ಬೆಂಗಳೂರು (www.vknews.in) : ವಯನಾಡು ಮುಂಡಕ್ಕೈ ಭೂಕುಸಿತದಲ್ಲಿ ನಿರಾಶ್ರೀತರಾದ ಸಂತ್ರಸ್ತರಿಗೆ 100 ಮನೆಗಳನ್ನು ನಿರ್ಮಿಸಿಕೊಡುವುದಾಗಿ ಕರ್ನಾಟಕ ಸರ್ಕಾರ ಘೋಷಿಸಿದೆ.
ಸಾಮಾಜಿಕ ಜಾಲತಾಣ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಸಿಎಂ ಸಿದ್ದರಾಮಯ್ಯ ಅವರು, ಕೇರಳ ಸರ್ಕಾರದೊಂದಿಗೆ ನಾವು ಇದ್ದೇವೆ. ಅಗತ್ಯ ನೆರವು ಒದಗಿಸುವುದರೊಂದಿಗೆ ಸಂತ್ರಸ್ತರಿಗಾಗಿ 100 ಮನೆಗಳನ್ನು ನಿರ್ಮಿಸಿಕೊಡುವ ಮೂಲಕ ನಾವು ಒಟ್ಟಾಗಿ ಅಲ್ಲಿನ ಜನರ ಬದುಕಿನಲ್ಲಿ ಮತ್ತೊಮ್ಮೆ ಭರವಸೆಯ ಆಶಾಕಿರಣವನ್ನು ಮೂಡಿಸೋಣ ಎಂದು ಹೇಳಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.