ಪುತ್ತೂರು(www.vknews.in): ಸಮಸ್ತ ಕೇರಳ ಜಂ ಇಯ್ಯತುಲ್ ಉಲಮಾ ಪುತ್ತೂರು ತಾಲೂಕು ಸಭೆಯು ಅಧ್ಯಕ್ಷರಾದ ಅಸ್ಸಯ್ಯಿದ್ ಅಹ್ಮದ್ ಪೂಕೋಯ ತಂಙಳ್ ರವರ ಅಧ್ಯಕ್ಷತೆಯಲ್ಲಿ ಬದ್ರಿಯಾ ಮಸೀದಿ ಮದ್ರಸಾ ಹಾಲ್ ನಲ್ಲಿ ನಡೆಯಿತು. ಇತ್ತೀಚೆಗೆ ಯುವಕರು ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದು ಈ ಬಗ್ಗೆ ಮೊಹಲ್ಲಾ ವ್ಯಾಪ್ತಿಯಲ್ಲಿ ಪರಿಹಾರ ಮಾರ್ಗ ಕಂಡುಹಿಡಿಯಬೇಕು.ಅದೇ ರೀತಿ ಆತ್ಮಹತ್ಯೆ ವಿರುದ್ಧ ಉಲಮಾ ಗಳು ಜನ ಜಾಗೃತಿ ನಡೆಸಬೇಕೆಂದು ಕರೆ ನೀಡಲಾಯಿತು.ಜಂ ಇಯ್ಯತುಲ್ ಉಲಮಾ ತಾಲೂಕು ಉಪಾಧ್ಯಕ್ಷರಾದ ಉಮರ್ ದಾರಿಮಿ ಸಾಲ್ಮರ ಉದ್ಘಾಟನೆಗೈದರು. ಇತ್ತೀಚೆಗೆ ನಿಧನರಾದ ಸಮಸ್ತದ ಉಲಮಾ ಗಳಿಗೆ ತಹ್ಲೀಲ್ ಸಮರ್ಪಣೆ ಮತ್ತು ವಯನಾಡ್ ಸಂತ್ರಸ್ತರಿಗೆ ಪ್ರತ್ಯೇಕ ದುಆ ನಡೆಸಲಾಯಿತು.ಸಭೆಯಲ್ಲಿ ಆಗಸ್ಟ್ 19 ರಂದು ನಡೆಯಲಿರುವ ಮಾಡನ್ನೂರು ನೂರುಲ್ ಹುದಾ ಇಸ್ಲಾಮಿಕ್ ಅಕಾಡೆಮಿಯ ದಶ ವಾರ್ಷಿಕ ಉದ್ಘಾಟನಾ ಸಮಾರಂಭವನ್ನು ಯಶಸ್ವಿಗೊಳಿಸಲು ಕರೆ ನೀಡಲಾಯಿತು. ಬದ್ರಿಯಾ ಮಸೀದಿ ಖತೀಬ್ ಅಬ್ಬಾಸ್ ಮದನಿ,ತಾಲೂಕು ಜಂ ಇಯ್ಯತುಲ್ ಉಲಮಾ ಕೋಶಾಧಿಕಾರಿ ಉಮರ್ ಮುಸ್ಲಿಯಾರ್ ನಂಜೆ,ಉಮರ್ ಫೈಝಿ ಸಾಲ್ಮರ,ಸಿರಾಜುದ್ದೀನ್ ಫೈಝಿ ಬಪ್ಪಳಿಗೆ, ಇರ್ಷಾದ್ ಫೈಝಿ ಮುಕ್ವೆ,ಹಸನ್ ಬಾಖವಿ ವಾಲೆಮುಂಡೋವು, ಬದ್ರುದ್ದೀನ್ ರಹ್ಮಾನಿ ಕೂಡುರಸ್ತೆ,ಯೂಸುಫ್ ಸಿದ್ದೀಕ್ ಫೈಝಿ ಮುಕ್ರಂಪಾಡಿ, ಸುಲೈಮಾನ್ ದಾರಿಮಿ ಮಂಜ,ಅಶ್ರಫ್ ರಹ್ಮಾನಿ ಮೊಟ್ಟೆತ್ತಡ್ಕ,ಅಯ್ಯೂಬ್ ವಹಬಿ ಬೆಟ್ಟಂಪಾಡಿ,ಇಬ್ರಾಹಿಂ ದಾರಿಮಿ ಮಿತ್ತೂರು,ನಝೀರ್ ಅಝ್ಹರಿ ಪಾಳ್ಯತ್ತಡ್ಕ, ಗಫೂರ್ ಅಶ್ಶಾಫಿ ಬಡಕೋಡಿ,ಅಬ್ದುಲ್ ಲತೀಫ್ ಹನೀಫಿ ಸಂಟ್ಯಾರ್,ಅಬ್ದುಲ್ ರಶೀದ್ ರಹ್ಮಾನಿ ಪರ್ಲಡ್ಕ,ಖಾಲಿದ್ ಫೈಝಿ,ಮುಫತ್ತಿಷ್ ಉಮರ್ ದಾರಿಮಿ,ಅಶ್ರಫ್ ದಾರಿಮಿ ಸಂಟ್ಯಾರ್,ನಾಸಿರ್ ಫೈಝಿ ರೆಂಜಲಾಡಿ,ಆಸಿಫ್ ಫೈಝಿ, ರಫೀಕ್ ಫೈಝಿ ಪರ್ಪುಂಜ, ಅಬ್ಬಾಸ್ ದಾರಿಮಿ ಕೆಲಿಂಜ,ಆಸಿಫ್ ಅಝ್ಹರಿ ಇರ್ದೆ,ಅಬ್ದುಲ್ ಜಲೀಲ್ ಅರ್ಶದಿ ನೆಟ್ಟಣ ಭಾಗವಹಿಸಿದ್ದರು. ತಾಲೂಕು ಜಂ ಇಯ್ಯತುಲ್ ಉಲಮಾ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ದಾರಿಮಿ ಸಂಪ್ಯ ಸ್ವಾಗತಿಸಿ ಕರೀಂ ದಾರಿಮಿ ಕುಂಬ್ರ ಧನ್ಯವಾದಗೈದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.