ಬಂಟ್ವಾಳ (www.vknews. in) : ಹಗಲು ಹೊತ್ತಿನಲ್ಲೇ ಮನೆಯೊಂದಕ್ಕೆ ನುಗ್ಗಿದ ಕಳ್ಳರು ಲಕ್ಷಾಂತರ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿದ ಘಟನೆ ಇರಾ ಗ್ರಾಮದ ಕಿನ್ನಿಮಜಲು ಎಂಬಲ್ಲಿ ಶನಿವಾರ ನಡೆದಿದೆ.
ಇಲ್ಲಿನ ನಿವಾಸಿ ವನಿತಾ ಅವರ ಮನೆಯಲ್ಲಿ ಯಾರೂ ಇಲ್ಲದ ವೇಳೆ ಮುಂಬಾಲಿನ ಬೀಗ ಮುರಿದು ಒಳನುಗ್ಗಿದ ಕಳ್ಳರು ಸುಮಾರು 4.14 ಲಕ್ಷ ರೂ. ಮೌಲ್ಯದ 69 ಗ್ರಾಂ. ಚಿನ್ನಾಭರಣ ದೋಚಿದ್ದಾರೆ.
ಮನೆ ಮಂದಿ ಶನಿವಾರ ಬೆಳಿಗ್ಗೆ 7.30 ರ ವೇಳೆಗೆ ಕೆಲಸಕ್ಕೆ ಹೊರಗಡೆ ಹೋಗಿದ್ದು, ಈ ಮದ್ಯೆ ವನಿತಾ ಅವರ ಅಕ್ಕ ಸುಜಾತ ಅವರು ಕರೆ ಮಾಡಿ ಮುಂದಿನ ಬಾಗಿಲನ ಬೀಗ ಮುರಿದಿರುವ ಕುರಿತು ತಿಳಿಸಿದ್ದಾರೆ ಸಂಜೆ 5 ರ ವೇಳೆಗೆ ಮನೆಗೆ ಬಂದು ಒಳಗೆ ಹೋಗಿ ನೋಡಿದಾಗ ಕೋಣೆಯಲ್ಲಿದ್ದ ಕಪಾಟಿನಲ್ಲಿ ತಡಕಾಡಿ ಬಟ್ಟೆಗಳನ್ನು ಚಲಾಪಿಲ್ಲಿ ಮಾಡಿ ಚಿನ್ನಾಭರಣ ದೋಚಿರುವುದು ಬೆಳಕಿಗೆ ಬಂದಿದೆ.
ಘಟನಾ ಸ್ಥಳಕ್ಕೆ ಬಂಟ್ವಾಳ ಗ್ರಾಮಾಂತರ ಠಾಣಾ ಪೊಲೀಸ್ ನಿರೀಕ್ಷಕ ಶಿವಕುಮಾರ್ ಹಾಗೂ ಸಿಬ್ಬಂದಿಗಳು ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.