ಬೆಂಗಳೂರು (www.vknews. in): ಸರ್ಕಾರವು ಸುಮಾರು ವರ್ಷಗಳಿಂದ ಎಸ್.ಎಸ್.ಎಲ್.ಸಿ. ಯಲ್ಲಿ ಮೊದಲ ಪ್ರಯತ್ನದಲ್ಲಿ ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾದ ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳಿಗೆ ನೀಡುತ್ತಿದ್ದ ಪ್ರೋತ್ಸಾಹ ಧನವನ್ನು ಯಾವುದೇ ಕಾರಣ ನೀಡದೇ ಸ್ಥಗಿತಗೊಳಿಸಿದ್ದಲ್ಲದೆ, ಪಿ.ಯು.ಸಿ. ಯಿಂದ ಉನ್ನತಮಟ್ಟದ ಕೋರ್ಸ್ ಗಳವರೆಗೆ ನೀಡುತ್ತಿದ್ದ ಪ್ರೋತ್ಸಾಹ ಧನಕ್ಕೆ ವಾರ್ಷಿಕ ಆರು ಲಕ್ಷ ಆದಾಯ ಮಿತಿ ಹೊರಡಿಸಿದ್ದು ಇದರಿಂದಾಗಿ ಪರಿಶಿಷ್ಟ ಸಮುದಾಯದ ವಿದ್ಯಾರ್ಥಿಗಳಿಗೆ ತೀವ್ರ ಅನ್ಯಾಯವಾಗಿದೆ.
ಪರಿಶಿಷ್ಟ ಸಮುದಾಯದ ಹೆಚ್ಚಿನ ವಿದ್ಯಾರ್ಥಿಗಳು ಕಡು ಬಡ ವರ್ಗದವರಾಗಿದ್ದು, ಇಂದಿನ ಪರಿಸ್ಥಿತಿಯಲ್ಲಿ ವಿದ್ಯಾಭ್ಯಾಸ ಪಡೆಯಲು ಸಾಧ್ಯವಾಗದೇ ಅರ್ಧದಲ್ಲಿಯೇ ಶಿಕ್ಷಣವನ್ನು ಮೊಟಕುಗೊಳಿಸುವ ಉದಾಹರಣೆಗಳು ಸಾಕಷ್ಟಿವೆ. ಇಂತಹ ಸಂಧರ್ಭದಲ್ಲಿ ಸರಕಾರದ ಈ ನಿರ್ಧಾರವು ಬಹಳ ಆಘಾತಕಾರಿಯಾಗಿದೆ.
ಸಾಮಾಜಿಕ ನ್ಯಾಯದ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಈ ಸರಕಾರವು ಏಕಾಏಕಿ ಪರಿಶಿಷ್ಟ ಸಮುದಾಯದ ವಿದ್ಯಾರ್ಥಿ ಗಳಿಗೆ ನೀಡುವ ಪ್ರೋತ್ಸಾಹ ಧನ ಕಡಿತಗೊಳಿಸಿರುವುದು ಸರಕಾರದ ದಲಿತ ದಮನಿತರ ಪರ ಯಾವ ನಿಲುವು ಹೊಂದಿರುವುದೆಂಬುವುದನ್ನು ಸಂದೇಹಾಸ್ಪದವಾಗಿಸಿದೆ. ಇಂತಹ ಪ್ರೋತ್ಸಾಹ ಧನವು ಅನೇಕ ವಿದ್ಯಾರ್ಥಿಗಳಿಗೆ ತಮ್ಮ ವಿದ್ಯಾಭ್ಯಾಸವನ್ನು ಮುಂದುವರಿಸಲು ಸಹಕಾರಿಯಾಗಿದ್ದು, ತಕ್ಷಣ ಸದ್ಯದ ತೀರ್ಮಾನದಿಂದ ಹಿಂದೆ ಸರಿದು, ಪ್ರೋತ್ಸಾಹಧನವನ್ನು ಶೀಘ್ರವಾಗಿ ಬಿಡುಗಡೆಗೊಳಿಸುವುದಲ್ಲದೆ ಆದಾಯದ ಮಿತಿಯನ್ನು, ಈ ಹಿಂದಿನಂತೆಯೇ ಕಾಯ್ದುಕೊಳ್ಳಬೇಕು. ಪ್ರೋತ್ಸಾಹಧನವನ್ನು ಮುಂದುವರಿಸುವಲ್ಲಿ ಯಾವುದೇ ವಿಳಂಬ ನೀತಿಯನ್ನು ಬಿಡಬೇಕು. ಎಂದು ಅಖಿಲ ಭಾರತ ವಿದ್ಯಾರ್ಥಿ (AISA) ಸಂಘಟನೆ ಸರಕಾರವನ್ನು ಒತ್ತಾಯಿಸುತ್ತದೆ.
ಕೂಡಲೇ ಈ ಹೊಸ ಆದೇಶ ಹಿಂಪಡೆಯದಿದ್ದರೆ ರಾಜ್ಯಾದ್ಯಾಂತ ತೀವ್ರ ಹೋರಾಟ ಮಾಡಲಾಗುವುದು ಎಂದು ಸರ್ಕಾರವನ್ನು ಅಖಿಲ ಭಾರತ ವಿದ್ಯಾರ್ಥಿ ಸಂಘಟನೆ (AISA)ಎಚ್ಚರಿಸುತ್ತದೆ ಎಂಬುವುದಾಗಿ ಅಖಿಲ ಭಾರತ ವಿಧ್ಯಾರ್ಥಿ ಸಂಘಟನೆ AISA ಕರ್ನಾಟಕ ರಾಜ್ಯ ಸಮಿತಿ ತನ್ನ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.