(www.vknews.in) : ಪಿ.ಎ.ತಾಂತ್ರಿಕ ವಿದ್ಯಾಲಯದ ಪದವಿ ಪ್ರಧಾನ ಸಮಾರಂಭವು ಆಗೋಸ್ಟ್ 10 ರಂದು ಪ್ರಾಂಶುಪಾಲರ ನೇತೃತ್ವದ ಶೈಕ್ಷಣಿಕ ಮೆರವಣಿಗೆಯೊಂದಿಗೆ ಕಾಲೇಜಿನ ಸಭಾಂಗಣದಲ್ಲಿ ಪ್ರಾರಂಭವಾಯಿತು,ಯ.ಶ್ರೀ ರಿಜ್ವಾನ್ ಎಸ್ ಅವರು ಪ್ರಾರ್ಥಿಸಿದರು, ಸಹ ವಿದ್ವತ್ ಚಟುವಟಿಕೆಗಳ ಸಂಯೋಜಕರಾದ ಶ್ರೀ ಇಸ್ಮಾಯಿಲ್ ಶಾಫಿ ಎ. ಎಂ. ಸ್ವಾಗತ ಭಾಷಣ ಮಾಡಿದರು.
ಗೌರವಾನ್ವಿತ ಅತಿಥಿಗಳಾದ ಡಾ.ಶಿವಕುಮಾರ್ ಎಚ್.ಆರ್, ವಿಶೇಷ ಅಧಿಕಾರಿ, ಮಂಗಳೂರು ವಿಭಾಗ, ವಿಟಿಯು ಬೆಳಗಾವಿ ಮತ್ತು ಶ್ರೀ ಒಮರ್ ಸಿನಾಫ್ ಅಧ್ಯಕ್ಷರು, ಪಿ.ವಿ.ಎಸ್ ನೋಲ್ವುಡ್, ಯು. ಎಸ್.ಎ ಮತ್ತು ವ್ಯವಸ್ಥಾಪಕ ನಿರ್ದೇಶಕ, ಪಿ. ವಿ.ಎಸ್ ಕೆಮಿಕಲ್ಸ್ ಬೆಲ್ಜಿಯಂ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದರು. ಮುಖ್ಯ ಅತಿಥಿಗಳು ತಮ್ಮ ಪ್ರಧಾನ ಭಾಷಣದಲ್ಲಿ ಜೀವನಪರ್ಯಂತ ಕಲಿಕೆ, ಹೊಂದಾಣಿಕೆ, ಆವಿಷ್ಕಾರ, ಸಾಮಾಜಿಕ ಹೊಣೆಗಾರಿಕೆಯ ಮಹತ್ವವನ್ನು ಹಾಗೂ ರಾಷ್ಟ್ರದ ಏಳಿಗೆಯಲ್ಲಿ ಪದವೀಧರರ ಪಾತ್ರ ಕುರಿತು ಮಾತನಾಡಿದರು. ಮ್ಯಾನೇಜಿಂಗ್ ಟ್ರಸ್ಟಿ, ಶ್ರೀ ಅಬ್ದುಲ್ಲಾ ಇಬ್ರಾಹಿಂ ಎಲ್ಲಾ ಪದವೀಧರರಿಗೆ ಶುಭ ಕೋರಿದರು.
ಡಾಕ್ಟರೇಟ್ ಮತ್ತು ಇಂಜಿನಿಯರಿಂಗ್, ಶೈಕ್ಷಣಿಕ ಪದವಿಗಳನ್ನು ಪಡೆದ ಎಲ್ಲರಿಗೂ ಪದವಿ ಪ್ರಧಾನ ಮಾಡಲಾಯಿತು ಹಾಗೂ ಶೈಕ್ಷಣಿಕ ವರ್ಷದಲ್ಲಿ ಅತ್ಯುತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ ಪ್ರಶಸ್ತಿಗಳನ್ನು ನೀಡಿ ಗೌರವಿಸಲಾಯಿತು. ಕಾಲೇಜಿನ ಪ್ರಾಂಶುಪಾಲರಾದ ಡಾ. ರಮೀಝ್ ಎಂ. ಕೆ ಪದವೀಧರ ಪ್ರಮಾಣ ವಚನವನ್ನು ಭೋದಿಸಿದರು. ಉಪ ಪ್ರಾಂಶುಪಾಲರಾದ ಡಾ. ಶರ್ಮಿಳಾ ಕುಮಾರಿ ಎಂ. ವಂದಿಸಿದರು.
ಕಾರ್ಯಕ್ರಮದಲ್ಲಿ ಶ್ರೀ ಅಹಮದ್ ಕುಟ್ಟಿ, ಹಣಕಾಸು ಅಧಿಕಾರಿ, ಶ್ರೀ ಶರ್ಫುದ್ದೀನ್, ಎ.ಜಿ.ಎಮ್, ಪಿ.ಎ.ವಿದ್ಯಾಸಂಸ್ಥೆ ಮಂಗಳೂರು, ಎಂ.ಬಿ.ಎ ವಿಭಾಗದ ನಿರ್ದೇಶಕ ಹಾಗೂ ಡೀನ್, ವಿದ್ಯಾರ್ಥಿ ಕಲ್ಯಾಣ ಅಧಿಕಾರಿ ಡಾ.ಸಯ್ಯದ್ ಅಮೀನ್, ಬಯೋಟೆಕ್ನಾಲಜಿ ವಿಭಾಗದ ಮುಖ್ಯಸ್ಥ ಡಾ. ಕೃಷ್ಣಪ್ರಸಾದ, ಸಿವಿಲ್ ಎಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಡಾ. ಪಾಲಾಕ್ಷಪ್ಪ, ಎಲೆಕ್ಟ್ರಾನಿಕ್ಸ್ ಆಂಡ್ ಕಮ್ಯೂನಿಕೇಶನ್ ವಿಭಾಗದ ಉಸ್ತುವಾರಿ ಮುಖ್ಯಸ್ಥ ಪ್ರೊ. ಮೊಹಮ್ಮದ್ ಹುಸೈನ್ , ಎಲೆಕ್ಟ್ರಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥ ಪ್ರೋ. ಜೋನ್ ವಾಲ್ಡರ್, ಪ್ರಥಮ ವರ್ಷ ವಿಭಾಗದ ಮುಖ್ಯಸ್ಥ ಪ್ರೋ. ಅಬ್ದುಲ್ ಮಜೀದ್, ಹಾಗೂ ಸಮೂಹ ಸಂಸ್ಥೆಗಳ ಪ್ರಾಂಶುಪಾಲರು, ಸಿಬ್ಬಂದಿ ವರ್ಗ ಮತ್ತು ಪೋಷಕರು ಭಾಗವಹಿಸಿದ್ದರು. ಪ್ರೊ.ಫಾತಿಮತ್ ರೈಹಾನ್ ಮತ್ತು ಪ್ರೊ.ಶಮಾ ಹಕೀಂ ಸಮಾರಂಭವನ್ನು ನಿರೂಪಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.