ಜೆದ್ದಾ(www.Vknews.in): ಸೌದಿ ಅರೇಬಿಯಾದಲ್ಲಿ ನಗದು ರೂಪದಲ್ಲಿ ದೇಣಿಗೆ ಸ್ವೀಕರಿಸಿದರೆ ಕಠಿಣ ಶಿಕ್ಷೆಯ ಜೊತೆಗೆ ದಂಡ ವಿಧಿಸಲಾಗುತ್ತದೆ. ಸೌದಿ ಕ್ಯಾಬಿನೆಟ್ ಅನುಮೋದಿಸಿದ ದೇಣಿಗೆ ಸಂಗ್ರಹ ಕಾಯ್ದೆ, ಅಕ್ರಮವಾಗಿ ದೇಣಿಗೆ ಸಂಗ್ರಹಿಸುವವರಿಗೆ ಕಠಿಣ ದಂಡ ವಿಧಿಸಲು ಅವಕಾಶ ನೀಡುತ್ತದೆ. ಅಕ್ರಮ ದೇಣಿಗೆ ನೀಡುವವರಿಗೆ 500,000 ರಿಯಾಲ್ ವರೆಗೆ ದಂಡ ಮತ್ತು ಎರಡು ವರ್ಷಗಳವರೆಗೆ ಜೈಲು ಶಿಕ್ಷೆ ವಿಧಿಸಬಹುದು. ಕಾನೂನುಬಾಹಿರವಾಗಿ ದೇಣಿಗೆ ಸಂಗ್ರಹಿಸುವ ಸ್ವಯಂಸೇವಾ ಸಂಸ್ಥೆಗಳು ಮತ್ತು ಪ್ರತಿಷ್ಠಾನಗಳು ಹಾಗೂ ವ್ಯಕ್ತಿಗಳಿಹೆ 500,000 ರಿಯಾಲ್ ದಂಡ ವಿಧಿಸಲಾಗುವುದು. ಲಾಭರಹಿತ ವಲಯದ ರಾಷ್ಟ್ರೀಯ ಕೇಂದ್ರದ ಪ್ರಕಾರ, ಕಾನೂನನ್ನು ಉಲ್ಲಂಘಿಸುವ ವಿದೇಶಿಯರನ್ನು ಅವರ ಶಿಕ್ಷೆಯನ್ನು ಪೂರ್ಣಗೊಳಿಸಿದ ನಂತರ ಸೌದಿ ಅರೇಬಿಯಾದಿಂದ ಗಡೀಪಾರು ಮಾಡಲಾಗುವುದೆಂದು ಸಚಿವಾಲಯ ಎಚ್ಚರಿಸಿದೆ.
ಸೌದಿ ಅರೇಬಿಯಾದಲ್ಲಿ, ದೇಣಿಗೆ ಸಂಗ್ರಹಿಸಲು ಪರವಾನಗಿ ಹೊಂದಿರುವವರಿಗೆ ಮಾತ್ರ ಅವಕಾಶವಿದೆ ಮತ್ತು ಸ್ವಯಂಸೇವಾ ಸಂಸ್ಥೆಗಳು, ಪ್ರತಿಷ್ಠಾನಗಳು ಮತ್ತು ಲಾಭರಹಿತ ವಲಯದ ಸಂಸ್ಥೆಗಳು ನಗದು ರೂಪದಲ್ಲಿ ದೇಣಿಗೆ ಸ್ವೀಕರಿಸುವುದನ್ನು ನಿಷೇಧಿಸಲಾಗಿದೆ. ಖಾತೆಗಳಿಗೆ ನೇರವಾಗಿ ಮಾಡಿದ ಠೇವಣಿಗಳ ಮೂಲಕ ಮಾತ್ರ ದೇಣಿಗೆಗಳನ್ನು ಸ್ವೀಕರಿಸಲು ಅವಕಾಶವಿದೆ. ರಾಷ್ಟ್ರೀಯ ಲಾಭರಹಿತ ವಲಯದ ಕೇಂದ್ರದಿಂದ ಅನುಮತಿ ಪಡೆಯದೆ ಸ್ವಯಂಸೇವಾ ಸಂಸ್ಥೆಗಳು ಮತ್ತು ಪ್ರತಿಷ್ಠಾನಗಳು ವಿದೇಶದಿಂದ ದೇಣಿಗೆ ಸ್ವೀಕರಿಸುವುದನ್ನು ನಿಷೇಧಿಸಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.