(www.vknews.in) ; ಕೇರಳದ ಮಾಜಿ ಪೌರಾಡಳಿತ ಸಚಿವರು, ಹಿರಿಯ ಮುಸ್ಲಿಂ ಲೀಗ್ ಮುಂದಾಳು ಆದ ಸಮರ್ಥ ನೇತಾರ ಕುಟ್ಚಿ ಅಹ್ಮದ್ ಕುಟ್ಟಿ ಅವರು ಇದೀಗ ನಿಧನರಾಗಿದ್ದು , ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಲೀಗ್ ಸಮಿತಿಯು ಸಂತಾಪ ಸೂಚಿಸಿದೆ.
ಕೆಲ ಕಾಲದಿಂದ ಅನಾರೋಗ್ಯದಿಂದ ಚಿಕಿತ್ಸೆ ಪಡೆಯುತ್ತಿದ್ದ ಕುಟ್ಟಿ ಅಹ್ಮದ್ ಕುಟ್ಟಿ ಅವರು ಯಾವುದೇ ಸದ್ದಿಲ್ಲದೆ ಸಮಾಜಕ್ಕೆ ಮತ್ತು ನಾಡಿಗೆ ಹಲವಾರು ಸೇವೆಗಳನ್ನು ಮಾಡಿದ ನಿಸ್ವಾರ್ಥ ಸಮಾಜ ಸೇವಕರು ಗೌರವಾನ್ವಿತ ರಾಜಕಾರಣಿಯು ಆಗಿದ್ದರು. ಅವರು ಸತ್ಯ ರಾಜಕಾರಣಿಕ್ಕೆ ತುಂಬಲಾರದ ನಷ್ಟವೆಂದು ಜಿಲ್ಲಾ ಮುಸ್ಲಿಂ ಲೀಗ್ ಬಣ್ಣಿಸಿದೆ.
ಮುಸ್ಲಿಂ ಲೀಗ್ ಹಿರಿಯ ಮುಖಂಡರಾದ ಅಡ್ವ.ಸುಲೈಮಾನ್ , ಎ.ಎಸ್.ಇ ಕರೀಮ್ ಕಡಬ, ದಕ್ಷಿಣ ಕನ್ನಡ ಜಿಲ್ಲಾ ಮುಸ್ಲಿಂ ಲೀಗ್ ಅಧ್ಯಕ್ಷರಾದ ಅಬ್ದುರ್ರಹ್ಮಾನ್ , ಪ್ರಧಾನ ಕಾರ್ಯದರ್ಶಿ ನೌಶಾದ್ ಮಲಾರ್ , ಕೋಶಾಧಿಕಾರಿ ರಿಯಾಝ್ ಹರೇಕಳ , ಬಾಫಖಿ ತಂಙಳ್ ಫೌಂಡೇಶನ್ ಕರ್ನಾಟಕ ಅಧ್ಯಕ್ಷರಾದ ಡಾ.ಶೇಖ್ ಬಾವ ಮಂಗಳೂರು ತೋಡರ್ ಮುಸ್ಲಿಂ ಲೀಗ್ ಗ್ರಾಮ ಪಂಚಾಯತ್ ಸದಸ್ಯ ಎಂ ಎ ಆಶ್ರಫ್ , ಮುಸ್ಲಿಂ ಯೂತ್ ಲೀಗ್ ಮುಖಂಡರಾದ ಹನೀಫ್ ಕುಂಜತ್ತೂರು, ಅನೀಸ್ ತೋಡಾರ್ ,ನಿಸಾರ್ ಬೆಂಗರೆ , ಸಿದ್ಧೀಖ್ ಕೊರಂದೂರು , msf ಜಿಲ್ಲಾಧ್ಯಕ್ಷರಾದ ಝುಲ್ಛಿಕರ್ ಅಲೀ ಎಚ್.ಕಲ್ಲು , ಪ್ರಧಾನ ಕಾರ್ಯದರ್ಶಿ ಅನಸ್ ಗೂಡಿನಬಳಿ , ಕೋಶಾಧಿಕಾರಿ ಇಶಾನ್ ಸವಣೂರು , ವರ್ಕಿಂಗ್ ಕಾರ್ಯದರ್ಶಿ ಸಫಾಹತ್ ಬೆಂಗರೆ , STU ರಾಷ್ಟ್ರೀಯ ಸಮಿತಿ ಉಪಾಧ್ಯಕ್ಷರಾದ ಶಬೀರ್ ತಲಪಾಡಿ ಮುಂತಾದವರು ಸಂತಾಪ ಸೂಚಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.