(www.vknews. in) ; ಮಂಗಳೂರು ಕಮಿಷನರೇಟ್ ವ್ಯಾಪ್ತಿಯ ಉಳ್ಳಾಲ ಪ್ರದೇಶದಲ್ಲಿ ಒಂದಿಲ್ಲೊಂದು ರೀತಿಯ ಮತೀಯ ಗಲಭೆ, ಗೂಂಡಾಗಿರಿ ಪುಂಡಾಟಿಕೆಯಂತಹ ಅಹಿತಕರ ಘಟನೆಗಳು ಪದೇ ಪದೇ ಸಂಭವಿಸುತ್ತಲೇ ಇರುತ್ತದೆ. ಅದರೊಂದಿಗೆ ಅಕ್ರಮದಂಧೆ, ಸಮಾಜ ಬಾಹಿರ ಈ ಎಲ್ಲಾ ಅನಿಷ್ಟಕಾರಿ ಪ್ರವೃತ್ತಿಗಳನ್ನು ನಿಗ್ರಹಿಸಲು ಸಮರ್ಥರಾದ ಪೋಲಿಸ್ ಅಧಿಕಾರಿಗಳನ್ನೇ ನೇಮಿಸುವುದು ಬಹು ಕಾಲದಿಂದ ನಡೆದು ಬಂದ ವಾಡಿಕೆ. ಸರ್ವಶ್ರೀ ಉದಯ ನಾಯಕ್, ಟಿ.ಆರ್. ಜಗನ್ನಾಥ್, ಆಶೋಕನ್, ಟಿ.ಡಿ. ನಾಗರಾಜ್, ಎಂ.ವಿ. ನಾಗರಾಜ್, ಸಂಜೀವ ನಾಯಕ್, ಮಂಜುನಾಥ ಶೆಟ್ಟಿ, ಜೆ. ಪಾಪಯ್ಯ, ಗೋಪಿಕೃಷ್ಣ, ವಿಶ್ವನಾಥ ಪಂಡಿತ್, ಸಂದೀಪ್, ಭಾರತಿ ಮುಂತಾದ ಪೋಲಿಸ್ ಅಧಿಕಾರಿಗಳು ತಮ್ಮ ಸಾಹಸ ಮೆರೆದಿದ್ದಾರೆ. ಇದೇ ಮಾದರಿಯಲ್ಲಿ ಬರುವ ಇನ್ನೊಬ್ಬ ದಕ್ಷ ಪೋಲಿಸ್ ಅಧಿಕಾರಿ ಶ್ರೀ ಬಾಲಕೃಷ್ಣ ಉಳ್ಳಾಲ ಠಾಣಾ ಇನ್ಸ್ಪೆಕ್ಟರ್ ರಾಗಿ ಕಳೆದ ಕೆಲವು ಸಮಯಗಳಿಂದ ಅಧಿಕಾರ ವಹಿಸಿಕೊಂಡಿರುವುದು ಉಳ್ಳಾಲ ವ್ಯಾಪ್ತಿಯ ಶಾಂತಿಪ್ರಿಯ ಜನತೆಗೆ ಮತ್ತೊಮ್ಮೆ ಭರವಸೆ ಮೂಡಿಸಿದೆ.
ಮೂಲತಃ ಮಂಡ್ಯ ಜಿಲ್ಲೆಯವರಾದ ಶ್ರೀ ಬಾಲಕೃಷ್ಣ ರಾಜ್ಯದ ವಿವಿದೆಡೆಗಳಲ್ಲಿ ಸೇವೆ ಸಲ್ಲಿಸಿ ದಕ್ಷತೆ, ಧೀರತೆ, ಪ್ರಾಮಾಣಿಕತೆಗೆ ಹೆಸರು ವಾಸಿಯಾಗಿದ್ದಾರೆ. ಯಾವ ಪ್ರಭಾವಕ್ಕೂ ಯಾರ ಆಸೆ-ಅಮಿಷಗಳಿಗೂ ಬಲಿಯಾಗದೆ ಜನತೆಯೊಂದಿಗೆ ನೇರ ಸಂಪರ್ಕವಿರಿಸಿಕೊಂಡ ಇನ್ಸ್ಪೆಕ್ಟರ್ ಶ್ರೀ ಬಾಲಕೃಷ್ಣ ಜನ ಸಾಮಾನ್ಯರ ಕಷ್ಟ-ಸುಖಗಳೊಂದಿಗೆ ಸ್ಪಂದಿಸಿ ಎಲ್ಲರ ಪ್ರಶಂಸೆಗೆ ಪಾತ್ರರಾದ ಪೋಲಿಸ್ ಅಧಿಕಾರಿಯಾಗಿದ್ದಾರೆ. ಉಳ್ಳಾಲದಂತಹ ವಿವಾದಾತ್ಮಕ ನಾಡಿನಲ್ಲಿ ಎಲ್ಲಾ ರೀತಿಯ ಗೂಂಡಾಗಿರಿ, ಪುಂಡಾಟಿಕೆ, ಮತೀಯ ವೈಷಮ್ಯ ಅಕ್ರಮ ದಂಧೆಗಳಂತಹ ಸಮಾಜ ಘಾತುಕ ಚಟುವಟಿಕೆಗಳನ್ನು ಸಂಪೂರ್ಣವಾಗಿ ನಿಗ್ರಹಿಸಿ ಉಳ್ಳಾಲದಾದ್ಯಂತ ಶಾಂತಿಯ ಬೀಡನ್ನಾಗಿ ಕಟ್ಟುವಲ್ಲಿ ಇನ್ಸ್ಪೆಕ್ಟರ್ ಬಾಲಕೃಷ್ಣ ಸನ್ನದ್ಧ ರಾಗಬೇಕಾಗಿದೆ. ಇಲ್ಲಿ ರಾಜಕಾರಣಿಗಳು, ಮಧ್ಯವತಿ೯ಗಳು, ಪೋಲಿಸ್ ಅಧಿಕಾರಿಗಳನ್ನು ದುರುಪಯೋಗ ಪಡಿಸಿಕೊಂಡು ತಮ್ಮ ಬೇಳೆ ಬೇಯಿಸಿಕೊಳ್ಳಲು ಹೊಂಚು ಹಾಕುವವರಿದ್ದಾರೆ. ಇತ್ತೀಚೆಗೆ ಸರಕಾರದ ವಿರುದ್ಧ ಪ್ರತಿಭಟನೆ ಮಾಡುತ್ತಿದ್ದ BJP ಯುವಮೋರ್ಚ ಮುಖಂಡನ ಕಾಲರ್ ಪಟ್ಟಿ ಹಿಡಿದು ಬಾರೀ ಸುದ್ದಿ ಮಾಡಿದ ಇನ್ಸ್ಪೆಕ್ಟರ್ ಬಾಲಕೃಷ್ಣ ಒತ್ತಡ, ಪ್ರಭಾವ, ಅಮಿಷಗಳಿಗೆ ಬಲಿಯಾಗದೆ ಉಳ್ಳಾಲ ಪರಿಸರದಲ್ಲಿ ಮತ್ತೊಮ್ಮೆ ಶಾಂತಿ-ಸುವ್ಯವಸ್ಥೆ ನೆಲೆ ಗೊಳಿಸಿ ತನ್ನ ಸೇವಾವಧಿಯಲ್ಲಿ ಯಶಸ್ವಿಯಾಗಲೆಂದು ನಾವು ಹಾರೈಸುತ್ತೇವೆ.
ಶೇಖ್- ಪುತ್ತೂರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.