(www.vknews. in) ; ಶಿಕ್ಷಕರ ನಿಯಮ ಬಾಹಿರವಾದ ಅಂತರ್ಜಿಲ್ಲಾ ನಿಯೋಜನೆಯಿಂದ ಕಡ್ಡಾಯ ಮಕ್ಕಳ ಶಿಕ್ಷಣ ಹಕ್ಕು ಕಾಯ್ದೆಯ ಉಲ್ಲಂಘನೆ
ನಿಯೋಜನೆ ರದ್ದುಗೊಳಿಸುವಂತೆ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ)ಯಿಂದ ಆಯುಕ್ತರಿಗೆ ಮನವಿ
ರಾಜ್ಯದ ಹಲವು ಜಿಲ್ಲೆಗಳ ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ) ಪದಾಧಿಕಾರಿಗಳು ಮತ್ತು ರಾಜ್ಯ ಎಲ್ ಕೆ ಜಿ-ಯು ಕೆ ಜಿ ಸಂಘಟನೆಯ ಪಧಾಧಿಕಾರಿಗಳು ಮಂಗಳವಾರದಂದು ಪ್ರಾಥಮಿಕ ಶಿಕ್ಷಣ ಇಲಾಖೆಯ ನಿರ್ದೇಶಕರು ಆಯುಕ್ತರ ಕಚೇರಿ ಬೆಂಗಳೂರು ಅವರನ್ನು ಭೇಟಿ ಮಾಡಿ ಪ್ರಸ್ತುತ ನಿಯಮ ಬಾಹಿರ ಹಾಗೂ ಇಲಾಖಾ ಷರತ್ತುಗಳ ಉಲ್ಲಂಘನೆ ಮತ್ತು 2016ರ ನೇಮಕಾತಿ ನಿಯಮಗಳನ್ನು ಗಾಳಿಗೆ ತೂರಿ ಅಂತರ್ ಜಿಲ್ಲಾ ನಿಯೋಜನೆ ನಡೆಯುತ್ತಿರುವ ಬಗ್ಗೆ, ಹಾಗೂ ಅದರಿಂದ ಮಕ್ಕಳ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯ ಉಲ್ಲಂಘನೆ, ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡುವಲ್ಲಿ ಹಾಗುವ ತೊಂದರೆಗಳ ಬಗ್ಗೆ, ಅದೇ ರೀತಿ ಶಾಲೆ ಪ್ರಾರಂಭವಾಗಿ ಎರಡು ತಿಂಗಳ ನಂತರ ನಡೆಯುತ್ತಿರುವ ವರ್ಗಾವಣೆಯಿಂದ ಮಕ್ಕಳ ಶಿಕ್ಷಣಕ್ಕಾಗುವ ಅಡಚಣೆ,ಹಾಗೂ ಈ ವರ್ಗಾವಣೆ ಪ್ರಕ್ರಿಯೆಯು ಶಾಲಾ ರಜಾ ಸಮಯದಲ್ಲಿ ನಡೆಸಿ ,ಶಾಲಾ ಪ್ರಾರಂಭದಿಂದಲೇ ಶಿಕ್ಷಕರು ಹಾಗೂ ಮಕ್ಕಳ ಭಾಂಧವ್ಯ ಬೆಳೆಸಲು ಅನುಕೂಲ ಆಗುವ ರೀತಿಯಲ್ಲಿ ವರ್ಗಾವಣೆ ಪ್ರಕ್ರಿಯೆ ನಡೆಸುವ ಬಗ್ಗೆ, ಅನಧಿಕೃತವಾಗಿ ಸರಕಾರಿ ಶಾಲೆಯನ್ನು ಮುಚ್ಚಿದ್ದ ಶಿಕ್ಷಕರ ವಿರುದ್ದವಾಗಿ ಕ್ರಮ ಕೈ ಗೊಳ್ಳಲು ಮನವಿಯನ್ನು ಕೊಡಲಾಯಿತು.
ನಂತರ ಸಮಗ್ರ ಶಿಕ್ಷಣ ಇಲಾಖೆಯ ನಿರ್ದೇಶಕರನ್ನು(ಗುಣಮಟ್ಟ) ಭೇಟಿ ಮಾಡಿ ಸರಕಾರವು ಈ ಶೈಕ್ಷಣಿಕ ವರ್ಷದಲ್ಲಿ ಎಸ್ಡಿಎಂಸಿ ಯವರು 2016 ರಿಂದ ಪ್ರಾರಂಭ ಮಾಡಿರುವ ಎಲ್ ಕೆ ಜಿ ಯು ಕೆ ಜಿ ತರಗತಿಗಳಲ್ಲಿ ಕೇವಲ 914 ಶಾಲೆಗಳ ಪೂರ್ವ ಪ್ರಾಥಮಿಕ ತರಗತಿಗಳಿಗೆ ಇಲಾಖಾ ಅನುದಾನ ಕೊಟ್ಟಿದ್ದು, ರಾಜ್ಯದಲ್ಲಿ ಆರ್ ಟಿ ಇ ಪ್ರಕಾರ ಎಸ್ಡಿಎಂಸಿ ಯವರು ಪ್ರಾರಂಭಿಸಿದ್ದ ಹಲವು ಶಾಲೆಗಳನ್ನು ಈ ಪ್ರಕ್ರಿಯೆ ಯಿಂದ ಕೈ ಬಿಟ್ಟಿರುವ ಕಾರಣ ಅಲ್ಲಿರುವ ಮಕ್ಕಳು ಸರಕಾರದ ಸೌಲಭ್ಯ ಗಳಿಂದ ವಂಚಿತರಾಗಿರುವ ಬಗ್ಗೆ ಅವರ ಗಮನಕ್ಕೆ ತರಲಾಯಿತು. ಎಸ್ಡಿಎಂಸಿ ಯವರು ತೆರೆದಿರುವ ಪೂರ್ವ ಪ್ರಾಥಮಿಕ ತರಗತಿಯ ಶಿಕ್ಷಕರ ಆತಂಕವನ್ನು ದೂರ ಮಾಡಿ ,ಅವರಿಗೆ ಸರ್ಕಾರದಿಂದಲೇ ಗೌರವಧನ ಸಿಗುವ ರೀತಿಯಲ್ಲಿ ವ್ಯವಸ್ಥೆಯನ್ನು ಮಾಡುವ ಬಗ್ಗೆ ಕೂಡ ಚರ್ಚಿಸಲಾಯಿತು.
ಪ್ರೌಢಶಾಲೆಗಳಲ್ಲಿ ಆದೇಶವನ್ನು ಉಲ್ಲಂಘಿಸಿ ಶಾಸಕರ ಆಪ್ತರನ್ನು ಅಧ್ಯಕ್ಷರನ್ನು ಮಾಡುವ ಬಗ್ಗೆ, ಎಸ್ಡಿಎಂಸಿ ಸದಸ್ಯರಿಗೆ ಪೂರ್ಣ ರೀತಿಯಲ್ಲಿ ತರಬೇತಿಗಳನ್ನು ಆಯೋಜಿಸುವ ಬಗ್ಗೆ ಚರ್ಚೆಯನ್ನು ನಡೆಸುವುದರೊಂದಿಗೆ ,ಕೆ ಪಿ ಎಸ್ ಶಾಲೆಗಳಲ್ಲಿ ಎಸ್ಡಿಎಂಸಿ ರಚನೆಯಲ್ಲಿ ತಾರತಮ್ಯ ಮಾಡುವ ಬಗ್ಗೆ ಹಾಗೂ ಎಸ್ಡಿಎಂಸಿ ಸದಸ್ಯರ ನಿಯಮ ಪರವಾದ ಅಧಿಕಾರಗಳಲ್ಲಿ ಪ್ರಾಂಶುಪಾಲರು ಕೈಯಾಡಿಸುವ ಬಗ್ಗೆ ಉದಾಹರಣೆ ಸಹಿತ ವಿವರಿಸಲಾಯಿತು.
ಈ ನಿಯೋಗದಲ್ಲಿ ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ)ಯ ಮೊಯ್ದಿನ್ ಕುಟ್ಟಿ, ಸಾಜಸ್ ಕೆ ಜಿ, ಉಸ್ಮಾನ್ ನೆಕ್ಕಿಲು, ಆಂಜನೇಯ ಶಿವಕ್ಕಳ, ಸನ್ನೇಗೌಡ್ರು,ವಿನೀಶ್ ಕುಮಾರ್, ಅಶ್ರಫ್ ಕಲ್ಲೇರಿ,ಜಿ ಎಂ ಮಹಮ್ಮದ್,ಉಮ್ಮರ್ ಟೆಕ್ನಿಕ್, ಶರಣ ಬಸಪ್ಪ ಕೊಪ್ಪಳ ,ಸಲೀಮ್ ಮಾಯಾಂಗಳ, ಕಾಸಿಂ ಕರಾಯ, ಶಿವಲಿಂಗಪ್ಪ ಹೊನ್ನಾಳಿ, ಲತೀಫ್ ಇಳಂತಿಲ,ನಝೀರ್ ಬಾಜಾರು,ಕೃಷ್ಣ ರಾಜ ಜೈನ್, ಇಸ್ಮಾಯಿಲ್ ಮಾಣಿಕ್ಯ,ಹೆನ್ರಿ ದಾಂಡೇಲಿ,ರೂಪ ಹೊನ್ನಾಳಿ,ಅಶ್ವಿನಿ , ಶಕೀರ ಸಾಗರ,ನಗೀನ ಶಿವಮೊಗ್ಗ,ನವಾಜ್ ಪಳ್ಳತ್ತಾರು,ರಾಮಕೃಷ್ಣ ಹೊಳ್ಳಾರು, ನವಾಫ್ ಸಜಿಪ,ಸುಮತಿ ಹಾಸನ, ಆಸಿಫ್ ಬೆಂಗಳೂರು,ಬಸವರಾಜ್ ಮಲೆಬೆನ್ನೂರು ಉಪಸ್ಥಿತರಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.