(www.vknews. in) ; ಕರ್ನಾಟಕ ರಾಜ್ಯ ಎಸ್ಡಿಎಂಸಿ ಸಮನ್ವಯ ಕೇಂದ್ರ ವೇದಿಕೆ(ರಿ)ಯು ನೋಂದಣಿಯನ್ನು ಮಾಡಿಕೊಂಡು ಎಸ್ಡಿಎಂಸಿ ಹಾಗೂ ಸರಕಾರಿ ಶಾಲೆಯ ಪರವಾಗಿ ದ್ವನಿ ಎತ್ತುವ ಅಧಿಕೃತ ಸಂಘಟನೆಯಾಗಿ ರೂಪು ಗೊಂಡಿದೆ.
ಈ ಸಂಘಟನೆಯಲ್ಲಿರುವ ಪದಾಧಿಕಾರಿಗಳು ಹಲವು ವರ್ಷದಿಂದ ಸರಕಾರಿ ಶಾಲೆಯ ಸಬಲಿಕರಣಕ್ಕಾಗಿ ತಮ್ಮ ಸಮಯವನ್ನು ಮೀಸಲಿಟ್ಟು ಅಹರ್ನಿಶಿ ದುಡಿದಿದ್ದು,ಅವರಿಗೆ ಯಾವುದೇ ರೀತಿಯ ಅಧಿಕೃತವಾದ ಮಾನ್ಯತೆಯು ಇರಲಿಲ್ಲ.
ಇದನ್ನು ಮನಗಂಡು ಸಂಘಟನೆಯನ್ನು ನೋಂದಣಿ ಮಾಡಿಕೊಂಡಿದ್ದು ಇದಕ್ಕೆ ಪೂರಕವಾಗಿ ರಾಜ್ಯ ಮಟ್ಟದಲ್ಲಿ ಸಂಘಟನೆಯನ್ನು ಬಲಪಡಿಸುವ ಉದ್ದೇಶದಿಂದ ಸಂಘಟನೆಯ ನಿರ್ದೇಶಕರಿಗೆ ಗುರುತಿನ ಚೀಟಿ ವಿತರಣೆಯನ್ನು ರಾಜ್ಯ ಯೋಜನಾ ನಿರ್ದೇಶಕರ ಕಚೇರಿಯ ಮುಂಭಾಗದಲ್ಲಿ ನಡೆಸಲಾಯಿತು.
ರಾಜ್ಯದ ಹಲವು ಜಿಲ್ಲೆಗಳಲ್ಲಿ ಸಕ್ರಿಯವಾಗಿ ಎಸ್ಡಿಎಂಸಿ ಸಬಲೀಕರಣ ಹಾಗೂ ಗುಣಮಟ್ಟದ ಶಿಕ್ಷಣಕ್ಕಾಗಿ ಸೇವೆ ಸಲ್ಲಿಸುತ್ತಿದ್ದ ಹಿರಿಯ ವ್ಯಕ್ತಿಗಳನ್ನು ಗುರುತಿಸುವ ಕಾರ್ಯಕ್ರಮ ಹಾಗೂ ಅವರಿಗೆ ಮಾನ್ಯತೆಯ ಗುರುತಿನ ಚೀಟಿಯನ್ನು ಹಂಚುವ ಕಾರ್ಯಕ್ರಮ ಎಲ್ಲಾ ಜಿಲ್ಲೆಗಳಲ್ಲಿ ನಡೆಸುವ ಬಗ್ಗೆ ತೀರ್ಮಾನಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.