ಮುಂಬೈ (www.vknews.in) : ಮಹಿಳೆಯೊಬ್ಬಳು ತನ್ನ ಸ್ನೇಹಿತರನ್ನು ತಮಾಷೆ ಮಾಡುತ್ತಾ ಮೂರು ಅಂತಸ್ತಿನ ಕಟ್ಟಡದ ಮೇಲಿನಿಂದ ಬಿದ್ದಿದ್ದಾಳೆ. ಮುಂಬೈನಿಂದ 30 ಕಿಮೀ ದೂರದಲ್ಲಿರುವ ಡೊಂಬಿವಲಿಯ ಗ್ಲೋಬ್ ಸ್ಟೇಟ್ ಕಟ್ಟಡದಲ್ಲಿ ಈ ದುರ್ಘಟನೆ ನಡೆದಿದೆ. ನಗೀನಾ ದೇವಿ ಮಂಚಿರಾಮ್ ಎಂಬ ಯುವತಿ ಸಾವನ್ನಪ್ಪಿದ್ದಾಳೆ.
ಮಂಗಳವಾರ ಈ ಘಟನೆ ನಡೆದಿದೆ. ಈ ದೃಶ್ಯಾವಳಿಗಳು ಸಿಸಿಟಿವಿಯಲ್ಲಿ ಸೆರೆಯಾಗಿದೆ. ಪೊಲೀಸರು ಸ್ಥಳಕ್ಕಾಗಮಿಸಿ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದಾರೆ.
ಮಹಿಳೆ ಕಟ್ಟಡದ ಮೇಲ್ಛಾವಣಿಗಳನ್ನು ಏರುತ್ತಿರುವುದನ್ನು ಮತ್ತು ಪುರುಷನು ಅವಳನ್ನು ತಡೆಯಲು ಪ್ರಯತ್ನಿಸುತ್ತಿರುವುದನ್ನು ದೃಶ್ಯಾವಳಿ ತೋರಿಸುತ್ತದೆ. ಹಿಂದೆ ಬಿದ್ದ ಮಹಿಳೆಯ ಜೊತೆಗೆ ಮಹಿಳೆಯನ್ನು ರಕ್ಷಿಸಲು ಯತ್ನಿಸಿದ ವ್ಯಕ್ತಿಯೂ ಬಿದ್ದಿದ್ದು ತಲೆಗೆ ಪೆಟ್ಟಾಗಿ ಪಾರಾಗಿದ್ದಾರೆ.
ಗುಡಿಯಾ ದೇವಿ ಎಂದು ಕರೆಯಲ್ಪಡುವ ಈಕೆ ಕಟ್ಟಡದಲ್ಲಿಯೇ ಸ್ವೀಪರ್ ಆಗಿ ಕೆಲಸ ಮಾಡುತ್ತಿದ್ದಳು. ಒಬ್ಬ ಮಗಳು ಮತ್ತು ಒಬ್ಬ ಮಗ ಇದ್ದಾರೆ.
Prank Goes Wrong: Woman Falls From 3rd Floor In #Mumbai Building, Dies 🔗 https://t.co/YkiTq32Wl5 pic.twitter.com/LAYIp3mVvH — NDTV (@ndtv) July 17, 2024
Prank Goes Wrong: Woman Falls From 3rd Floor In #Mumbai Building, Dies 🔗 https://t.co/YkiTq32Wl5 pic.twitter.com/LAYIp3mVvH
— NDTV (@ndtv) July 17, 2024
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.