ಬೆಳ್ಳಾರೆ (www.vknews.in) : ಇಲ್ಲಿನ ದಾರುಲ್ ಹಿಕ್ಮಾ ಆಂಗ್ಲ ಮಾದ್ಯಮ ಶಾಲಾ ವಿದ್ಯಾರ್ಥಿಗಳು ಅನ್ನದಾತನ ಜೊತೆ ಒಂದು ದಿನ ಕಾರ್ಯಕ್ರಮದಡಿಯಲ್ಲಿ ಭತ್ತದ ನಾಟಿ ಮತ್ತು ಕೃಷಿಯ ಪ್ರಾತ್ಯಕ್ಷಿಕೆ ಕಾರ್ಯಕ್ರಮ ನಡೆಸಿದರು..
ಶಾಲಾ ಶೈಕ್ಷಣಿಕ ಕಲಿಕೆಗೆ ಸಂಭಂದಿಸಿದಂತೆ ಹೊರ ಸಂಚಾರ ಕಾರ್ಯಕ್ರಮವನ್ನು ಅಯೋಜಿಸಿ ಶಾಲಾ ಶಿಕ್ಷರಕ ಜೊತೆ ವಿದ್ಯಾರ್ಥಿಗಳು ಬೆಳ್ಳಾರೆ ಗ್ರಾಮದ ಬೂಡು ಎಂಬಲ್ಲಿನ ಶುಭಕರ ರೈ ಎಂಬವರ ಗದ್ದೆಗೆ ಭೇಟಿ ನೀಡಿ ಭತ್ತ ನಾಟಿಗೆ ಸಂಭಂದಿಸಿದಂತೆ ಸಂಕ್ಷಿಪ್ತ ಮಾಹಿತಿಯನ್ನು ಕಲೆ ಹಾಕಿದರು.
ಗದ್ದೆಯ ಕೆಲಸಕ್ಕೆ ಸಂಬಂಧಿಸಿದ ಉಪಕರಣಗಳನ್ನು ಪರಿಚಿಸಿದಲ್ಲದೆ ನಾಟಿ ಮಾಡುವುಲ್ಲಿಂದ ಅಕ್ಕಿ ಮುಡಿಯವರಗೆ ಸವಿವರವಾದ ಮಾಹಿತಿ ನೀಡುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಕೃಷಿ ಕಾಯಕದಲ್ಲಿ ಹುಮ್ಮಸ್ಸು ಬರಿಸುವಂತ ವಿವರಣೆ ನೀಡಿದರು.
ಶಾಲಾಮುಖ್ಯೋಪಾಧ್ಯಾಯಯಿನಿ ಸಬೀದ ಅವರ ಮಾರ್ಗದರ್ಶನದಲ್ಲಿ ನಡೆದ ಈ ಶಿಬಿರಕ್ಕೆ ಶಾಲಾ ಶಿಕ್ಷಕಿಯರು ಸಾಥ್ ನೀಡಿದರು. ಆಡಳಿತ ಮಂಡಳಿಯ ಉಪಾಧ್ಯಕ್ಷರಾದ ಹಮೀದ್ ಕೆ.ಎಂ ಮತ್ತು ಪೋಷಕರಾದ ಅಶ್ರಫ್ ರವರು ಉಪಸ್ಥಿತಿತರಿದ್ದರು..
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.