(www.vknews.in) : ಮಂಗಳೂರು ನಗರ ಪೋಲಿಸ್ ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿರುವ ಅತ್ಯಂತ ದಕ್ಷ ಪೋಲಿಸ್ ಕಮಿಷನರ್ ಶ್ರೀ ಅನುಪಂ ಅಗರ್ ವಾಲ್ ನಗರದ ಇತಿಹಾಸದಲ್ಲಿ ಒಂದು ಅತ್ಯುನ್ನತ ಅಧ್ಯಾಯವನ್ನು ಬರೆದ ಧೀರ ಪೋಲಿಸ್ ಅಧಿಕಾರಿಯಾಗಿದ್ದಾರೆಂದು ಹೇಳಲು ಅಭಿಮಾನ ಪಡ ಬೇಕಾಗುತ್ತದೆ.
ಕಳೆದ 9 ತಿಂಗಳಿನಿಂದ ಮಂಗಳೂರು ಪೋಲಿಸ್ ಕಮಿಷನರ್ ಆಗಿ ಸೇವೆ ಸಲ್ಲಿಸುತ್ತಿರುವ ಶ್ರೀ ಅನುಪಂ ಅಗರ್ ವಾಲ್ ಮೂಲತಃ ರಾಜಸ್ಥಾನದವರು. ರಾಮನಗರ, ವಿಜಯಪುರ, ದಾವಣಗೆರೆ, ಬೆಳ್ಗಾಂ ನಲ್ಲಿ ASP ಯಾಗಿಯೂ, DCP ಯಾಗಿಯೂ, ಈಶಾನ್ಯ ವಲಯದ DIG ಯಾಗಿಯೂ, ಕನಾ೯ಟಕ ಪೋಲಿಸ್ ಅಕಾಡೆಮಿಯ ನಿದೇ೯ಶಕರಾಗಿಯೂ ಸೇವೆ ಸಲ್ಲಿಸಿ ಜನಮನ್ನಣೆ ಗಳಿಸಿ ದಕ್ಷ-ಪ್ರಾಮಾಣಿಕ ಧೀರ ಅಧಿಕಾರಿ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ.
ಅಶಾಂತಿ-ಅಶಿಸ್ತಿನ ಅಗರವಾಗಿದ್ದ ಮಂಗಳೂರು ನಗರವನ್ನು ತಹಬದಿಗೆ ತಂದು ಮಂಗಳೂರು ನಗರದಾದ್ಯಂತ ಶಾಂತಿ – ಸುವ್ಯವಸ್ಥೆಯನ್ನು ನೆಲೆ ಗೊಳಿಸಿ ನಗರದಲ್ಲಿ ತಾಂಡವ ವಾಡುತ್ತಿದ್ದ ಗೂಂಡಾಗಿರಿ, ಮತೀಯ ಗಲಭೆ, ಗ್ಯಾಂಬ್ಲಿಂಗ್, ಮಾದಕ ದ್ರವ್ಯ, ವೇಶ್ಯಾವಾಟಿಕೆ ಮುಂತಾದ ಅನಿಷ್ಟ ಚಟುವಟಿಕೆಗಳ ವಿರುದ್ಧ ಸಮರ ಸಾರಿ ಮಂಗಳೂರು ನಗರದಾದ್ಯಂತ ಜನಮನದಲ್ಲಿ ಜನಪ್ರಿಯ ಪೊಲೀಸ್ ಕಮಿಷನರ್ ಆಗಿ ಮೆರೆಯುತ್ತಿರುವುದು ಅವರ ಕಾರ್ಯ ದಕ್ಷತೆ ಹಿಡಿದ ಕೈಗನ್ನಡಿಯಾಗಿದೆ. ಇತ್ತೀಚೆಗೆ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲಿ ನಡೆದ 3 ಭೀಕರ ದರೋಡೆ -ಡಕಾಯಿತಿ ಪ್ರಕರಣ ಗಳನ್ನು ಕೇವಲ 4 ತಾಸಿನೊಳಗೆ ಪತ್ತೆ ಹಚ್ಚಿ ಚಡ್ಡಿ ಗ್ಯಾಂಗ್ ಸಹಿತ ಎಲ್ಲಾ ಆರೋಪಿಗಳನ್ನು, ಚಿನ್ನಾಭರಣ, ನಗದುಗಳನ್ನು ವಶಪಡಿಸಿ ಪೋಲಿಸ್ ಇಲಾಖೆ ಗೆ ಕೀರ್ತಿ ತಂದ ಪೋಲಿಸ್ ಕಮಿಷನರ್ ಶ್ರೀ ಅನುಪಂ ಅಗರ್ ವಾಲ್ ಹಾಗೂ ಕಂಕನಾಡಿ, ಉರ್ವ ಗ್ರಾಮಾಂತರ ಪೋಲಿಸ್ ಠಾಣೆಯ ಪೋಲಿಸ್ ಅಧಿಕಾರಿ ಗಳೂ, ಸಿಬ್ಬಂದಿಗಳೂ CCB ಘಟಕದ ಅಧಿಕಾರಿಗಳೂ, ಸಿಬ್ಬಂದಿಗಳೂ ಹಾಗೂ ಕಾನೂನು ಸುವ್ಯವಸ್ಥೆ DCP ಗೋಯಲ್ ಹಾಗೂ ಕ್ರೈಂ DCP ದಿನೇಶ್ ಕುಮಾರ್ ರವರನ್ನು DGP ಶ್ರೀ ಅಲೋಕ್ ಮೋಹನ್ ರವರು ಸಾರ್ವತ್ರಿಕ ವಾಗಿ ಸನ್ಮಾನಿಸಿ ಪುರಸ್ಕರಿಸ ಬೇಕಾಗಿದೆ.
ಯಾವುದೇ ಹೊತ್ತಿನಲ್ಲೂ ಜನ ಸಾಮಾನ್ಯರು ನೇರವಾಗಿ ಕಮಿಷನರ್ ಶ್ರೀ ಅನುಪಂ ಅಗರ್ವಾಲ್ ರನ್ನು ಸಂಪಕಿ೯ಸಿ ತಮ್ಮ ಅಹವಾಲುಗಳನ್ನು ತೋಡಿಕೊಂಡರೆ ಜನರ ಕಷ್ಟ ಕಾರ್ಪಣ್ಯಗಳೊಂದಿಗೆ ಸ್ಪಂದಿಸುವ ವಿಶಾಲ ಹೃದಯಿ ಅನುಪಂ ಅಗರ್ವಾಲ್ ಮಂಗಳೂರು ನಗರಕ್ಕೊಂದು ವರದಾನವಾಗಿದ್ದಾರೆ.
ಇದೀಗ ಮಂಗಳೂರು ನಗರದೊಳಗೆ ವಕ್ಕರಿಸಲು ಕೆಲ ಅಧಿಕಾರಿಗಳು ಬಾರೀ ಹೊಂಚು ಹಾಕುತ್ತಿದ್ದು ಕೆಲ ರಾಜಕಾರಣಿ ಗಳಿಗೆ ದುಂಬಾಲು ಬಿದ್ದಿದ್ದಾರೆ ಎನ್ನಲಾಗಿದೆ. ಪೋಲಿಸ್ ಇಲಾಖೆಯಲ್ಲಿ ಯಾವ ಪ್ರತಿಫಲ ವನ್ನು ಅಪೇಕ್ಷಿಸದೆ ಪ್ರಾಮಾಣಿಕ ವಾಗಿ ದುಡಿದು ತನ್ನನ್ನು ಸಮಪಿ೯ಸಿ ಕೊಂಡಂತಹ ಕೆಲವೇ ಮಂದಿ ಪೋಲಿಸರೂ, ಪೋಲಿಸ್ ಅಧಿಕಾರಿಗಳೂ ಜನತೆಯ ಪ್ರಶಂಸೆ ಗಿಟ್ಟಿಸಿ ಕೊಂಡವರೂ ಇದ್ದಾರೆ. ಈ ರೀತಿ ಪ್ರಾಮಾಣಿಕತೆಯಿಂದ ಕೆಲಸ ಮಾಡುತ್ತಿರುವ ಅಧಿಕಾರಿಗಳಿಗೆ ಕಿರುಕುಳವಾಗುತ್ತಿದೆ. ಯಾರ ಹಂಗೂ ಇಲ್ಲದೆ ಯಾರ ಪ್ರಭಾವ ಕ್ಕೂ ಸಿಕ್ಕದೆ ನಿಷ್ಠುರವಾಗಿ ಕೆಲಸ ಮಾಡುವ ಅಧಿಕಾರಿಗಳನ್ನು, ರಾಜಕಾರಣಿಗಳು, ಬಂಡವಾಳ ಶಾಹಿಗಳು ಹಠಾತ್ ವಗಾ೯ವಣೆ ಮಾಡಿಸುತ್ತಾರೆ. ಈ ಎಲ್ಲಾ ವಿಚಾರಗಳ ಬಗ್ಗೆ ಕನಾ೯ಟಕ ರಾಜ್ಯದ ಅತ್ಯಂತ ದಕ್ಷ DGP ಯಾಗಿರುವ ಶ್ರೀ ಅಲೋಕ್ ಮೋಹನ್ ರವರು ಕೂಲಂಕುಶವಾಗಿ ಗಮನ ಹರಿಸಿ ಪ್ರಾಮಾಣಿಕ ಅಧಿಕಾರಿಗಳನ್ನು ತಾವು ರಕ್ಷಿಸುತ್ತೀರೆಂಬ ಭರವಸೆ ನಮಗಿದೆ. ಆದ್ದರಿಂದ ದಕ್ಷತೆ-ಪ್ರಾಮಾಣಿಕತೆಗೆ ಹೆಸರುವಾಸಿಯಾಗಿರುವ ಕಮಿಷನರ್ ಶ್ರೀ ಅನುಪಂ ಅಗರ್ವಾಲ್ ರನ್ನು ಪೋಲಿಸ್ ಕಮಿಷನರ್ ಆಗಿ ಇನ್ನಷ್ಟು ಕಾಲ ಅವರ ಸೇವಾವಧಿಯನ್ನು ವಿಸ್ತರಿಸಬೇಕೆಂದು ಜನತೆ ಮಾನ್ಯ DGP ಅಲೋಕ್ ಮೋಹನ್ IPS ಹಾಗೂ ಸರಕಾರವನ್ನು ಅಗ್ರಹಿಸುತ್ತಾರೆ.
ಶೇಖ್ ಇಸಾಕ್ ಸಂಪಾದಕರು ಕಾಕೋ೯ಟಕ ಸಾಪ್ತಾಹಿಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.