(www.vknews. in) ; ಬಿಲ್ಲವ ಸೇವಾ ಸಂಘ ಕುಂದಾಪುರ (ರಿ) ಮುಂಬಯಿ ಇದರ ಆಡಳಿತ ಮಂಡಳಿ ಮತ್ತು ಉಪಸಮಿತಿಗಳ ಸಹಕಾರದೊಂದಿಗೆ ಮಹಿಳಾ ಸಮಿತಿಯ ಸಂಯೋಜನೆಯಲ್ಲಿ *ಜುಲೈ 28 ರವಿವಾರದಂದು ಸಂಜೆ ಗಂಟೆ 4-00 ರಿಂದ ಥಾಣೆ ರೈಲ್ವೆ ನಿಲ್ದಾಣದ ಸಮೀಪವಿರುವ ನಾಮ್ದೇವ್ ವಾಡಿ ಸಭಾಗೃಹ, ಮೊದಲನೇ ಮಹಡಿ, ಮಹರ್ಷಿ ಕರ್ವೆ ಮಾರ್ಗ, ನ್ಯೂ ಇಂಗ್ಲೀಷ್ ಸ್ಕೂಲ್ ಹತ್ತಿರ, ನೌಪಾಡ, ಥಾಣೆ (ಪಶ್ಚಿಮ)* ಇಲ್ಲಿ ಆಷಾಢೋತ್ಸವ ಆಚರಣೆ ಮತ್ತು ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ.
ಅಂದು ಆಷಾಢೋತ್ಸವದ ಅಂಗವಾಗಿ ಮಹಿಳಾ ಸದಸ್ಯೆಯರು ಕುಂದಾಪುರ ಶೈಲಿಯ ವಿವಿಧ ಖಾದ್ಯ-ವೈವಿಧ್ಯಗಳನ್ನು ಪರಿಚಯಿಸಲಿದ್ದು, ಮನೋರಂಜನೆಯ ಅಂಗವಾಗಿ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಪ್ರಸ್ತುತಪಡಿಸಲಿದ್ದಾರೆ.
ಸಂಘದ ಅಧ್ಯಕ್ಷರಾದ ಸೂರ್ಯ ಎಸ್. ಪೂಜಾರಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದು, ವೇದಿಕೆಯಲ್ಲಿ ಉಪಸ್ಥಿತ ಅತಿಥಿ ಗಣ್ಯರು ಜ್ಯೋತಿ ಪ್ರಜ್ವಲಿಸಿವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದಾರೆ ಎಂದು ಸಂಘದ ಪ್ರಕಟಣೆ ತಿಳಿಸಿದೆ.
ಸದಸ್ಯರು, ಸಮಾಜ ಬಾಂಧವರು ಹಾಗೂ ಹಿತಚಿಂತಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿ ಈ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕೆಂದು ಸಂಘದ ಗೌರವಾಧ್ಯಕ್ಷರಾದ ಸುರೇಶ ಎಸ್. ಪೂಜಾರಿ, ಅಧ್ಯಕ್ಷರಾದ ಸೂರ್ಯ ಎಸ್. ಪೂಜಾರಿ, ಗೌರವ ಪ್ರಧಾನ ಕಾರ್ಯದರ್ಶಿ ಅಶೋಕ ಎನ್. ಪೂಜಾರಿ, ಗೌರವ ಕೋಶಾಧಿಕಾರಿ ರಾಜಶ್ರೀ ಪಿ. ಸಾಲ್ಯಾನ್, ಯುವ ಅಭ್ಯುದಯ ಸಮಿತಿಯ ಕಾರ್ಯಾಧ್ಯಕ್ಷೆ ದೀಪಾ ವೈ. ಪೂಜಾರಿ, ಧಾರ್ಮಿಕ ಮತ್ತು ಸಾಮಾಜಿಕ ಸಮಿತಿಯ ಕಾರ್ಯಾಧ್ಯಕ್ಷ ಶ್ರೀಧರ ವಿ. ಪೂಜಾರಿ, ಮಹಿಳಾ ಸಮಿತಿಯ ಗೌರವ ಕಾರ್ಯಾಧ್ಯಕ್ಷೆ ಸಂತೋಷಿ ಎಸ್. ಪೂಜಾರಿ, ಕಾರ್ಯಾಧ್ಯಕ್ಷೆ ಮಲ್ಲಿಕಾ ಎಸ್. ಪೂಜಾರಿ, ಉಪಕಾರ್ಯಾಧ್ಯಕ್ಷೆಯರಾದ ಯಶೋದಾ ಎಸ್. ಪೂಜಾರಿ, ರೇಖಾ ಎನ್. ಬಿಲ್ಲವ ಕಾರ್ಯದರ್ಶಿ ಗಿರಿಜಾ ಬಿ. ಪೂಜಾರಿ, ಜತೆ ಕಾರ್ಯದರ್ಶಿಗಳಾದ ಶಾರದಾ ಬಿ. ಪೂಜಾರಿ, ಕುಸುಮ ಎ. ಪೂಜಾರಿ, ಮತ್ತು ಆಡಳಿತ ಮಂಡಳಿ ಹಾಗೂ ಉಪಸಮಿತಿಗಳ ಪದಾಧಿಕಾರಿಗಳು ಮತ್ತು ಸದಸ್ಯರು ಈ ಮೂಲಕ ವಿನಂತಿಸಿದ್ದಾರೆ.
ಈ ಕುರಿತು ಹೆಚ್ಚಿನ ಮಾಹಿತಿಗಾಗಿ ಆಡಳಿತ ಮಂಡಳಿ ಹಾಗೂ ಉಪಸಮಿತಿಗಳ ಪದಾಧಿಕಾರಿಗಳು ಮತ್ತು ಸದಸ್ಯರನ್ನು (8269100713/9619888160 ) ಸಂಪರ್ಕಿಸಬಹುದೆಂದು ಅಧ್ಯಕ್ಷರಾದ ಸೂರ್ಯ ಎಸ್. ಪೂಜಾರಿ ಹಾಗೂ ಪ್ರಧಾನ ಕಾರ್ಯದರ್ಶಿ ಅಶೋಕ ಎನ್. ಪೂಜಾರಿ ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.