(www.vknews. in) ; ರಾತ್ರಿ ಸುರಿದ ಭಾರೀ ಮಳೆಗೆ ಬೆಳ್ತಂಗಡಿ ತಾಲೂಕಿನ ಕರಾಯ ಗ್ರಾಮದ ಕುಪ್ಪೆಟ್ಟಿ ಸಮೀಪದ ಮನೆಯೊಂದಕ್ಕೆ ಭಾರೀ ಗಾತ್ರದ ಗುಡ್ಡ ಜರಿದು ಅನಾಹುತ ಸಂಭವಿಸಿದೆ. ಮನೆಯ ಹಿಂಬದಿಯ ಭಾಗಕ್ಕೆ ಭಾರೀ ಮಣ್ಣು ಜರಿದು ಬಿದ್ದು, ವಾಷಿಂಗ್ ಮೆಷೀನ್, ಪೀಠೋಪಕರಣಗಳು, ಕಿಟಕಿ ಬಾಗಿಲುಗಳಿಗೆ ತೀವ್ರ ಹಾನಿಯಾಗಿ ಸಾವಿರಾರು ನಷ್ಟ ಉಂಟಾಗಿದೆ.
ಹಿಂದಿನ ಬಾಗಿಲು ತೆರೆಯಲು ಕೂಡಾ ಅಸಾಧ್ಯವಾಗಿದ್ದ ಸಂಕಷ್ಟವನ್ನು ಅರಿತ, ಸುನ್ನೀ ಯುವಜನ ಸಂಘ ಉಪ್ಪಿನಂಗಡಿ ಝೋನ್ ವ್ಯಾಪ್ತಿಯ ಇಸಾಬ ಸಾಂತ್ವನ ಕಾರ್ಯಕರ್ತರು ಮಣ್ಣು ತೆಗೆಯುವ ಮೂಲಕ ಸಹಕರಿಸಿದರು.
ತಂಡದಲ್ಲಿ ಇಸಾಬ ಝೋನ್ ಕಾರ್ಯದರ್ಶಿ ಎನ್. ಎಂ ಶರೀಫ್ ಸಖಾಫಿ ನೆಕ್ಕಿಲ್, ಆತೂರು ಸರ್ಕಲ್ ಅಧ್ಯಕ್ಷರಾದ ಅಬ್ದುಲ್ ರಝಾಕ್ ನೇರೆಂಕಿ, ಕುಪ್ಪೆಟ್ಟಿ ಸರ್ಕಲ್ ಇಸಾಬ ಕಾರ್ಯದರ್ಶಿ ಸಲೀಂ ಅಳಕೆ, ಕುಪ್ಪೆಟ್ಟಿ ಯುನಿಟ್ ಅಧ್ಯಕ್ಷರಾದ ಅಬ್ಬಾಸ್ ನೈಕಾಯ, ಸಾಂತ್ವನ ಕಾರ್ಯದರ್ಶಿ ಶರೀಫ್ ಕರಿಮಣ್ಣು, ಅಗ್ರಹಾರ ಅಝೀಝ್ ಸಅದಿ, ತುರ್ಕಳಿಕೆ ಸರ್ಕಲ್ ಇಸಾಬ ಕಾರ್ಯದರ್ಶಿ ಇಕ್ಬಾಲ್ ಕೊಲ್ಯ, ಜುನೈದ್ ಹಿಮಮಿ, ಸಿದ್ದೀಕ್ ಮದನಿ ಕುದ್ರಡ್ಕ, ಆಸಿಫ್ ಕಯರಡ್ಕ, ರಫೀಕ್ ಕಲ್ಪನೆ, ನಿಝಾಂ ಅಳಕೆ, ಸಿರಾಜ್ ತಿರ್ಗಾಸ್, ರಿಯಾಝ್, ಹಸೈನಾ ಕುಪ್ಪೆಟ್ಟಿ, ಮೊದಲಾದವರು ಸಹಕರಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.