ಕುಂದಾಪುರ(www.vknews.in):ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಕೋಡಿ ಸೆಕ್ಟರ್ನ ನೂತನ ಕಚೇರಿಯನ್ನು ರಾಜ್ಯಾಧ್ಯಕ್ಷ ಹಾಫಿಳ್ ಸುಫಿಯಾನ್ ಸಖಾಫಿ ಅಲ್-ಹಿಕಮಿ ಉಸ್ತಾದರು ಉದ್ಘಾಟಿಸಿದರು. 78ನೇ ಸ್ವಾತಂತ್ರ್ಯ ಪ್ರಯುಕ್ತ ಕೋಡಿ ಸೆಕ್ಟರ್ ಹಮ್ಮಿಕೊಂಡ ಆಝಾದಿ ರ್ಯಾಲಿ ಬದ್ರಿಯಾ ಜುಮಾ ಮಸೀದಿ ಕೋಟೆಯಿಂದ ಆರಂಭಗೊಂಡು ಎಂ.ಕೋಡಿ ಸರ್ಕಲ್ ತನಕ ಕಾಲ್ನಡಿಗೆಯ ಮೂಲಕ ಆಝಾದಿ ಸಂದೇಶಗಳನ್ನು ನೀಡುತ್ತಾ ಊರಿನ ಹಿರಿಯ, ಕಿರಿಯರ ಸಹಕಾರದಿಂದ ಯಶಸ್ವಿಯಾಗಿ ನಡೆಯಿತು.ಕಾರ್ಯಕ್ರಮದ ಆರಂಭದಲ್ಲಿ ಸಿದ್ದೀಖ್ ಫಾಳಿಲಿ ಅಲ್-ಹಿಕಮಿ ಬೋಳಂತ್ತೂರು ದುಆ ಗೈದರು.ಕೋಡಿ ಸೆಕ್ಟರ್ ಕಾರ್ಯದರ್ಶಿ ಸುಹೈದ್ ಕೋಡಿ ಸ್ವಾಗತ ಗೈದರು. ಇಸ್ಮಾಯಿಲ್ ಸಖಾಫಿ ಅಲ್-ಹಿಕಮಿ ಮಳಲಿ ಉದ್ಘಾಟನೆ ಮಾಡಿದರು.
ಕರ್ನಾಟಕ ರಾಜ್ಯ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ಇದರ ರಾಜ್ಯಾಧ್ಯಕ್ಷರಾದ ಹಾಫಿಳ್ ಸುಫಿಯಾನ್ ಸಖಾಫಿ ಅಲ್-ಹಿಕಮಿ ಗಂಗಾವತಿ ಸೌಹಾರ್ದತೆಯಿಂದ ಮಾತ್ರ ದೇಶ ಬಲಿಷ್ಠ ಗೊಳಿಸಲು ಸಾಧ್ಯ.ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಬೇಕು ವಿನಹ ಆಯುಧಗಳಲ್ಲ.ಈ ದೇಶದ ಆತ್ಮವಾದ ಸಂವಿಧಾನದ ವಿರುದ್ಧ ಎಷ್ಟೇ ಪ್ರಭಾವಿ ಶಕ್ತಿಗಳು ಬಂದರು ಅವರೆದುರು ಸೆಟೆದು ನಿಲ್ಲುವುದಕ್ಕೆ ಎಂದೂ ಹಿಂಜರಿಯುವವರಲ್ಲ ಈ ಭಾರತೀಯರು. ಕೇವಲ ಜಾತಿ ಧರ್ಮದ ಹೆಸರಲ್ಲಿ ಕಚ್ಚಾಡಿ ನಮ್ಮ ರಾಷ್ಟ್ರದ ಸೊಬಗನ್ನು ನಾಶಗೊಳಿಸುವ ಕಾರ್ಯವನ್ನು ಮಾಡಬೇಡಿ ಎಂದು ಎಚ್ಚರಿಕೆಯ ಜೊತೆಯಲ್ಲಿ ಆಝಾದಿ ಸಂದೇಶಗಳನ್ನು ನೀಡುವ ಮೂಲಕ ಮುಖ್ಯ ಪ್ರಭಾಷಣ ಗೈದರು.
ಆಝಾದಿ ರ್ಯಾಲಿಯಂತಹ ಕಾರ್ಯಕ್ರಮಗಳ ಮೂಲಕ ಮಾತ್ರ ನಮ್ಮ ಪೂರ್ವ ಕಾಲದ ಸ್ವಾತಂತ್ರ್ಯ ಹೋರಾಟಗಾರ ಇತಿಹಾಸವನ್ನು ಯುವ ತಲೆಮಾರಿಗೆ ನೆನಪಿಸಲು ಸಾಧ್ಯವೆಂದು ಕೋಡಿ ಸೆಕ್ಟರ್ ಕೋಶಾಧಿಕಾರಿ ಹರ್ಶದ್ ರವರು ಸಂದೇಶ ಭಾಷಣದಲ್ಲಿ ಹೇಳಿದರು. ಸ್ವಾತಂತ್ರ್ಯ ಭಾರತಕ್ಕೆ ಕಂಟಕವಾಗಿರುವ ಅಮಲು ಪದಾರ್ಥಗಳನ್ನು ಸಂಪೂರ್ಣವಾಗಿ ನಿಷೇಧಿಸುವ ಮೂಲಕ ದೇಶದ ಸ್ವಸ್ಥತೆ ಕಾಪಾಡುವ ಜವಾಬ್ದಾರಿ ನಮ್ಮ ಮೇಲಿದೆ ಎಂದು ಕೋಡಿ ಸೆಕ್ಟರ್ ಅಧ್ಯಕ್ಷರು ಟಿ.ಎಸ್ ಹಾಶಿಮಿ ಪ್ರಾಸ್ತಾವಿಕ ಭಾಷಣದಲ್ಲಿ ತಿಳಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.