(www.vknews.in) : ಮಂಗಳೂರು ನಗರದ ಪೋಲಿಸ್ ಕಮಿಷನರ್ ವ್ಯಾಪ್ತಿಗೊಳಪಟ್ಚ 22 ಠಾಣೆಗಳ ಪೈಕಿ ಸುಮಾರು ಏಳೆಂಟು ಪೋಲಿಸ್ ಠಾಣೆ ಹಾಗೂ CCB ಯ ಅಧಿಕಾರಿ-ಸಿಬ್ಬಂದಿಗಳನ್ನು ಬಿಟ್ಟರೆ ಬಹುತೇಕ ಠಾಣೆಗಳಲ್ಲಿ ಬರೇ ಅದಕ್ಷ ಅಧಿಕಾರಿಗಳೇ ಕಾಲ ಕಳೆಯುತ್ತಿದ್ದಾರೆ. ಅಕ್ರಮ ಜುಗಾರಿಕೋರರಿಂದ, ಅಕ್ರಮ ಮಸಾಜ್ ಪಾರ್ಲರ್ ಗಳಿಂದ, ಹವಾಲಕೋರರಿಂದ, ಅಕ್ರಮ ಮಧ್ಯ ವ್ಯಾಪಾರಿಗಳಿಂದ, ಕಳ್ಳಸಾಗಣೆದಾರರಿಂದ, ಭೂಗತ ಪಾತಕಿಗಳಿಂದ, ರಿಯಲ್ ಎಸ್ಟೇಟ್ ಮಾಲಕರಿಂದ, ಅಕ್ರಮ ದಾಸ್ತಾನುದಾರರಿಂದ ಮಾಮೂಲು ಪಡೆದು ಸಾಕಷ್ಟು ಅಕ್ರಮ ಸಂಪಾದನೆ ಮಾಡಿಕೊಂಡು ಕಳೆದ ಹಲವಾರು ವರ್ಷಗಳಿಂದ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಲ್ಲೇ ಬೀಡು ಬಿಟ್ಟಿರುವ ಅದಕ್ಷ ಪೋಲಿಸ್ ಅಧಿಕಾರಿಗಳು ಸಾಕಷ್ಟು ಅಕ್ರಮ ಸಂಪಾದನೆ ಮಾಡಿಕೊಂಡು ಮೂಗಿನ ತನಕ ಕುಡಿದು ಕುಪ್ಪಳಿಸುವುದಲ್ಲದೆ ಕೊಲೆಯಾಗಲೀ, ದೊಂಬಿಯಾಗಲೀ, ಲೂಟಿಯಾಗಲೀ, ದರೋಡೆ ಯಾಗಲೀ, ಸ್ತ್ರೀಯರ ಮಾನ ಭಂಗವಾಗಲೀ, ದುರ್ಬಲರ ಮೇಲೆ ದೌಜನ್ಯವಾಗಲೀ ಏನೇ ಆದರೂ ತಮಗಿದು ದೊಡ್ಡ ಸಂಗತಿಯೇ ಅಲ್ಲನೆಂಬಂತೆ ದಡ್ಡರಂತೆ ಒದ್ದಾಡುತ್ತಿರುವುದನ್ನು ಕಾಣುತ್ತಿದ್ದೇವೆ.
ಅಪರಾಧ ಪತ್ತೆ ಹಚ್ಚಲು ಸಾಧ್ಯವಾಗದೆ CCB ಯವರಿಂದ ಪತ್ತೆ ಮಾಡಿಸುವುದು ಒಂದು ವಾಡಿಕೆ ಯಾಗಿದೆ. ಹಲವು ವರ್ಷಗಳ ಹಿಂದೆ ಲವಕುಮಾರ್, ಸಿ.ಎಸ್. ರುದ್ರಯ್ಯ, ಸಿ.ಕೆ. ಶಶಿಧರ್, ಪಂಕಜ್ ಕುಮಾರ್ ಠಾಕೂರ್, ಪ್ರಶಾಂತ್ ಕುಮಾರ್ ಠಾಕೂರ್, ಸಾಯಿಕುಮಾರ್ ಪೂಂಜಾ, ಎಂ.ಆರ್. ಪೂಜಾರ, ಮುರುಗನ್, ಎಂ.ಕೆ ಗಣಪತಿ, ಪಿ.ಸಿ ಗಣಪತಿ, ವಿಶ್ವನಾಥ್ ಪಂಡಿತ್, ಪಿ.ಎಂ. ಪೆಮ್ಮಯ್ಯ, ಉದಯ ನಾಯಕ್, ವಿನಯ್ ಗಾಂವಕರ್, ಕೆ. ಮೂತಿ೯, ದಿನಕರ್ ಶೆಟ್ಟಿ, ಜಯಂತ್ ಶೆಟ್ಟಿ, ಮಂಜುನಾಥ್ ಶೆಟ್ಟಿ, ಅಶೋಕನ್, ತಿಲಕ್ ಚಂದ್ರ, ಶಾಂತರಾಂ ಕುಂದರ್, ಟಿ.ಆರ್. ಜಗನ್ನಾಥ್, ದಿನಕರ ಶೆಟ್ಟಿ, ಸುನಿಲ್ ನಾಯಕ್, ಶೃತಿ, ವೆಲೆಂಟೀನ್ ಡಿಸೋಜ, ಪ್ರಭುದೇವ್ ಮಾಣೆ, ಭಾರತಿ, ನಾಗಭೂಷಣ್ ಹಾಗೂ ಕಮಿಷನರ್ ಗಳಾದ ಸಂದೀಪ್ ಪಾಟೀಲ್ ಹಾಗೂ ಚಂದ್ರ ಶೇಖರ್ ಮುಂತಾದ ಪೋಲಿಸ್ ಅಧಿಕಾರಿಗಳು ದ.ಕ. ಜಿಲ್ಲೆಯನ್ನೇ ನಡುಗಿಸಿದ್ದರು.
ಆ ಪೊಲೀಸ್ ಅಧಿಕಾರಿಗಳನ್ನು ಕಂಡಾ ಕ್ಷಣ ಜನ ಬೆಚ್ಚಿ ಬೀಳುತ್ತಿದ್ದರು. ಅಂದು ಅವರು ಪೋಲಿಸ್ ಇಲಾಖೆಗೂ ಗೌರವ ತಂದಿದ್ದರು. ಇಂದಿನ ಪೋಲಿಸ್ ಅಧಿಕಾರಿಗಳನ್ನು ಕಂಡರೆ ಮಕ್ಕಳು ಕೂಡ ಹೆದರುವುದಿಲ್ಲ. ಒಳ್ಳೆಯ ಮೊತ್ತ ಕೊಟ್ಟರೆ ಎಂತಹ ಅಪರಾಧಿಗಳನ್ನು ಮುಚ್ಚಿ ಹಾಕುತ್ತಾರೆ. ಅವರಿಗೆ ಹೆಸರು ಬೇಕಾಗಿಲ್ಲ. ಯಾರು ಸತ್ತರು ಬದುಕಿದರೂ ಅವರಿಗೆ ಹಣ ಆದರೆ ಸಾಕು. ಇದು ಇಂದಿನ ಪೋಲಿಸ್ ಅಧಿಕಾರಿಗಳ ಧ್ಯೇಯ. ಹೀಗಾಗಿ ಮಂಗಳೂರಲ್ಲಿ ಕೆಲವೊಮ್ಮೆ ಅಪರಾಧಗಳು ದಿನೇ ದಿನೇ ಹೆಚ್ಚುತ್ತಿವೆ. ಅಪರಾಧಗಳು ಎಲ್ಲಿಯವರೆಗೆ ಹೆಚ್ಚಿತೆಂದರೆ ಪಾಂಡೇಶ್ವರದ ಹಿಂದಿನ ಪೋಲಿಸ್ ಅಧಿಕಾರಿ ಹರಿರಾಂ ಭಂಡಾರಿ ಹಾಗೂ ಕಂಕನಾಡಿ ಗ್ರಾಮಾಂತರ ಠಾಣೆಯ ಹಿಂದಿನ ಎಸ್. ಐ.ಯೊಬ್ಬರಿಗೆ ಸಾರ್ವಜನಿಕರು ಥಳಿಸಿದ್ದು ಮಾತ್ರವಲ್ಲ ಅಂದಿನ ಉರ್ವ ಎಸ್. ಐ. ಕೆ. ಎನ್. ಹಾಸಟ್ಟಿ ಎಂಬವರನ್ನು ಹಾಡು ಹಗಲೇ ಇರಿದು ಕೊಲೆ ಮಾಡಿದ್ದಾನೆಂದರೆ ಪೋಲಿಸ್ ಇಲಾಖೆಗೆ ಇದಕ್ಕಿಂತ ದೊಡ್ಡ ಅವಮಾನ ಬೇರೇನು ಬೇಕಾಗಿಲ್ಲ.
ಸುಮಾರು 22 ರಿಂದ 24 ಜನ ಇನ್ಸ್ಪೆಕ್ಟರ್ ಗಳು, 60 ರಿಂದ 80 ಸಬ್ ಇನ್ಸ್ಪೆಕ್ಟರ್ ಗಳ ಪೈಕಿ ದಕ್ಷ ಹಾಗೂ ಭ್ರಷ್ಟ ಅಧಿಕಾರಿಗಳು ಯಾರೆಂದು ಪೋಲಿಸ್ ಕಮಿಷನರ್ ಶ್ರೀ ಅನುಪಂ ಅಗರ್ವಾಲ್ ಈಗಾಗಲೇ ಗುರುತಿಸಿಕೊಂಡು ಕಂಕನಾಡಿಯ ಹಿಂದಿನ ಪೋಲಿಸ್ ಅಧಿಕಾರಿಯನ್ನು ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಅಮಾನತು ಗೊಳಿಸಿದ್ದು ಅತ್ಯಂತ ಸಮಂಜಸವೆನ್ನಬಹುದು. ಆದ್ದರಿಂದ ಮಂಗಳೂರು ನಗರದ ಅತ್ಯಂತ ದಕ್ಷ ಪೋಲಿಸ್ ಕಮಿಷನರ್ ಎಂದು ಖ್ಯಾತಿವೆತ್ತ ಶ್ರೀ ಅನುಪಂ ಅಗರ್ವಾಲ್ ಭ್ರಷ್ಟ ಅಧಿಕಾರಿಗಳನ್ನು ಗುರುತಿಸಿ ಮಂಗಳೂರು ಕಮಿಷನರೇಟ್ ವ್ಯಾಪ್ತಿಯಿಂದ ಕತ್ತು ಹಿಡಿದು ಹೊರ ದಬ್ಬಲು ಸಿದ್ಧರಾಗಬೇಕೆಂದು ಮಂಗಳೂರು ನಗರದ ಶಾಂತಿ ಪ್ರಿಯ ಜನತೆ ಸರಕಾರವನ್ನು ಅಗ್ರಹಿಸಿದ್ದಾರೆ.
ಆದ್ದರಿಂದ ಮಾಮೂಲಿನ ಅಮಲಿನಿಂದ ಮೈ ಮೆರೆಯುತ್ತಿರುವ ಕೆಲ ಪೋಲಿಸ್ ಅಧಿಕಾರಿಗಳು ಮಂಗಳೂರು ನಗರ ವ್ಯಾಪ್ತಿಯಲ್ಲಿ ಸಂಗ್ರಹಿಸಿರುವ ಕೋಟ್ಯಾಂತರ ರೂ.ಗಳ ಅಕ್ರಮ ಸಂಪತ್ತನ್ನು ಮುಟ್ಟುಗೋಲು ಹಾಕಲು ಅದಾಯ ತೆರಿಗೆ ಇಲಾಖೆಯವರು ಸನ್ನದ್ಧ ರಾಗಬೇಕು. ಯಾವ್ಯಾವ ಅಧಿಕಾರಿಗಳು ಎಲ್ಲೆಲ್ಲಿ ಎಷ್ಟೆಷ್ಟು ಲಕ್ಷ- ಕೋಟಿಗಳ ಆಸ್ತಿ -ಪಾಸ್ತಿ ಹೊಂದಿದ್ದಾರೆಂಬುದನ್ನು ಮುಂದೆ ಬೆಳಕಿಗೆ ತರಲಿದ್ದೇವೆ.
— ಶೇಖ್-ಪುತ್ತೂರು
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.