(www.vknews. in) ; ಕರ್ನಾಟಕ ದೇವಿ ಭುವನೇಶ್ವರೀ ಯಕ್ಷಗಾನ ಐತಿಹಾಸಿಕ ಪ್ರಸಂಗ ಸೆಪ್ಟೆಂಬರ್ ನಲ್ಲಿ ಪ್ರದರ್ಶನ ಯಕ್ಷಗಾನ ಅಕಾಡಮಿಯ ಅಧ್ಯಕ್ಷರು ಡಾ. ತಲ್ಲೂರು ಶಿವರಾಮ ಶೆಟ್ಟಿ, ಶ್ರೀ ಅಮ್ನಾಯಃ ಯಕ್ಷ ಸಂಸ್ಕೃತಿ ಬಳಗ ಗಾಳಿಮನೆ ಹಾಗೂ ಕನ್ನಡ ಮತ್ತು ಸಂಸ್ಕೃತಿ ಬಳಗದ ಪ್ರಯೋಜಿಕತ್ವದಿಂದ ಇತ್ತೀಚಿಗೆ ಅಗಲಿದ ಇರ್ವರ ಪ್ರಸಿದ್ಧ ಕಲಾವಿದರಾದ ಕೀರ್ತಿಶೇಷ ಸುಬ್ರಹ್ಮಣ್ಯ ದಾರೇಶ್ವರರ ಅನುಸ್ಮೃತಿ ಹಾಗೂ ಶ್ರೀಧರ ರಾವ್ ಕುಂಬ್ಳೆಯವರ ನುಡಿನಮನ ಯಕ್ಷಗಾನ ತಾಳಮದ್ದಳೆ ಶೇಣಿ ಗೋಪಾಲ ಕೃಷ್ಣ ಭಟ್ ವಿರಚಿತ ಕವಿರತ್ನ ಕಾಳಿದಾಸ ಮೂಡಬಿದರೆ ಸಮೀಪ ಸಂಪಿಗೆ ದುರ್ಗಾಜ್ಯೋತಿಷ್ಯಾಲಯದ ಡಾ. ಯೋಗಿ ಸುಧಾಕರ ತಂತ್ರಿಯವರ ಮನೆಯಂಗಳದಲ್ಲಿ ನಡೆಯಿತು.
ಕಾರ್ಯಕ್ರಮದ ಸನ್ಮಾನ ಹಾಗೂ ಪುಷ್ಪನಮನ ಸ್ವೀಕರಿಸಿದ ಕರ್ನಾಟಕ ಯಕ್ಷಗಾನ ಅಕಾಡಮಿಯ ಅಧ್ಯಕ್ಷರಾದ ಡಾ. ತಲ್ಲೂರು ಶಿವರಾಮ ಶೆಟ್ಟಿಯವರು ಧಾರೇಶ್ವರರು ಸುಮಾರು ಹತ್ತು ವರ್ಷಗಳ ಕಾಲ ಉಡುಪಿ ರಾಜ್ಯಾಂಗಣದಲ್ಲಿ ಹಳೆಯ ಪೌರಾಣಿಕ ಪ್ರಸಂಗ ಯಕ್ಷಗಾನ ಅಷ್ಟಾಹ, ಸಪ್ತಾಹ ಮಾಡುತ್ತಿದ್ದೇವು. ಹಾಗೂ ಈ ವರ್ಷದ ಜಾನಪದ ಪ್ರಶಸ್ತಿಯನ್ನು ದಾರೇಶ್ವರರಿಗೆ ಕೊಡಬೇಕೆಂದು ಕೇಳಿದಾಗ ಈ ರೀತಿ ಕನಸಾಗಿ ಹೋಯಿತು ಎಂದು ನುಡಿದರು. ಅಲ್ಲದೇ ಮುಂದೆ ನನಗೆ ಒಂದು ಸರಕಾರದ ದೊಡ್ಡ ಜವಬ್ದಾರಿ ಎಂದರೇ ಈ ವರ್ಷ ಕರ್ನಾಟಕ ರಾಜ್ಯೋತ್ಸವದ ಸಂದರ್ಭದಲ್ಲಿ “ಶ್ರೀದೇವಿ ಭುವನೇಶ್ವರೀ” ಎಂಬ ಯಕ್ಷಗಾನ ಪ್ರಸಂಗ ರಚನೆ ಮಾಡಿ ಯಕ್ಷಗಾನ ಪ್ರದರ್ಶನಕ್ಕೆ ಅನುವು ಮಾಡಿಕೊಡಲು ಮಂತ್ರಿಗಳು ಹೇಳಿದರು.
ಅದಕ್ಕೆ ಹಲವಾರು ಯಕ್ಷಗಾನ ಕವಿಗಳನ್ನು ಸಂಪರ್ಕಿಸಿದಾಗ ಸಾಧ್ಯವಾಗದೇ ಇದ್ದಾಗ ಅದರ ಕಥೆ ಹಾಗೂ ಪ್ರಸಂಗ ರಚನೆಯನ್ನು ಕವಿ ಚಾರ ಪ್ರದೀಪ ಹೆಬ್ಬಾರ್ ರಿಗೆ ಒಪ್ಪಿಕೊಂಡು ಪ್ರಾಥಕ್ಷತೆಗೆ ಮೊನ್ನೆ ಕೇವಲ ಎರಡು ದಿನದಲ್ಲಿಕರ್ನಾಟಕದ ಇತಿಹಾಸವನ್ನು ಬರೆದು ಕೊಟ್ಟರು. ಸೆಪ್ಟೆಂಬರ್ ನಲ್ಲಿ ಮಂಗಳೂರು ಪುರಭವನದಲ್ಲಿ ಪ್ರಥಮ ಪ್ರದರ್ಶನ ಆಗಲಿದೆ ಎಂದು ಕರ್ನಾಟಕ ಯಕ್ಷಗಾನ ಅಕಾಡಮಿಯ ಅಧ್ಯಕ್ಷರು ಡಾ. ತಲ್ಲೂರ ಶಿವರಾಮ ಶೆಟ್ಟರು ಪ್ರದರ್ಶನಕ್ಕೆ ಬನ್ನಿ ಎಂದು ಮುಂಗಡವಾಗಿ ಹೇಳಿದರು.
ಡಾ. ಜ್ಯೋಶಿಯವರು ಗಾನ ದಾರೆ ದಾರೇಶ್ವರ ಎಂದು ಸುಬ್ರಮಣ್ಯ ಧಾರೇಶ್ವರರು ಸಂಗೀತ, ಹಾಗೂ ಜಾನಪದ, ಹಾಗೂ ಪೌರಾಣಿಕ ಹಿಡಿತಗಳಿಂದ ಪ್ರಸಂಗದ ಯಶಸ್ಸಿಗೆ ಕಾರಣನಾಗುತ್ತಿದ್ದರು. ನಾನು ಕಿರಿಮಂಜೇಶ್ವರ ಕಡೆಗೆ ಹೋದರೆ ಅವರ ಮನೆಯೇ ನನಗೆ ವಾಸವಾಗಿತ್ತು ಎಂದು ಧಾರೇಶ್ವರರ ಬಗ್ಗೆ ಹಾಗೂ ಕುಂಬ್ಳೆಯವರು ಸರಳ ಸಜ್ಜನ ವ್ಯಕ್ತಿ ಎಂದು ಅನುಸ್ಮೃತಿ ಮಾಡಿದರು. ಡಾ. ಗಾಳಿಮನೆಯವರು ಕುಂಬ್ಳೆಯವರು ತಮ್ಮ ಉರಿನ ತಾಳಮದ್ದಳೆ ನನ್ನ ಕರೆದುಕೊಂಡು ಹೋಗಿ ಆದರ ಆತಿಥ್ಯ ನೀಡರು.
ತುಂಬಿದ ಕೊಡ ತುಳುಕುದಿಲ್ಲ ಎಂಬ ಮಾತಿನಂತೆ ಹಲವಾರು ಸಂದರ್ಭದಲ್ಲಿ ನನ್ನಲ್ಲಿ ಆ ಪಾತ್ರ ಮಾಡುವುದು ಹೇಗೆ ಎಂದು ಕೇಳುವಂತಹ ಮುಗ್ಧತೆ ಮಗುವಿನ ಮನಸ್ಸು ಶ್ರೀಧರರಾಯರ ಪ್ರೀತಿಗೆ ಶಿರವಾಗುವೇ ಎಂದು ಹೇಳಿದರು. ಎರಡು ಅನರ್ಘ್ಯ ಯಕ್ಷಗಾನ ಕ್ಷೇತ್ರದ ಮಹಾನ್ ಚೇತನಗಳ ಅನುಸ್ಮೃತಿ ಮಾಡಲು ಚಾರ ಪ್ರದೀಪ ಹೆಬ್ಬಾರ್ ಹಾಗೂ ಡಾ. ಗಾಳಿಮನೆ ಯವರು ಕೇಳಿದಾಗ ಆಯಿತು ಒಪ್ಪಿಗೆ ಕೊಟ್ಟೆ, ಆದರೇ ನನ್ನ ಮನೆಯಂಗಳದಲ್ಲಿ ಮಾಡಲು ನಾನು ಸರಕಾರಕ್ಕೆ ತೆರಿಗೆ ವಿಧಿಸಬೇಕಾಯಿತು. ಯಾವುದೋ ತೆರಿಗೆ ಇಲಾಖೆಗೆ ದೂರು ನೀಡದ ಕಾರಣ ಈ ರೀತಿ ಡಾ. ಯೋಗಿ ತಂತ್ರಿಗಳು ಏನೆಯಾಗಲಿ ಈ ಕಾರ್ಯಕ್ರಮ ಮಾಡಿಲು ಒಪ್ಪಿದೆ. ಹಾಗೂ ನಾನು ಈ ಕಾರ್ಯಕ್ರಮದ ಸ್ಥಳ ಬಾಡಿಗೆ ಇಲ್ಲ. ಹಾಗೂ ಉಚಿತವಾಗಿ ಬಡವರಿಗೆ ಮದುವೆ, ಮುಂಜಿ ಸಣ್ಣ ಸಣ್ಣ ಕಾರ್ಯಕ್ರಮ ಮಾಡಲು ಅವಕಾಶವಿದೆ ಎಂದು ಡಾ. ಯೋಗಿ ಸುಧಾಕರ ತಂತ್ರಿಯವರು ಹೇಳಿದರು.
ದನಲಕ್ಷ್ಮೀ ಗೇರು ಉದ್ಯಮದ ಮಾಲಕರು ಹಾಗೂ ಅಮ್ಹಾಯಃ ಯಕ್ಷ ಸಂಸ್ಕೃತಿ ಬಳಗದ ಗೌರವ ಸಲಹೆಗಾರರಾದ ಶ್ರೀಪತಿ ಭಟ್ ರು ಇಂತಹ ಕಾರ್ಯಕ್ರಮ ಮಾಡಲು ಪ್ರೋತ್ಸಾಹ ನಮ್ಮಂತವರು ಪ್ರೋತ್ಸಹ ಇದ್ದೇ ಇದೆ. ಹಾಗೂ ಕಾಳಿದಾಸನ ಮಾಸವಾದ ಈ ಸಂದರ್ಭದೋಚಿತ ಯಕ್ಷಗಾನ ಪ್ರಸಂಗದ ಆಯ್ಕೆ ಕಲಾವಿದರ ಸಮಾಗಮ ಅನುಪಮ ಎಂದು ಅಧ್ಯಕ್ಷೀಯ ನುಡಿ ಹೇಳಿದರು. ಸಭೆಯಲ್ಲಿ ಕೆ. ರಮನಂದ ಪಂಡಿತರು ಹಿರಿಯ ವಕೀಲರು ಹಾಗೂ ಮೂಡಬಿದರೆ ಎಂಸಿಎಸ್ ಬ್ಯಾಂಕಿನ ವಿಶೇಷ ಮುಖ್ಯ ಕಾರ್ಯ ನಿರ್ವಾಹಣಾಧಿಕಾರಿ ಚಂದ್ರಶೇಖರ ಎಂ ಉಪಸ್ಥಿತರಿದ್ದರು. ಯುವ ಕವಿ ಚಾರ ಪ್ರದೀಪ ಹೆಬ್ಬಾರ್ ಪ್ರಸ್ತಾವನೆಗೈದರೆ, ಕೃಷ್ಣಮೂರ್ತಿ ಮಾಯಣ ಸ್ವಾಗತಿಸಿದರು.
ತಮ್ಮ ಸೊಗಸಾದ ನುಡಿಮುತ್ತುಗಳಿಂದ ನೆಲ್ಲಿಮಾರ್ ಸದಾಶಿವ ರಾವ್ ನಿರೂಪಣೆಗೈದರು. ಬಡಗಿನ ಹಿಮ್ಮೇಳ ಮಲೆನಾಡಿನ ಕೋಗಿಲೆ ಶಿವಶಂಕರ ಭಟ್ ಹರಿಹರಪುರದ ಭಾಗವತಿಗೆಗೆ ಕೋಟ ಶಿವಾನಂದರ ಹಾಗೂ ರಾಘವೇಂದ್ರ ಹೆಗಡೆ ಯಲ್ಲಾಪುರರ ಚಂಡೆ-ಮದ್ದಲೆಯ ಸಾಥ್ ನೀಡಿದರು. ಡಾ. ಜ್ಯೋಶಿ ಬೋಜರಾಜನ ಪಾತ್ರವಾದರೆ, ಕಾಳಿದಾಸನ ಪಾತ್ರದಲ್ಲಿ ಡಾ. ಗಾಳಿಮನೆಯವರು ಸಂಸ್ಕೃತ ಮಿಶ್ರಣ ಮಾತುಗಳು, ವಿಧ್ಯಾದರೆಯಾಗಿ ಕೆರೆಗದ್ದೆಯವರ ಲಾವಣ್ಯ, ನೆಲ್ಲಿಮರ್ ರ ಗಣಿಕಾಂಗನೆ ರತ್ನಕಲೆ ಹಾಗೂ ಪಂಡಿತ ಕವಿ ಡಿಂಡಿಮ ಮತ್ತು ಸುಭಾಹು ಮಹಾರಾಜನಾಗಿ, ಚಾರರ ಮೊದಲಾರ್ಧ ಕಾಳನ ಪಾತ್ರದಲ್ಲಿ ಕವಿರತ್ನ ಕಾಳಿದಾಸ ಯಕ್ಷಗಾನ ನಡೆಯಿತು.
ವರದಿ: ಚಾರ ಪ್ರದೀಪ ಹೆಬ್ಬಾರ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.