ಪ್ಯಾರಿಸ್ (www.vknews.in) : ಒಲಿಂಪಿಕ್ಸ್ನಲ್ಲಿ ಭಾರತಕ್ಕಾಗಿ ಪದಕ ಗೆದ್ದ ಸ್ಟಾರ್ ಮಹಿಳಾ ಶೂಟರ್ಗಳಾದ ಮನು ಭಾಕರ್ ಮತ್ತು ಸ್ವಪ್ನಿಲ್ ಕುಸಾಲೆ ಸೇರಿ ಅನೇಕ ಭಾರತೀಯ ಕ್ರೀಡಾಪಟುಗಳು ಇಂಡಿಯಾ ಹೌಸ್ ನಲ್ಲಿ ಭಾರತೀಯತೆಯನ್ನು ಸಂಭ್ರಮಿಸಿದರು. ಈ ಎಲ್ಲರನ್ನೂ ರಿಲಯನ್ಸ್ ಫೌಂಡೇಷನ್ ಅಧ್ಯಕ್ಷೆ ಮತ್ತು ಐಒಸಿ ಸದಸ್ಯೆಯೂ ಆದ ನೀತಾ ಅಂಬಾನಿ ಅವರು ಸ್ವಾಗತಿಸಿ, ಪ್ರೋತ್ಸಾಹಿಸಿದರು.
ಇಂಡಿಯಾ ಹೌಸ್ ಗೆ ಬಂದ ಆಟಗಾರರಲ್ಲಿ ಬ್ಯಾಡ್ಮಿಂಟನ್ ಆಟಗಾರರಾದ ಲಕ್ಷ್ಯ ಸೇನ್, ವಿಶ್ವ ಚಾಂಪಿಯನ್ ಬಾಕ್ಸರ್ ಲೊವ್ಲಿನಾ ಬೊರ್ಗೊಹೈನ್, ಸ್ಕೀಟ್ ಶೂಟರ್ ಮಹೇಶ್ವರಿ ಚೌಹಾಣ್, ಅನಂತ್ಜಿತ್ ಸಿಂಗ್ ನರುಕಾ, ಶೂಟರ್ಗಳಾದ ಐಶ್ವರ್ಯ ಪ್ರತಾಪ್ ಸಿಂಗ್ ತೋಮರ್, ಅಂಜುಮ್ ಮೌದ್ಗಿಲ್, ಸಿಫ್ಟ್ ಕೌರ್ ಸಮ್ರಾ, ಇಶಾ ಸಿಂಗ್, ರೈಜಾ ಭಾನ್ ಧಿಲ್ಲಾನ್, ಅನಿಶ್ವೆ ಭಾನ್ ಧಿಲ್ಲಾನ್, ಬಾಕ್ಸರ್ ನಿಶಾಂತ್ ದೇವ್, ಅಥ್ಲೆಟಿಕ್ಸ್ ತಂಡದ ಅಕ್ಷದೀಪ್ ಸಿಂಗ್, ಪರಮ್ಜಿತ್ ಸಿಂಗ್ ಬಿಶ್ತ್, ವಿಕಾಸ್ ಸಿಂಗ್, ತಜಿಂದರ್ ಪಾಲ್ ಸಿಂಗ್ ತೂರ್, ಅಂಕಿತಾ ಧ್ಯಾನಿ, ಜೆಸ್ವಿನ್ ಆಲ್ಡ್ರಿನ್ ಮತ್ತು ಪಾರುಲ್ ಚೌಧರಿ ಮತ್ತಿತರರು ಇದ್ದರು.
ಮನು ಅವರನ್ನು ಸ್ಫೂರ್ತಿ ಎಂದು ಬಣ್ಣಿಸಿದ ನೀತಾ ಅಂಬಾನಿ, “ಹರಿಯಾಣದ ಹಳ್ಳಿಯೊಂದರ 22 ವರ್ಷದ ಯುವತಿ ಕಳೆದ ವಾರ ಪ್ಯಾರಿಸ್ನಲ್ಲಿ ಇತಿಹಾಸವನ್ನು ಸೃಷ್ಟಿಸಿದರು ಮತ್ತು ತನ್ನ ಕನಸುಗಳು, ಉತ್ಸಾಹ ಮತ್ತು ಕಠಿಣ ಪರಿಶ್ರಮದ ಶಕ್ತಿಯನ್ನು ಜಗತ್ತಿಗೆ ತೋರಿಸಿದರು! ಆಕೆ ಎರಡು ಪದಕವನ್ನು ಗೆದ್ದಿದ್ದಾರೆ. ಅದೇ ಒಲಿಂಪಿಕ್ಸ್ನಲ್ಲಿ ಪ್ರತಿ ಭಾರತೀಯರೂ ನಿಮ್ಮ ಸಾಧನೆಗಳಿಂದ ಸ್ಫೂರ್ತಿ ಪಡೆದಿದ್ದಾರೆ ಮತ್ತು ಭಾರತದ ಪ್ರತಿ ಹುಡುಗಿ ಸಬಲಳಾಗಿದ್ದಾಳೆ,” ಎಂದಿದ್ದಾರೆ.
ಇನ್ನೂ ಮುಂದುವರಿದು, “ಪದಕಗಳು ಮತ್ತು ದಾಖಲೆಗಳ ಆಚೆಗೆ, ಕ್ರೀಡೆಯು ಮಾನವೀಯ ಚೈತನ್ಯ, ಕಠಿಣ ಪರಿಶ್ರಮ, ಪ್ರತಿಕೂಲತೆಯನ್ನು ಎದುರಿಸುವ ನಮ್ಮ ಸಾಮರ್ಥ್ಯ ಎಂದಿಗೂ ಬಿಟ್ಟುಕೊಡುವುದಿಲ್ಲ! ನಮ್ಮ ಪ್ರತಿ ಕ್ರೀಡಾಪಟು ಪ್ಯಾರಿಸ್ನಲ್ಲಿ ಇದೇ ಮನೋಭಾವವನ್ನು ತೋರಿಸಿದ್ದಾರೆ. ಇಂದು ನಾವು ಟೀಮ್ ಇಂಡಿಯಾದ ಚಾಂಪಿಯನ್ಗಳಾದ ನಿಮ್ಮೆಲ್ಲರನ್ನೂ ಸಂಭ್ರಮಿಸುತ್ತಿದ್ದೇವೆ!” ಎಂದು ಹೇಳಿದ್ದಾರೆ. ಸ್ವಾಗತ ಕಾರ್ಯಕ್ರಮದ ಹೊರತಾಗಿ ಕ್ರೀಡಾಪಟುಗಳು ಇಂಡಿಯಾ ಹೌಸ್ನಲ್ಲಿ ಭಾರತೀಯ ಆಹಾರವನ್ನೂ ಸವಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.