ಬಿಎಸ್ಸೆ ಇನ್ ಸೈಡ್ 2024 ಕಾರ್ಯಕ್ರಮದಲ್ಲಿ ಅತ್ಯಾಧುನಿಕ ಯಂತ್ರ ತಯಾರಿಕಾ ತಂತ್ರಜ್ಞಾನ ಪ್ರದರ್ಶನ ಮಾಡಲಿರುವ ಬಿಎಸ್ಸೆ ಆಗಸ್ಟ್ 8- ಆಗಸ್ಟ್ 10ರಂದು ಬಿಎಸ್ಸೆ ಕಂಪನಿಯು ತನ್ನ ಅತ್ಯಾಧುನಿಕ ಉತ್ಪಾದನಾ ತಂತ್ರಜ್ಞಾನವನ್ನು ಪ್ರದರ್ಶಿಸಲಿದೆ..
ಬೆಂಗಳೂರು (www.vknews. in) ; ಮರಗೆಲಸದ ಯಂತ್ರೋಪಕರಣಗಳ ತಯಾರಿಕೆಯಲ್ಲಿ ಜಾಗತಿಕವಾಗಿ ಮುಂಚೂಣಿಯಲ್ಲಿರುವ ಬಿಎಸ್ಸೆ ಕಂಪನಿಯ ಬಹು ನಿರೀಕ್ಷಿತ ಬಿಎಸ್ಸೆ ಇನ್ ಸೈಡ್ 2024 ಕಾರ್ಯಕ್ರಮವು ಬೆಂಗಳೂರಿನ ಬಿಎಸ್ಸೆ ಶೋರೂಮ್ ನಲ್ಲಿ ಆಗಸ್ಟ್ 8ರಿಂದ ಆಗಸ್ಟ್ 10ರವರೆಗೆ ನಡೆಯಲಿದೆ. ಈ ಕಾರ್ಯಕ್ರಮದಲ್ಲಿ ಕಂಪನಿಯು ಗ್ರಾಹಕರಿಗೆ ಮರ, ಗಾಜು, ಕಲ್ಲು ಮತ್ತು ಇತರ ವಸ್ತುಗಳನ್ನು ಸಂಸ್ಕರಿಸಲು ಬಳಸುವ ಅತ್ಯಾಧುನಿಕ ಯಂತ್ರಗಳು ಮತ್ತು ತಂತ್ರಜ್ಞಾನಗಳನ್ನು ವೀಕ್ಷಿಸುವ ಅಪೂರ್ವ ಅವಕಾಶ ಒದಗಿಸುತ್ತಿದೆ.
ಈ ಕಾರ್ಯಕ್ರಮದಲ್ಲಿ ನಾರ್ಸಿ ಸಮೂಹದ ವ್ಯವಸ್ಥಾಪಕ ನಿರ್ದೇಶಕರಾದ ಶ್ರೀ ನಾರ್ಸಿ ಡಿ. ಕುಲರಿಯಾ ಮತ್ತು ನಾರ್ಸಿ ಸಮೂಹದ ನಿರ್ದೇಶಕರಾದ ಶ್ರೀ ಜಗದೀಶ್ ಕುಲರಿಯಾ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆ. ಲಿವ್ ಸ್ಪೇಸ್ ನ ಶ್ರೀ. ಗೋಪಾಲ್ ದ್ವಿವೇದಿ, ಎಫ್ಎಫ್ಎಸ್ಸಿಯ ಶ್ರೀ. ರಾಹುಲ್ ಮೆಹ್ತಾ, ಐಪಿಐಆರ್ಟಿಐ ಪಿಪಿಪಿಟಿ ವಿಭಾಗದ ಸೈಂಟಿಸ್ಟ್-ಜಿ ಉದಯ್ ಎನ್ ಮತ್ತು ಕೆನಡಿಯನ್ ವುಡ್ನ ಡಾ. ಜಿಮ್ಮಿ ಥಾಮಸ್ ಉಪಸ್ಥಿತರಿರುತ್ತಾರೆ.
ಸಮಾರಂಭದಲ್ಲಿ ಪ್ಯಾನೆಲ್ ಡಿಸ್ಕಷನ್ ಗಳು, ಉದ್ಯಮ ಪೂರೈಕೆದಾರರ ವಸ್ತು ಪ್ರದರ್ಶನ, ನೇರ ವಿಶ್ಲೇಷಣಾತ್ಮಕ ಪ್ರದರ್ಶನಗಳು ಮತ್ತು ಬಿಎಸ್ಸೆಯ ವಿಶ್ವ-ದರ್ಜೆಯ ಕಾರ್ಖಾನೆಯ ಗೈಡೆಡ್ ಟೂರ್ ಕಾರ್ಯಕ್ರಮಗಳು ನಡೆಯಲಿದೆ.
ಈ ಕಾರ್ಯಕ್ರಮದ ಮೂಲಕ ಬಿಎಸ್ಸೆಯಂತ್ರ ತಯಾರಿಕೆಯಲ್ಲಿ ನಾವೀನ್ಯತೆ ಮತ್ತು ಉತ್ಪಾದನಾ ಉತ್ಕೃಷ್ಟತೆಯನ್ನು ಪ್ರದರ್ಶಿಸುತ್ತದೆ, ಯಂತ್ರೋಪಕರಣ ಉತ್ಪಾದನಾ ಕ್ಷೇತ್ರದಲ್ಲಿ ಉತ್ಕೃಷ್ಟತೆ ಸಾಧಿಸುವ ನಿಟ್ಟಿನಲ್ಲಿ ಬಿಎಸ್ಸೆ ಕಂಪನಿ ಹೊಂದಿರುವ ಬದ್ಧತೆಯ ಪ್ರದರ್ಶನ ನಡೆಯಲಿದೆ. ಈ ಅತ್ಯಾಧುನಿಕ ಉತ್ಪನ್ನಗಳು ಮರಗೆಲಸದ ಕ್ಷೇತ್ರಕ್ಕೆ ಮಾತ್ರವೇ ಸೀಮಿತವಾಗಿರುವುದಿಲ್ಲ. ಜೊತೆಗೆ ವಿವಿಧ ಉದ್ಯಮಗಳಲ್ಲಿಯೂ ಬಳಸಲ್ಪಡುತ್ತದೆ.
ಬಿಎಸ್ಸೆಯ ಹೊಸ ಉತ್ಪನ್ನಗಳಾದ ‘ದಿ ಅಕ್ರಾನ್ 1300’ ಮತ್ತು ‘ಅಕ್ರಾನ್ 1400’ ಇನ್ ಸೈಡ್ 2024 ಕಾರ್ಯಕ್ರಮದ ವಿಶೇಷತೆಯಾಗಿದೆ. ಇವು ‘ಮೇಡ್ ಇನ್ ಇಂಡಿಯಾ’ ಉತ್ಪನ್ನಗಳಾಗಿದ್ದು, ದೇಶೀಯ ಮತ್ತು ಜಾಗತಿಕ ಮಾರುಕಟ್ಟೆಗಳಿಗೆ ಒದಗಿಸಲಾಗುತ್ತದೆ. ಹೊಸ ಆಕ್ರಾನ್ 1300 ಮತ್ತು ಅಕ್ರಾನ್ 1400 ಉತ್ಪನ್ನಗಳು ಅಟೋಮೇಷನ್ ಮತ್ತು ಹಲವಾರು ಅತ್ಯಾಧುನಿಕ ಫೀಚರ್ ಗಳನ್ನು ಒಳಗೊಂಡಿರುವ ಬೆಂಡಿಂಗ್ ಮೆಶಿನ್ ಗಳಾಗಿವೆ.
ಬಿಎಸ್ಸೆ ರೋವರ್-ಜೆ ಸಿಎನ್ಸಿ ಯಂತ್ರವೂ ಸಹ ಪ್ರದರ್ಶನದಲ್ಲಿರಲಿದೆ. ಭಾರತದ ಹೊಸ ಸಂಸತ್ ಕಟ್ಟಡದ ಒಳಾಂಗಣದಲ್ಲಿರುವ ಹಲವು ಸಂಕೀರ್ಣ ಕೆತ್ತನೆಗಳ ರಚನೆಯಲ್ಲಿ ಈ ಮೆಶಿನ್ ಮಹತ್ವದ ಪಾತ್ರ ವಹಿಸಿದೆ. ಈ ಯಂತ್ರಗಳನ್ನು ಬಳಸಿಕೊಂಡು ಬಾಗಿಲುಗಳು ಮತ್ತು ಪೀಠೋಪಕರಣಗಳ ಹೂವುಗಳು, ನವಿಲುಗಳು ಮತ್ತು ಇತರ ಚಿತ್ರಗಳನ್ನು ತುಂಬಾ ನಿಖರವಾಗಿ ಕೆತ್ತಲಾಗಿದೆ. ಈ ತಂತ್ರಜ್ಞಾನದ ಮೂಲಕ ಆಧುನಿಕ ಉತ್ಪಾದನಾ ತಂತ್ರಗಳ ಜೊತೆಗೆ ಸಾಂಪ್ರದಾಯಿಕ ಭಾರತೀಯ ಕಲಾತ್ಮಕತೆಯನ್ನು ಮಿಳಿತಗೊಳಿಸಿ ಡೀಟೇಲ್ ಆದ ಅಲಂಕಾರಿಕ ಅಂಶಗಳನ್ನು ರಚಿಸಲಾಗಿದೆ.
ಬಿಎಸ್ಸೆ ಕಂಪನಿಯು ಆಸಕ್ತರಿಗೆ ಅತ್ಯಾಧುನಿಕ ತಂತ್ರಜ್ಞಾನಗಳನ್ನು ವೀಕ್ಷಿಸಲು ಮತ್ತು ತಯಾರಿಕಾ ಕ್ಷೇತ್ರದ ಸಮಸ್ಯೆಗಳನ್ನು ಪರಿಹರಿಸುವ ಉತ್ತಮ ಉತ್ಪನ್ನಗಳನ್ನು ಗಮನಿಸಲು ಅವಕಾಶ ಒದಗಿಸುತ್ತದೆ. ಜೊತೆಗೆ ಕಾರ್ಯಕ್ರಮದಲ್ಲಿ ಭಾಗವಹಿಸುವವರು ಅತ್ಯುತ್ತಮ ಉತ್ಪಾದನಾ ಉತ್ಪನ್ನಗಳ ಮಾಡೆಲ್ ಗಳನ್ನು ವೀಕ್ಷಿಸಬಹುದು. ಒಳನೋಟವುಳ್ಳ ಚರ್ಚೆಗಳು, ಉದ್ಯಮದ ಪರಿಣತರ ನೇತೃತ್ವದ ಗೋಷ್ಠಿಗಳು ಮತ್ತು ಸಾಫ್ಟ್ ವೇರ್ ಆಧರಿತ ವಿರಣಾತ್ಮಕ ನೇರ ಪ್ರದರ್ಶನಗಳಲ್ಲಿ ಪಾಲ್ಗೊಳ್ಳಬಹುದು. ಜೊತೆಗೆ ಬೆಂಗಳೂರಿನಲ್ಲಿರುವ ಬಿಎಸ್ಸೆಯ ಅತ್ಯಾಧುನಿಕ ಘಟಕದ ಗೈಡೆಡ್ ಟೂರ್ ನಲ್ಲಿಯೂ ಭಾಗವಹಿಸಬಹುದು.
ಕಾರ್ಯಕ್ರಮದ ಕುರಿತು ಮಾತನಾಡಿದ ಬಿಎಸ್ಸೆ ಇಂಡಿಯಾದ ಸಿಇಓ ಸಯೀದ್ ಅಹ್ಮದ್ ಅವರು, “ಇನ್ಸೈಡ್ ಬಿಎಸ್ಸೆ 2024 ಕಾರ್ಯಕ್ರಮದಲ್ಲಿ ನಮ್ಮ ಅತ್ಯಾಧುನಿಕ ಉತ್ಪನ್ನಗಳ ಶ್ರೇಷ್ಠತೆಯನ್ನು ತೋರಿಸುವ ಹೊಸ ಉತ್ಪನ್ನಗಳನ್ನು ನೋಡಬಹುದು. ಭಾರತವು ಮ್ಯಾನುಫ್ಯಾಕ್ಚರಿಂಗ್ ಹಬ್ ಆಗುವ ಕಡೆಗೆ ದಾಪುಗಾಲಿಡುತ್ತಾ ಸಾಗುತ್ತಿದೆ. ಹಾಗಾಗಿ ಉತ್ತಮ ಗುಣಮಟ್ಟದ ಯಂತ್ರಗಳಿಗೆ ಬೇಡಿಕೆ ಹೆಚ್ಚಿದೆ ಮತ್ತು ಭಾರತವು ಪ್ರಮುಖ ಮಾರುಕಟ್ಟೆಗಳಲ್ಲಿ ಒಂದಾಗಿದೆ. ಬಿಎಸ್ಸೆಯ ಬೆಂಗಳೂರು ಘಟಕದಲ್ಲಿ ತಯಾರಾಗುವ 10,000 ಯಂತ್ರಗಳನ್ನು ರಫ್ತು ಮಾಡಿರುವ ಸಾಧನೆ ಮಾಡಿದ್ದೇವೆ. ಈ ಮೂಲಕ ವಿಕಸನ ಹೊಂದುತ್ತಿರುವ ಗ್ರಾಹಕರ ಅಗತ್ಯಗಳಿಗೆ ತಕ್ಕಂತೆ ಅವರು ಅಭಿವೃದ್ಧಿ ಹೊಂದಲು ಬೇಕಾಗುವ ಅತ್ಯುತ್ತಮ ಗುಣಮಟ್ಟದ ಉತ್ಪನ್ನ ಮತ್ತು ತಂತ್ರಜ್ಞಾನಗಳನ್ನು ಒದಗಿಸಲು ಬದ್ಧರಾಗಿದ್ದೇವೆ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ 5-ಆಕ್ಸಿಸ್ ಸಿಎನ್ಸಿ ಯಂತ್ರ, ನೆಸ್ಟಿಂಗ್, ಎಡ್ಜ್ ಬ್ಯಾಂಡಿಂಗ್, ಕಟಿಂಗ್ & ಸೈಜಿಂಗ್ ಮತ್ತು ಡ್ರಿಲ್ಲಿಂಗ್ ನಂತಹ ಹಲವು ಅತ್ಯಾಧುನಿಕ ತಂತ್ರಜ್ಞಾನಗಳನ್ನು ಪ್ರದರ್ಶಿಸಲಾಗುತ್ತದೆ. ಬಿಎಸ್ಸೆ ತನ್ನ ಗ್ರಾಹಕರ ಪ್ರತಿಯೊಂದು ಅಗತ್ಯವನ್ನು ಪೂರೈಸುವ ಮಲ್ಟಿ-ಮೆಟೀರಿಯಲ್ ಉತ್ಪನ್ನಗಳ ಕಂಪನಿಯಾಗಿ ಗುರುತಿಸಿಕೊಳ್ಳುವ ಗುರಿಯನ್ನು ಹೊಂದಿದೆ. ಕಂಪನಿಯು ಅಭಿವೃದ್ಧಿ ಹೊಂದುತ್ತಿರುವ ಏರೋಸ್ಪೇಸ್, ಎನರ್ಜಿ ಮತ್ತು ಇತರ ಹೈಟೆಕ್ ಕೈಗಾರಿಕೆ ಕ್ಷೇತ್ರಗಳಿಗೆ ಬೇಕಾಗಿರುವ ಸೈನೇಜ್, ಪ್ರೊಪಿಲೀನ್ ಶೀಟ್ಗಳು ಮತ್ತು ಇತ್ಯಾದಿಗಳನ್ನು ಉತ್ಪಾದಿಸುವ ಉತ್ಪನ್ನಗಳನ್ನು ಒದಗಿಸುತ್ತದೆ.
ಈ ಸಂದರ್ಭದಲ್ಲಿ ಪೀಠೋಪಕರಣ ಉದ್ಯಮ ಮಹತ್ತರ ಬೆಳವಣಿಗೆ ನಡೆಯಲಿದೆ. ಕಾರ್ಯಕ್ರಮದಲ್ಲಿ ಅಸೋಸಿಯೇಷನ್ ಫ್ ಫರ್ನಿಚರ್ ಮ್ಯಾನುಫ್ಯಾಕ್ಚರರ್ಸ್ & ಟ್ರೇಡರ್ಸ್ (ಎಎಫ್ಎಂಟಿ)ನ ಬೆಂಗಳೂರು ಶಾಖೆ ಉದ್ಘಾಟನೆಗೊಳ್ಳಲಿದೆ. ಎಎಫ್ಎಂಟಿ ಸದಸ್ಯರಾಗಿರುವ ಬಿಎಸ್ಸೆ ಕಂಪನಿಯು ಎಎಫ್ಎಂಟಿ ಜೊತೆ ಸಹಯೋಗ ಮಾಡಿಕೊಳ್ಳಲಿದ್ದು, ಪೀಠೋಪಕರಣ ಉದ್ಯಮದಲ್ಲಿನ ಬಿಐಎಸ್ ಮಾನದಂಡಗಳ ಬಗ್ಗೆ ಜಾಗೃತಿ ಮೂಡಿಸಲು ಮತ್ತು ಕರ್ನಾಟಕದಲ್ಲಿ ಪೀಠೋಪಕರಣ ತಯಾರಕರಿಗೆ ಬೆಂಬಲ ವ್ಯವಸ್ಥೆಯನ್ನು ಸ್ಥಾಪಿಸುವ ಸಲುವಾಗಿ ಕೆಲಸ ಮಾಡಲಿದೆ. ಈ ಯೋಜನೆಯು ಎಎಫ್ಎಂಟಿಯ ಭಾರತೀಯ ಪೀಠೋಪಕರಣ ಉದ್ಯಮದ ಗುಣಮಟ್ಟವನ್ನು ಹೆಚ್ಚಿಸುವ ಉದ್ದೇಶಕ್ಕೆ ಪೂರಕವಾಗಿದೆ. ಬಿಎಸ್ಸೆ 75ಕ್ಕೂ ಹೆಚ್ಚು ದೇಶಗಳಿಗೆ 10,000 ಯಂತ್ರಗಳನ್ನು ರಫ್ತು ಮಾಡುವ ಮಹತ್ವದ ಸಾಧನೆ ಮಾಡಿದೆ. ಈ ಗಣನೀಯ ಸಾಧನೆಯು ಕಂಪನಿಯ ನಾವೀನ್ಯತೆ, ಗುಣಮಟ್ಟ ಮತ್ತು ಕಂಪನಿ ಮೇಲೆ ಗ್ರಾಹಕರು ಹೊಂದಿರುವ ತೃಪ್ತಿಯನ್ನು ಸಾರುತ್ತದೆ. ಕಾರ್ಯಕ್ರಮದಲ್ಲಿ ಪಾಲ್ಗೊಳ್ಳುವವರು ಬಿಎಸ್ಸೆ ಇನ್ ಸೈಡ್ 2024ರಲ್ಲಿ ಬಿಎಸ್ಸೆ ಉತ್ಪನ್ನಗಳನ್ನು ನೋಡಬಹುದು. ಆಸಕ್ತಿ ಇರುವವರು ಕಂಪನಿಯ ವೆಬ್ಸೈಟ್ನಲ್ಲಿ ನೋಂದಣಿ https://biesse.com/ww/en/events/event-detail/?eventId=184 ಮೂಲಕ ಹೆಸರು ನೋಂದಾಯಿಸಿಕೊಳ್ಳಬಹುದು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.