ದುಬೈ(www.Vknews.in):ಇಸ್ಲಾಮಿನ ಮೂರನೇ ಪವಿತ್ರ ಮಸೀದಿಯಾದ ಮಸ್ಜಿದ್ ಅಲ್-ಅಕ್ಸಾದಲ್ಲಿ ಸಾಧ್ಯವಾದರೆ ಸಿನಗಾಗ್ ಯಹೂದಿಯರ ಪ್ರಾರ್ಥನ ಸ್ಥಳ) ನಿರ್ಮಿಸಲಾಗುವುದು ಎಂಬ ಇಸ್ರೇಲ್ನ ರಾಷ್ಟ್ರೀಯ ಭದ್ರತಾ ಸಚಿವ ಇಟಾಮರ್ ಬೆಂಗುಯಿರ್ ಅವರ ಹೇಳಿಕೆಯನ್ನು ಸೌದಿ ಅರೇಬಿಯಾ ತೀವೃವಾಗಿ ಖಂಡಿಸಿದೆ. ಅಲ್-ಅಕ್ಸಾ ಮಸೀದಿಯ ಐತಿಹಾಸಿಕ ಮತ್ತು ಕಾನೂನು ಸ್ಥಾನಮಾನವನ್ನು ಗೌರವಿಸುವ ಅಗತ್ಯವನ್ನು ಒತ್ತಿಹೇಳುವ ಮೂಲಕ ಈ ಉಗ್ರಗಾಮಿ ಮತ್ತು ಪ್ರಚೋದನಕಾರಿ ಹೇಳಿಕೆಯನ್ನು ತಿರಸ್ಕರಿಸುವುದಾಗಿ ಸೌದಿ ಅರೇಬಿಯಾ ದೃಢಪಡಿಸಿದೆ.
ಫೆಲೆಸ್ತೀನ್ ಜನರು ಎದುರಿಸುತ್ತಿರುವ ಮಾನವೀಯ ದುರಂತವನ್ನು ಕೊನೆಗೊಳಿಸುವಲ್ಲಿ ಅಂತರರಾಷ್ಟ್ರೀಯ ಸಮುದಾಯವು ತನ್ನ ಜವಾಬ್ದಾರಿಗಳನ್ನು ತೆಗೆದುಕೊಳ್ಳಬೇಕು ಎಂದು ಸೌದಿ ಅರೇಬಿಯಾ ತನ್ನ ಕರೆಯನ್ನು ಪುನರುಚ್ಚರಿಸಿತು. ಅಂತರರಾಷ್ಟ್ರೀಯ ಕಾನೂನುಗಳು, ಮಾನದಂಡಗಳು ಮತ್ತು ನಿರ್ಣಯಗಳ ನಿರಂತರ ಉಲ್ಲಂಘನೆಗಳಿಗೆ ಇಸ್ರೇಲಿ ಅಧಿಕಾರಿಗಳನ್ನು ಹೊಣೆಗಾರರನ್ನಾಗಿ ಮಾಡಲು ದೃಢವಾದ ಕಾರ್ಯವಿಧಾನಗಳನ್ನು ಸಕ್ರಿಯಗೊಳಿಸಲು ಸಚಿವಾಲಯದ ಹೇಳಿಕೆ ಕರೆ ನೀಡಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.