್ನು ಮಾಡಿಕೊಡುವುದು ನಮ್ಮ ಕರ್ತವ್ಯಗಿರುತ್ತದೆ.ಈಗಿರುವಾಗ ನನ್ನ ಹತ್ತಿರದ ಕುಟುಂಬದ ಪಡಿತರ ಚೀಟಿ ಎರಡು ವರ್ಷಗಳ ಅವಧಿಯಲ್ಲಿ ಮೂರು ಬಾರಿ ಸಸ್ಪೆಂಡ್ ಆಗಿರುತ್ತದೆ ಎರಡು ಬಾರಿ ನಾನೇ ತಾಲೂಕು ಆಫೀಸ್ ನಲ್ಲಿ ಕಾರ್ಡ್ ತಿರಸ್ಕಾರಾದವರಿಂದ ಅರ್ಜಿ ಸಲ್ಲಿಸಿ ಸಮಸ್ಯೆ ಪರಿಹರಿಸುತ್ತೇನೆ.
ಈ ಬಾರಿ 8 ತಿಂಗಳ ಹಿಂದೆ ಪುನಃ ಪಡಿತರ ಚೀಟಿ ಸಮಸ್ಯೆ ತಲೆದೂರಿ ಅವರಿಗೆ ಪಡಿತರ ಮತ್ತು ಸರ್ಕಾರದ ಸವಲತ್ತುಗಳು ಸಿಗುತ್ತಿರಲಿಲ್ಲ.ಈಗೆ ನನ್ನಲ್ಲಿ ಅವರು ಸಮಸ್ಯೆಯನ್ನು ಪರಿಹರಿಸಲು ಎಂದಿನಂತೆ ಈ ಬಾರಿಯೂ ಹೇಳಿದರು ಆಗೆ ನಾನು ಅನೇಕ ಬಾರಿ ತಾಲೂಕು ಆಫೀಸ್ ಗೆ ಭೇಟಿ ನೀಡಿ ಅರ್ಜಿ ಕೊಟ್ಟು ಮಂಗಳೂರು ಪುಡ್ ಸೆಕ್ಷನ್ ಗೆ ಕಳುಹಿಸಿ ಅಲ್ಲಿಯೂ ಪರಿಹಾರ ಆಗದಾಗ ಉಸ್ತುವಾರಿ ಸಚಿವರ ಕಛೇರಿಯಿಂದ ಮಾತನಾಡಿಸಿದಾಗ ಅದು ಬೆಂಗಳೂರಿನಿಂದ ಆದ ಸಮಸ್ಯೆ ಅಲ್ಲಿಂದಲೇ ಪರಿಹಾರ ಆಗಬೇಕು ಮುಂದಕ್ಕೆ ಸರಿಹೋಗುತ್ತದೆ ಎಂಬ ಉತ್ತರ ಬಂತು.ಆಗ ನನಗೆ ತಟ್ಟನೇ ಹೊಳೆದದ್ದು ಶ್ರೀಯುತ ಅಬ್ಬು ನವಗ್ರಾಮರವರು.
ಹೇಗೂ ಆಗಲಿ ನೋಡುವ ಇವರಲ್ಲಿ ಒಂದು ಬಾರಿ ಪ್ರಯತ್ನಿಸುವ ಅಂತ ಏನೆಂದರೆ ಹಲವಾರು ಜನರ ಕೆಲಸ ಕಾರ್ಯಗಳು ಇವರಿಂದ ಪರಿಹಾರ ಕಂಡಿರುತ್ತದೆ ಎಂದು ನನಗೆ ತಿಳಿದಿತ್ತು ನಾನು ಒಮ್ಮೆ ಪ್ರಯತ್ನಿಸುವ ಅಂತ ತೀರ್ಮಾನ ಮಾಡಿ ಇವರಲ್ಲಿ ವಿಷಯ ಹೇಳಿದೆ ಅವರು ಆಗಲೆ ಅದರ ಮಾಹಿತಿ ಮತ್ತು ಪಡಿತರ ಚೀಟಿಯ ಪೋಟೋ ಪಡೆದು ಕಂಪ್ಲೇಂಟ್ ನೀಡಿದರು ಈಗೆ ಇವರ ಪ್ರಯತ್ನದ ಫಲವಾಗಿ ಒಂದು ತಿಂಗಳಿನಲ್ಲಿ ಅವರ ಪಡಿತರ ಚೀಟಿ ಸರಿಯಾಗಿ ಅವರಿಗೆ ದೊರಕಿತು ಅವರ ಸಂತೋಷಕ್ಕೆ ಪಾರವೇ ಇರಲಿಲ್ಲ ಆಗ ನನಗೆ ಅಬ್ಬು ನವಗ್ರಾಮ ರವರಲ್ಲಿ ಒಂದು ರೀತಿಯ ಹೆಮ್ಮೆ ಮತ್ತು ಗೌರವ ಮೂಡಿತು.ಏತಕ್ಕಾಗಿ ನಾನು ಈ ವಿಷಯ ಇಲ್ಲಿ ಬರೆಯಲು ಕಾರಣವಾಯಿತು.
ಅಂದರೆ ಬಡಜನತೆ ಕಡತಗಳ ವಿಲೇವಾರಿಯಲ್ಲಿ ಅನೇಕ ಸಮಯಗಳಿಂದ ಕೆಲಸ ಕಾರ್ಯಗಳ ವಿಳಂಬಕ್ಕೆ ಬೇಸತ್ತು ಇದ್ರೆ ಇವರಿಂದ ಅಂತವರಿಗೆ ಪ್ರಯೋಜನ ದೊರೆಯಲಿ ಇಂತಹ ಸಾಮಾಜಿಕ ಚಿಂತನೆಯ ಪ್ರತಿಭೆಯನ್ನು ಸಮಾಜಕ್ಕೆ ಪರಿಚಯಿಸುವ ಜವಾಬ್ದಾರಿ ನನ್ನದಾಗಿರಲಿ ಎಂಬ ಉದ್ದೇಶದಿಂದ ನಾನು ಈ ವಿಷಯವನ್ನು ವಿವರಿಸಿದೆ.ಆಗೆ ಕೆಲವು ದಿನಗಳು ಕಳೆದು ಬೇರೊಂದು ಸಮಸ್ಯೆಗಳಿಗೆ ಪರಿಹಾರ ಕಾಣಿಸುವಿರೇ ಎಂದು ನಾನು ಅವರಲ್ಲಿ ಕೇಳಿದಾಗ ನಾನು ಅವರಲ್ಲಿ ಆಗೆ ಕೇಳಲು ಕಾರಣವೇನೆಂದರೆ ಅದು ನನ್ನ ತಾಲೂಕು ವ್ಯಾಪ್ತಿಯಲ್ಲಿ ಬರುವ ಸಮಸ್ಯೆಆಗಿರದ ಕಾರಣ ಅದಕ್ಕಾಗಿ ನಾನು ಅವರಲ್ಲಿ ಕೇಳಿರುವುದು ನಿಮಗೆ ಆಗಬಹುದಾ ಅಂತ ಆಗ ಅವರು ಹೇಳಿದ ಉತ್ತರ ಯಾವ ಮೂಲೆಯವರಾದರೇನು ಬಡವರ ಕೆಲಸ ಮಾಡಬೇಕಾಗಿರುವುದು ಸಾಮಾಜಿಕ ಕಾರ್ಯಕರ್ತನಾಗಿ ನನ್ನ ಆದ್ಯ ಕರ್ತವ್ಯ ಅದು ನಾನು ನನ್ನ ಕೊನೆ ಉಸಿರು ಇರುವವರೆಗೂ ಮಾಡುತ್ತೇನೆ.
ಯಾವ ಅಡೆತಡೆ ಉಂಟಾದರೂ ಸರಿ ನೀವು ಸಮಸ್ಯೆ ಹೇಳಿ ನನ್ನಿಂದ ಪರಿಹರಿಸಲು ಪ್ರಯತ್ನ ಮಾಡುತ್ತೇನೆ ನನ್ನಿಂದ ಆಗದೆ ಇರುವ ನೈಜ ಸಮಸ್ಯೆ ಆದರೆ ನನ್ನ ಶಾಸಕರಿಂದವಾದರೂ ನಾನು ಮಾಡಿಕೊಡಿಸುವೆ ಈ ವಿಶ್ವಾಸ ನನಗೆ ನನ್ನ ಶಾಸಕರಲ್ಲಿ ಇದೆ ಅಂತ ಬಹಳ ಆತ್ಮ ವಿಶ್ವಾಸದಿಂದ ಹೇಳಿದರು ಇದು ಅವರ ಸಾಮಾಜಿಕ ಕಳಕಳಿಯ ಬಗ್ಗೆ ಇರುವ ಬದ್ದತೆ ತೋರಿಸಿತು.ಅವರಲ್ಲಿ ನನಗೆ ಬಡವರ ಬಗ್ಗೆ ನೈಜ ಕಾಳಜಿ ಕಂಡಿದ್ದು ಈ ರೀತಿಯ ಕೆಲಸಗಳಿಂದ ನಾಡಿನ ಬಡ ಸಾಮಾನ್ಯ ಜನರಿಗೆ ಯಾವುದೇ ಕಛೇರಿ ಕೆಲಸ ಕಾರ್ಯಗಳು ಹಾಗೂ ಮೂಲಭೂತ ಸೌಕರ್ಯಗಳ ಅಭಿವೃದ್ಧಿ ಆಗಬೇಕಾದರೆ ಅಬ್ಬು ನವಗ್ರಾಮ ರವರನ್ನು ಸಂಪರ್ಕಿಸಿ ಪರಿಹಾರ ಪಡೆದುಕೊಳ್ಳಬೇಕಾಗಿ ಈ ಮೂಲಕ ವಿನಂತಿ.
🖊️ ಉಬೈದ್.ಕೆ. ನಿ.ಪೂ.ಗ್ರಾಮ ಪಂಚಾಯತ್ ಸದಸ್ಯರು ವೀರಕಂಭ ಬಂಟ್ವಾಳ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.