ಅಬುಧಾಬಿ (www.vknews. in) ; ಕರ್ನಾಟಕ ಬೃಹತ್ ಮೀಲಾದ್ ಕಾನ್ಫರನ್ಸ್ ಸ್ವಾಗತ ಸಮಿತಿಯ ಸಭೆಯು ಜನಾಬ್ ಶಾಕಿರ್ ಕೂರ್ನಡ್ಕ ರವರ ನಿವಾಸದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಜನಾಬ್ ಶಹೀರ್ ಹುದವಿ ಉಸ್ತಾದರ ಅಧ್ಯಕ್ಷತೆಯಲ್ಲಿ ನಡೆಸಲಾಯಿತು, ಮುಖ್ಯ ಅತಿಥಿಯಾಗಿ ಮೊಹ್ದಿನ್ ಕುಟ್ಟಿ ಹಾಜಿ ದಿಬ್ಬ ಹಾಗೂ ಒಮೆಘ ಮಹಮ್ಮದ್ ಹಾಜಿಯವರು ಉಪಸ್ಥಿತರಿದ್ದರು,
ಕಾರ್ಯಕ್ರಮದ ಉಧ್ಘಾಟನೆಯನ್ನು ಜನಾಬ್ ಸಯ್ಯದ್ ಅಬ್ದುಲ್ ರಹ್ಮಾನ್ ತಂಙಳ್ ಮಲಪ್ಪುರಂ ರವರು ನೆರೆವೇರಿಸಿದ ನಂತರ ಮಾತನಾಡಿ ಅಬುಧಾಬಿ ಕರ್ನಾಟಕ ಎಸ್ ಕೆ ಎಸ್ ಎಸ್ ಎಪ್ಹ್ ಹಮ್ಮಿಕೊಂಡ ಕಾರ್ಯಕ್ರಮಗಳನ್ನು ಸ್ಲಾಗಿಸುತ್ತಾ ಅಬುಧಾಬಿ ಕರ್ನಾಟಕ ಎಸ್ ಕೆ ಎಸ್ ಎಸ್ ಎಪ್ಹ್ ಕಾರ್ಯವೈಕರಿಯ ಬಗ್ಗೆ ಸಂಘಟನಾ ಚತುರತೆಯನ್ನು ನೋಡಿ ಮೂಖವಿಶ್ಮಯವಾದರು,
ಮುಖ್ಯ ಅತಿಥಿಗಳಾದ ಜನಾಬ್ ದಿಬ್ಬ ಹಾಜಿಯವರು ಮಾತನಾಡಿ ಇಂದಿನ ಕಾಲಘಟ್ಟದಲ್ಲಿ ಇಂತಹ ಕಾರ್ಯಕ್ರಮಗಳು ಸಮಾಜಕ್ಕೆ ಅತ್ಯಾವಶ್ಯಕ ಹಾಗೂ ಮುಂದಿನ ಪೀಳಿಗೆಗೆ ಮಾದರಿಯಾಗಲಿ ಎಂದು ಶುಭ ಹಾರೈಸಿದರು ಕಾರ್ಯಕ್ರಮದಲ್ಲಿ 2024 ರ ಕರ್ನಾಟಕ ಬೃಹತ್ ಮೀಲಾದ್ ಕಾನ್ಫರನ್ಸ್ ಇದರ ಸ್ವಾಗತ ಸಮಿತಿಯನ್ನು ರಚಿಸಲಾಯಿತು
ಗೌರವಾದ್ಯಕ್ಷರಾಗಿ ಜನಾಬ್ , ಅಬ್ದುಲ್ ರಹ್ಮಾನ್ ತಂಘಳ್ ಮಲಪ್ಪುರಂ, ಅಸ್ಕರ್ ಅಲಿ ತಂಙಳ್, ಕೋಲ್ಪೆ ( ದುಬೈ), ಮೊಯಿದೀನ್ ಕುಟ್ಟಿ ಹಾಜಿ ದಿಬ್ಬ, ರವರನ್ನು ಆಯ್ಕೆಮಾಡಲಾಯಿತು. ಗೌರವ ಸಲಹೆಗಾರರಾಗಿ, ಶಹೀರ್ ಹುದವಿ ಉಸ್ತಾದ್ ಚಿಕ್ಕಮಗಳೂರು, ಹನೀಫ್ ಹಾಜಿ ಅರಿಯಮೂಲೆ, ಬದುರುದ್ದೀನ್ ಕುಂಡಾಜೆ, ಶಾಪಿ ಹಾಜಿ ಪೆರುವಾಯಿ ಯವರನ್ನು ಆಯ್ಕೆಮಾಡಲಾಯಿತು. ಕರ್ನಾಟಕ ಬೃಹತ್ ಮೀಲಾದ್ ಕಾನ್ಫರನ್ಸ್ ಸ್ವಾಗತ ಸಮಿತಿಯ ಅಧ್ಯಕ್ಷರಾಗಿ ಜನಾಬ್ ಮೊಹಮ್ಮದ್ ಹಾಜಿ (OMEGA) ಹಾಗೂ ಕಾರ್ಯಾಧ್ಯಕ್ಷರಾಗಿ ಶಾಕಿರ್ ಕೂರ್ನಡ್ಕ ರವರನ್ನು ಆಯ್ಕೆಮಾಡಲಾಯಿತು,
ಕಾರ್ಯಕ್ರಮದಲ್ಲಿ SKSSF ಕರ್ನಾಟಕ ಅಬುಧಾಬಿ ಸಮಿತಿಯ ಕಾರ್ಯಕಾರಿ ಸಮಿತಿ ಸದಸ್ಯರಾದ ಉಸ್ತಾದ್ ಹಸನ್ ದಾರಿಮಿ , ಅಬೂಬಕ್ಕರ್ ಸಕಲೇಶ್ ಪುರ , ಯಹ್ಯಾ ಕೊಡ್ಲಿಪೇಟೆ, ಹಮೀದ್ ಸವಣೂರು, ಖಲಂದರ್ ಶಾಫಿ ಸುಳ್ಯಪದವು, ಬಶೀರ್ ಚೆರಂಭಾಣೆ,ಸಿರಾಜ್ ಪರ್ಲಡ್ಕ, ಜಾಫರ್ ಉಪ್ಪಿನಂಗಡಿ,ಇದ್ರೀಸ್ ಬೆಳ್ಳಾರೆ,ಅಲೀ ಕಾಸರಗೊಡ್ ,ಜೌಹರ್ ಕನ್ನಡಿಕಟ್ಟೆ ,ತ್ವಾಹ ಉಪ್ಪಿನಂಗಡಿ,ಹಿದಾಯತ್ ಮರ್ವೆಲ್ ,ನಾಸೀರ್ ಆತೂರು ಮತ್ತು ಪತ್ತೂರು ಬಾಯ್ಸ್ ಸದಸ್ಯರು ಉಪಸ್ಥಿತಿದ್ದರು ,ಕಾರ್ಯಕ್ರಮವನ್ನು ಹಾಫಿಳ್ ಝೈನ್ ಸಖಾಫಿ ಉಸ್ತಾದರು ನಿರೂಪಿಸಿದರು ಶಾಕಿರ್ ಕೂರ್ನದ್ಕ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.