(www.vknews. in) ; ಹಣ ತೊಡಗಿಸಿ ಆನ್ಲೈನ್ನಲ್ಲಿ ಆಡುವಂಥ ರಮ್ಮಿ…ಆಟ ನಿಷೇದ ಮಾಡುವ ಬಗ್ಗೆ ಉಪ ತಾಸಿಲ್ದಾರ್ ಮುಖಾಂತರ ರಾಜ್ಯ ಸರ್ಕಾರಕ್ಕೆ ವರುಣ್ ಚಕ್ರವರ್ತಿ ಹಾಸನ ಮನವಿ ಮಾಡಿದರು. ಆನ್ಲೈನ್ ಗೇಮಿಂಗ್ ಆ್ಯಪ್ಗಳ ಮೂಲಕ ಜೂಜಾಟ ಸೇರಿದಂತೆ ವ್ಯತಿರಿಕ್ತ ದಂಧೆಯಲ್ಲಿ ತೊಡಗಿರುವ ಯುವ ಸಮೂಹ ಆನ್ ಲೈನ್ ಆಟವನ್ನು ಗೀಳಾಗಿಸಿಕೊಂಡಿದ್ದಾರೆ.
ಈ ಗೀಳು ಅವರ ಜೀವನವನ್ನೇ ಆಹುತಿ ಪಡೆಯುತ್ತಿದೆ. ಕಂಡೂ ಕಾಣದಂತಿದ್ದ ಈ ಪ್ರಕ್ರಿಯೆ ಮಾನಸಿಕ ತಜ್ಞರ ಹುಬ್ಬೆರಿಸುವಷ್ಟು ವ್ಯಾಪಕವಾಗಿ ಬೆಳೆದಿದೆ. ಆನ್ಲೈನ್ ಗೇಮ್ಗಳಾದ ಕ್ರಿಕೆಟ್ ಬೆಟ್ಟಿಂಗ್, ರಮ್ಮಿ, ಪೊಕರ್ ಸೇರಿದಂತೆ ಅನೇಕ ಆದಾಯದ ಆಮಿಷವೊಡ್ಡುವ ಕ್ರೀಡೆಗಳಿಗೆ ಯುವ ಸಮೂಹ ಬಲಿಯಾಗುತ್ತಿದೆ. ಜತೆಗೆ ಮಾನಸಿಕ ಕಾಯಿಲೆಗೆ ತುತ್ತಾಗುತ್ತಿದೆ. ಇದರಿಂದ ಅನೇಕರು ಜೀವ ಕಳೆದುಕೊಂಡ ಉದಾಹರಣೆಗಳು ಇವೆ. ಈ ಕುರಿತ ಮಾಹಿತಿ ಮತ್ತು ನಿವಾರಣೋಪಾಯಗಳು ಈ ವಾರದ ಸುದ್ದಿಸುತ್ತಾಟದಲ್ಲಿ
ರಾಜಧಾನಿಯಲ್ಲಿ ಇತ್ತೀಚೆಗೆ ಆನ್ಲೈನ್ ಗೇಮ್, ಕ್ರಿಕೆಟ್ ಬೆಟ್ಟಿಂಗ್, ಜೂಜಾಟಕ್ಕೆ ಯುವ ಸಮೂಹ ಬಲಿಯಾಗುತ್ತಿದ್ದು, ಕುಟುಂಬ ವ್ಯವಸ್ಥೆಮೇಲೂ ಇದು ಪರಿಣಾಮ ಬೀರುತ್ತಿದೆ. ವಿದ್ಯಾರ್ಥಿಗಳು, ವಯಸ್ಕರು ಹೀಗೆ ಎಲ್ಲ ವಯೋಮಾನದವರು ಆನ್ಲೈನ್ ಗೇಮ್ಚಟಕ್ಕೆ ಬಿದ್ದು ಹಣ ಕಳೆದುಕೊಳ್ಳುತ್ತಿರುವುದು ಒಂದೆಡೆಯಾದರೆ ಮತ್ತೂಂದೆಡೆ ಕೌಟುಂಬಿಕವಾಗಿ ಸಮಸ್ಯೆಗಳು ಎದುರಿಸುವಂತಾಗಿದೆ.ಪ್ರಾರಂಭದಲ್ಲಿ ಸಮಯ ಕಳೆಯಲು ಮೊಬೈಲ್ನಲ್ಲಿ ಆ್ಯಪ್ಗೃಮೂಲಕ ಆನ್ಲೈನ್ ಗೇಮ್ಗಳು ಆಕರ್ಷಿತರಾಗುವ ಯುವ ಸಮೂಹ ನಂತರ ಅದನ್ನೇ ಹವ್ಯಾಸವನ್ನಾಗಿಸಿ ಚಟ ಹತ್ತಿಸಿಕೊಳ್ಳುತ್ತಿರುವ ನೂರಾರು ಘಟನೆಗಳು ನಡೆಯುತ್ತಿವೆ.
ಕೊರೊನಾ ಸಂದರ್ಭದಲ್ಲಿ ವರ್ಕ್ಫ್ರಮ್ ಹೋಮ್, ಆನ್ಲೈನ್ ತರಗತಿಗಳು ಜನರನ್ನು ಅತಿಯಾಗಿ ಮೊಬೈಲ್ಗೆ ಅಂಟಿಕೊಳ್ಳವಂತೆ ಮಾಡಿತ್ತು. ಮೊದಲು ಮನರಂಜನೆಗಾಗಿ ಆಡುತ್ತಿದ್ದ ಆನ್ಲೈನ್ ಗೇಮ್ಗಳು ಹಂತ ಹಂತವಾಗಿ ಹವ್ಯಾಸದಿಂದ ವ್ಯಸನಕ್ಕೆ ತಿರುಗಿಸಾಕಷ್ಟು ಹಣವನ್ನು ಕಳೆದು ಕೊಂಡಿರುವುದರ ಜತೆಗೆ, ಕುಟುಂಬದಲ್ಲಿ ಸಂಘರ್ಷಕ್ಕೆ ಕಾರಣವಾಗಿರುವ ಪ್ರಕರಣಗಳು ಇವೆ. ಮನೋರೋಗಕ್ಕೆ ಚಿಕಿತ್ಸೆ ನೀಡುವ ಕೇಂದ್ರಗಳಲ್ಲಿ ಜೂಜಾಟ, ಗೇಮಿಂಗ್ಸ್ಗೆ ಬಲಿಯಾಗಿರುವ ತಮ್ಮ ಕುಟುಂಬದವರನ್ನು ಸರಿಮಾಡಿ ಎಂದು ಪೋಷಕರು ಕೌನ್ಸೆಲಿಂಗ್ಗಾಗಿ ಕರೆತರುವಂತಾಗಿದೆ.ಅದರಲ್ಲೂ ಯುವಕರ ಸಂಖ್ಯೆಯೇ ಹೆಚ್ಚು, ಕೌನ್ಸೆಲಿಂಗ್ ಕೇಂದ್ರಗಳಿಗೆ ಬಂದಿರುವ ಇಂತಹ ಪ್ರಕರಣಗಳ ಪೈಕಿ ಕೆಲವು ನಿಮ್ಮ ಮುಂದೆ..
ಪ್ರಕರಣ 1 : ಪ್ರಥಮ ಪಿಯು ಓದುತ್ತಿರುವಮೋಹಿತ್(ಹೆಸರು ಬದಲಿಸಲಾಗಿದೆ)ಗೆ ಕೊರೊನಾ ಅವಧಿಯಲ್ಲಿ ಆನ್ಲೈನ್ತರಗತಿಗಾಗಿ ತಂದೆಯ ಮೊಬೈಲ್ನೀಡಲಾಗಿತ್ತು. ಆತ ದಿನ ಕಳೆದಂತೆ ಆನ್ಲೈನ್ತರಗತಿ ಬಳಿಕ ಆನ್ಲೈನ್ ಗೇಮ್ಸ್ ಆಡುತ್ತಿದ್ದ. ಪ್ರಾರಂಭಿಕ ಹಂತದಲ್ಲಿತಂದೆ-ತಾಯಿ ಎದುರುಆಟವಾಡುತ್ತಿದ್ದವ, ನಂತರದ ದಿನಗಳಲ್ಲಿ ಏಕಾಏಕಿಯಾಗಿ ಮನೆಯವರ ಕಣ್ಣುತಪ್ಪಿಸಿ ಆಟವಾಡ ತೊಡಗಿದ.ತಂದೆಯ ಮೊಬೈಲ್ ಬ್ಯಾಂಕ್ ಫಾಸ್ವರ್ಡ್ ತಿಳಿದಿದ್ದ ಆತ ಗೇಮ್ಸ್ನ ಅಪ್ಡೇಟ್ ಹಂತಕ್ಕಾಗಿ ಮನೆಯಲ್ಲಿ ಯಾರಿಗೂ ತಿಳಿಯದಂತೆ ಖಾತೆಯನ್ನು ಗೇಮ್ಸ್ಗೆ ಲಿಂಕ್ ಮಾಡಿಕೊಂಡಿದ್ದಾನೆ.
ನಂತರ ಗೇಮ್ಸ್ ಅಪ್ಡೇಟ್ಗೆ ಹಂತ-ಹಂತವಾಗಿ ಸುಮಾರು ಖಾತೆಯಿಂದ 1.25 ಲಕ್ಷ ರೂ. ಕಡಿತಗೊಂಡಿದೆ. ಈ ಬಗ್ಗೆ ಮಾಹಿತಿ ಪಡೆಯಲು ಸೆನ್ ಠಾಣೆಗೆ ದೂರು ನೀಡಿದಾಗ ಮಗನ ಗೇಮ್ಸ್ ಹುಚ್ಚಿನಿಂದ ಹಣ ಕಳೆದುಕೊಂಡಿರುವುದು ತಿಳಿದಿದೆ. ಈ ಬಗ್ಗೆ ತಂದೆ ಮಗನಿಗೆ ಗದರಿಸಿದಾಗ ಆತ ಆತ್ಮಹತ್ಯೆ ಪ್ರಯತ್ನಸಿದ್ದ. ಆದ್ದರಿಂದ ಆತನಿಗೆ ಮಾನಸಿಕ ಆರೋಗ್ಯ ಸಂಬಂಧಿಸಿದಂತೆ ಚಿಕಿತ್ಸೆ ನೀಡಲಾಗುತ್ತಿದೆ.
ಪ್ರಕರಣ 2 ; ಖ್ಯಾತ ಐಟಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಒಬ್ಬ ವ್ಯಕ್ತಿಯೊಬ್ಬರು ಪೋಕರ್ ಎಂಬ ಜೂಜಾಟವನ್ನು ಮನರಂಜನೆಗಾಗಿ ಮೊದಲು ಸಾವಿರ ರೂ. ಕಟ್ಟಿ ಆಡಲು ಆರಂಭಿಸಿದರು. ಒಮ್ಮೆ ಬಂದ ಲಾಭದಿಂದ ಪ್ರೇರಣೆಗೊಂಡು ಪುನಃ ಜೂಜಾಟ ಮುಂದುವರೆಸಿ 2020ರಲ್ಲಿ ಲಕ್ಷಾಂತರ ರೂ. ಕಳೆದುಕೊಂಡಿದ್ದಾರೆ. ಈ ಹಣವನ್ನು ಪುನರ್ಗಳಿಸಲು ತಮ್ಮ 32 ಲಕ್ಷದ ಆಸ್ತಿಯನ್ನು ಹೆಚ್ಚಿನ ಬಡ್ಡಿ ಸಾಲಕ್ಕೆ ಅಡವಿಡುತ್ತಾರೆ ಹಾಗೂ ವಿವಿಧ ಬ್ಯಾಂಕ್ಗಳಲ್ಲಿ ಸಾಲ ಪಡೆಯುತ್ತಾರೆ.
ಅವರು ಕಳೆದ ಮೂರು ವರ್ಷಗಳ ಹಿಂದೆ ಮದುವೆಯಾಗಿದ್ದಾರೆ. ಆರ್ಥಿಕ ಸಂಕಷ್ಟಕ್ಕೆ ಈಡಾಗಿದ್ದರಿಂದ ಅವರ ವೈಯಕ್ತಿಕ ಜೀವನವು ತೊಂದರೆಗೀಡಾಗಿದೆ. ಆಸ್ತಿಯನ್ನು ಹೆಚ್ಚಿನ ಬಡ್ಡಿ ಸಾಲಕ್ಕೆ ಗಿರವಿ ಇಟ್ಟಿರುವುದು ಹಾಗೂ ಇತರರಲ್ಲಿ ಸಾಲ ಪಡೆದಿರುವುದು ಇತ್ತೀಚೆಗೆ ತಿಳಿದ ಅವರ ಪತ್ನಿ ಪೊಲೀಸ್ ವ್ಯಾಪ್ತಿಗೆ ಬರುವ ವನಿತಾ ಸಹಾಯವಾಣಿಯ ಕೌಟುಂಬಿಕ ಸಲಹಾ ಕೇಂದ್ರ-ಪರಿಹಾರ್ ಸಂಪರ್ಕಿಸಿದ್ದಾರೆ.
ಕಾರಣಗಳು :
ಪರಿಹಾರಗಳು :
ಅಖಿಲ ಭಾರತ ಕಾಂಗ್ರೆಸ್ ಕಮಿಟಿ ಮಾನವ ಹಕ್ಕು ಆಯೋಗದ ಹಾಸನ ಅಧ್ಯಕ್ಷ ವರುಣ್ ಚಕ್ರವರ್ತಿ ಮತ್ತು ಡಿಎಸ್ಎಸ್ ಸಂಚಾಲಕ ಮನೋಜ್ ನಾಯಕ್ ಅವರು ನವೀನ ರಘು ತಾಲ್ಲೂಕು ಉಪ ತಹಸಿಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.