ಮಾಣಿ (www.vknews.in) : ಮರಣಹೊಂದಿದವರ ವಿಜಯದ ಸೂಚನೆಗಳಲ್ಲೊಂದಾಗಿದೆ ತಮಗೆ ಪರಲೋಕದಲ್ಲಿ ಪ್ರತಿಫಲ ಸಿಗುವಂತಹಾ ಮಕ್ಕಳನ್ನು ಅರ್ಪಿಸುವುದು, ಎಂದು ಉಳ್ಳಾಲ ಸಯ್ಯಿದ್ ಮದನಿ ಕೇಂದ್ರ ಮಸೀದಿಯ ಖತೀಬ್ ಬಹು| ಇಬ್ರಾಹಿಂ ಸಅದಿ ಮಾಣಿ ಹೇಳಿದರು. ಅವರು ಕರ್ನಾಟಕ ಮುಸ್ಲಿಂ ಜಮಾಅತ್, ಎಸ್ವೈಎಸ್, ಎಸ್ಸೆಸ್ಸೆಫ್ ಸೂರಿಕುಮೇರು ಯುನಿಟ್ ವತಿಯಿಂದ ಮರ್ಹೂಂ ಅಬ್ಬಾಸ್ ಪಟ್ಲಕೋಡಿ ಮಾಣಿ ರವರ ಹೆಸರಿನಲ್ಲಿ ನಡೆದ ತಹ್ಲೀಲ್ ಮಜ್ಲಿಸ್ ಕುರ್ಆನ್ ಖತಂ ಹದಿಯಾ ಕಾರ್ಯಕ್ರಮಕ್ಕೆ ನೇತೃತ್ವ ನೀಡಿ ಮಾತನಾಡಿದರು.
ಮರಣಹೊಂದಿವರಿಗೆ ಪರಲೋಕಲ್ಲಿ ಪ್ರತಿಫಲ ಸಿಗುವ ಕರ್ಮಗಳಲ್ಲೊಂದಾಗಿದೆ ತಮ್ಮ ಮಕ್ಕಳನ್ನು ಸ್ವಾಲಿಹ್ ಗಳಾಗಿ ಮಾಡುವುದು,ಮೃತ ಅಬ್ಬಾಸಾಕರವರು ತಮ್ಮ ಇಬ್ಬರು ಮಕ್ಕಳನ್ನು ಆಲಿಂ ಗಳಾಗಿ ಮಾಡಿರುತ್ತಾರೆ,ಮತ್ತು ಉಲಮಾಗಳು ಮುತಅಲ್ಲಿಮರನ್ನು ಗೌರವಿಸುವವರಾಗಿಯೂ ಅವರಿಗೆ ಸಹಾಯ ಸೌಕರ್ಯ ಮಾಡಿಕೊಡುವುದರ ಮೂಲಕ ಗುರುತಿಸಿಕೊಂಡವರಾಗಿದ್ದರು, ಸಯ್ಯಿದ್ ಫಝಲ್ ತಂಙಳ್ ಕೂರತ್ ರವರ ಜನಾಝಾ ನೋಡಲು ಮಯ್ಯಿತ್ ನಮಾಝ್ ಮಾಡಲು ಉಳ್ಳಾಲಕ್ಕೆ ಉಸ್ತಾದರನ್ನು ಮತ್ತು ಮುತಅಲ್ಲಿಮರನ್ನು ತಮ್ಮ ಕಾರಿನಲ್ಲಿ ಕರೆದುಕೊಂಡು ಬಂದಿದ್ದ ಅವರು ಮಗ್ರಿಬ್ ಸಮಯದಲ್ಲಿ ಕುಸಿದುಬಿದ್ದು,ನಂತರ ಚಿಕಿತ್ಸೆಗೆ ಸ್ಪಂದಿಸದೆ ಅಲ್ಲಾಹನ ಅನುಲ್ಲಂಘನೀಯ ವಿಧಿಯಂತೆ ಶುಕ್ರವಾರ ಮರಣಹೊಂದಿದ್ದರು,ಎಂದು ಅನುಸ್ಮರಿಸಿದರು.
ಕೂರತ್ ತಂಙಳರ ಬಗ್ಗೆ ಹೇಳಿದ ಅವರು ಅಲ್ಲಾಹನು ಒಬ್ಬರನ್ನು ಉನ್ನತ ಪದವಿ ನೀಡಲು ಬಯಸಿದರೆ ಯಾರೂ ಅಸೂಯೆ ಪಟ್ಟು ಪ್ರಯೋಜನವಿಲ್ಲ, ಇಂದು ದಿನಂಪ್ರತಿ ನೂರಾರು ಜನರು ಖುರ್ರತುಸ್ಸಾದಾತ್ ರವರ ಝಿಯಾರತ್ ಮಾಡಲು ತೆರಳುವುದು ಆ ಕಾರಣದಿಂದಾಗಿದೆ ಎಂದು ಹೇಳಿದರು.ಕಾರ್ಯಕ್ರಮದಲ್ಲಿ ನಝೀರ್ ಅಮ್ಜದಿ ಸರಳಿಕಟ್ಟೆ,ಯೂಸುಫ್ ಹಾಜಿ ಸೂರಿಕುಮೇರು, ಹಬೀಬ್ ಶೇರಾ,ಇಸ್ಮಾಯಿಲ್ ಹಾಜಿ ಬುಡೋಳಿ,ಹನೀಫ್ ಸಂಕ,ಅಬ್ದುಲ್ ಕರೀಂ ಸೂರಿಕುಮೇರು, ಇಬ್ರಾಹಿಂ ಮುಸ್ಲಿಯಾರ್ ಹಳೀರ, ಅಶ್ರಫ್ ಮಾಣಿ,ಹಸೈನ್ ಟೈಲರ್ ಸೂರಿಕುಮೇರು, ಹಂಝ ಸೂರಿಕುಮೇರು,ಕಾಸಿಂ ಕೊಡಾಜೆ,ಇಬ್ರಾಹಿಂ, ಉಮ್ಮರ್,ಅಶ್ರಫ್, ಮುಂತಾದವರು ಉಪಸ್ಥಿತರಿದ್ದರು,ಸಲೀಂ ಮಾಣಿ ಕಾರ್ಯಕ್ರಮ ನಿರೂಪಿಸಿ ಧನ್ಯವಾದಗೈದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.